"ಗೋಲ್ಡನ್ ಗ್ಯಾಂಗ್ "(Golden Gang) ಜೀ ಕನ್ನಡ(Zee Kannada) ವಾಹಿನಿಯಲ್ಲಿ ಆರಂಭವಾಗಿರುವ ಹೊಚ್ಚ ಹೊಸ ರಿಯಾಲಿಟಿ ಶೋ(Reality Show) . ಸ್ನೇಹಿತರಿಂದ ,ಸ್ನೇಹಿತರಿಗಾಗಿ , ಸ್ನೇಹಿತರಿಗೋಸ್ಕರವೇ ಸಿದ್ಧಗೊಂಡಿರುವ ಈ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಸಾರಥಿಯಾಗಿದ್ದಾರೆ. ಇದೀಗ 2022 ರ ಹೊಸ ವರ್ಷಾರಂಭದಲ್ಲಿ " ಗೋಲ್ಡನ್ ಗ್ಯಾಂಗ್ ಪ್ರೀ ಲಾಂಚ್ "(Golden Gang Pre Launch) ಈವೆಂಟ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿದ್ದು ಜನವರಿ 2 , ಭಾನುವಾರ ರಾತ್ರಿ 7. 30 ಕ್ಕೆ ಪ್ರಸಾರವಾಗುತ್ತಿದೆ . ಸದ್ಯ ಬಿಡುಗಡೆಯಾಗಿರುವ ಪ್ರೋಮೋ(Promo)ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವೀಕ್ಷಕರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಜೀ ಕನ್ನಡ ಮನರಂಜನೆಯ ಮಹಾನಿಲ್ದಾಣವಾಗಿ ರೂಪುಗೊಂಡಿದೆ . ಬಹು ದಿನಗಳ ನಂತರ ನಿರೂಪಕನಾಗಿ ಕಿರುತೆರೆ(Small Screen)ಗೆ ಮರಳಿರುವ ಕರುನಾಡಿನ ಮನೆಮಗ , ಮಳೆ ಹುಡುಗ ಗಣೇಶ್ ಈ ಶೋನ ಪ್ರಮುಖ ಆಕರ್ಷಣೆಯಾಗಿದ್ದಾರೆ . ಜೀ ಕುಟುಂಬದ ಕಲಾವಿದರ ಜೊತೆಗೆ ಹೆಜ್ಜೆ ಹಾಕಿ ಹಾಡಿ, ಆಡಿ , ನಲಿದು ಮನರಂಜಿಸಿರುವ ಗೋಲ್ಡನ್ ಸ್ಟಾರ್ ತನ್ನ ನಿರೂಪಣೆಯ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.
ಅದ್ಧೂರಿಯಾಗಿ ನಡೆದ ಪ್ರೀ ಲಾಂಚ್ ಈವೆಂಟ್!
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರೊಡನೆ ನಿರೂಪಣೆ ಮಾಡಿದ ಗಣೇಶ್ ಮೊದಲ ಸಿನಿಮಾ ಚೆಲ್ಲಾಟದ ಸಮಯದಿಂದಲೂ ಇರುವ ಅನುಶ್ರೀ ಅವರ ಪರಿಚಯವನ್ನು ನೆನಪಿಸಿಕೊಂಡರು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ , ಸಿನಿಕವಿ ಯೋಗರಾಜ್ ಭಟ್ ಮುಂಗಾರುಮಳೆಯ ಆದಿನಗಳನ್ನು ಜ್ಞಾಪಿಸಿಕೊಂಡು ಗಣೇಶ್ ಜೊತೆಗಿನ ತರಲೆ ದಿನಗಳನ್ನು ಮೆಲುಕುಹಾಕಿದರು. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಗೋಲ್ಡನ್ ಗ್ಯಾಂಗ್ ಶೀರ್ಷಿಕೆ ಗೀತೆಗೆ ವಿಜಯ್ ಪ್ರಕಾಶ್ ಅವರು ಧ್ವನಿಯಾಗಿದ್ದರೆ ಭಟ್ಟರು ಸಾಹಿತ್ಯ ರಚಿಸಿದ್ದಾರೆ. ಇದೀಗ ಈ ಫ್ರೆಂಡ್ಸ್ ಆಂಥೆಮ್ ಹಾಡು ಬಿಡುಗಡೆಯಾಗಿದ್ದು ಭಾರೀ ಮೆಚ್ಚುಗೆಗಳಿಸುತ್ತಿದೆ.
ಇದನ್ನು ಓದಿ: ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್ ಕೊಡ್ಬೇಕು ಪ್ರೊಡ್ಯೂಸರ್: ಹಿಂಗಾದ್ರೆ... ಮುಂದೆ ಹೆಂಗೆ ಸ್ವಾಮಿ!
ಸ್ನೇಹಿತರಿಗೋಸ್ಕರವೇ ಹೊಸ ರಿಯಾಲಿಟಿ ಶೋ!
ಹಿರಿತೆರೆ , ಕಿರುತೆರೆ , ರಾಜಕೀಯ , ಕ್ರೀಡಾವಲಯ ಹೀಗೆ ವಿವಿಧ ಕ್ಷೇತ್ರಗಳ ಸಾಧಕರು ಅವರ ಸ್ನೇಹಿತರುಗಳು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ ಅಷ್ಟೇ ಅಲ್ಲದೆ ವೀಕ್ಷಕರಿಗೆ ತಮ್ಮ ಬಾಲ್ಯ , ಯೌವ್ವನದ ದಿನಗಳನ್ನು , ತಾವಾಡಿದ ಆಟ - ತುಂಟಾಟಗಳನ್ನು ನೆನಪಿಸಲಿದೆ ಎನ್ನುತ್ತಿದೆ ಜೀ ಕನ್ನಡ ನಮ್ಮೆಲ್ಲರ " ಗೋಲ್ಡನ್ ಗ್ಯಾಂಗ್ " ಗಳ ಜೊತೆಗೆ ಕಾರ್ಯಕ್ರಮ ನೋಡೋಣ ಸ್ನೇಹವನ್ನು ಸಂಭ್ರಮಿಸೋಣ.ಗೋಲ್ಡನ್ ಸ್ಟಾರ್ ಗಣೇಶ್ಗೆ ಕಿರುತೆರೆ ಹೊಸದೇನಲ್ಲಾ. ಇಲ್ಲಿಂದಲೇ ಗಣೇಶ್ ವೃತ್ತಿ ಜೀವನ ಆರಂಭ ಆಗಿತ್ತು. ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗಲೂ ಆಗಾಗ ಕಿರು ತೆರೆಯಲ್ಲಿ ರಿಯಾಲಿಟಿ ಶೋ ಮೂಲಕ ಜನರ ರಂಜಿಸಿದ್ದಾರೆ.
ಇದನ್ನು ಓದಿ : A.R. Rahman ಪುತ್ರಿ ನಿಶ್ಚಿತಾರ್ಥ, ಶೀಘ್ರದಲ್ಲೇ ರಿಯಾಸ್ದೀನ್ ಶೇಖ್ ಮೊಹಮ್ಮದ್ ಜೊತೆ ಖತೀಜಾ ಶಾದಿ!
ಹಳೆ ನೆನಪುಗಳನ್ನು ಮೆಲುಕು ಹಾಕುವ ಶೋ!
ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಆರಂಭವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಶೋ ನಿರೂಪಣೆ ಮಾಡಲಿದ್ದು, ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಯಾಕಂದ್ರೆ, ಹಳೆ ನೆನಪುಗಳನ್ನು ಮೆಲುಕು ಹಾಕುವ ಶೋ.. ಹಾಗಂತ ಟಾಕ್ ಶೋ ಅಲ್ಲ, ಇದೊಂದು ಪಕ್ಕಾ ಗೇಮ್ ಶೋ. ಜೀ ಕನ್ನಡ ಜೊತೆ ಹೊಸ ಸಂಬಂಧವನ್ನು ಸಂಭ್ರಮಿಸಲು ಸಜ್ಜಾಗಿರುವ ಗೋಲ್ಡನ್ ಸ್ಟಾರ್ 'ಗೋಲ್ಡನ್ ಗ್ಯಾಂಗ್ ' ಎಂಬ ಅಪರೂಪದ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನತೆಯನ್ನು ಹೊಸ ಲೋಕಕ್ಕೆ ಕರೆದೊಯ್ಯಲಿದೆ. 'ಗೋಲ್ಡನ್ ಗ್ಯಾಂಗ್' ರಿಯಾಲಿಟಿ ಶೋನಲ್ಲಿ ಬಾಲ್ಯದಲ್ಲಿದ್ದ ಚಡ್ಡಿ ಗ್ಯಾಂಗ್ , ತರ್ಲೆ ಗ್ಯಾಂಗ್ , ಪೋಲಿ ಗ್ಯಾಂಗ್ ಪರಿಚಯಿಸುವ ವಿನೂತನ ಶೋ. ಬಳಿಕ ಕಾಲೇಜಿಗೆ ಹೋದಾಗ ಬಂಕ್ ಗ್ಯಾಂಗ್ , ಲಾಸ್ಟ್ ಬೆಂಚ್ ಗ್ಯಾಂಗ್ ಒಂದೆರಡು ಗ್ಯಾಂಗ್ಗಳಲ್ಲ. ಈ ಎಲ್ಲಾ ಗ್ಯಾಂಗ್ಗಳನ್ನು ಒಂದೇ ವೇದಿಕೆ ಮೇಲೆ ಸೇರಿಸಿ, ಮಸ್ತ್ ಆಗಿರುವ ಆಟಗಳನ್ನು ಆಡಿಸುತ್ತಾ, ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ವಿನೂತನ ಶೋ ಗೋಲ್ಡನ್ ಗ್ಯಾಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ