• Home
  • »
  • News
  • »
  • entertainment
  • »
  • Triple Riding Movie Review: ಮೂವರು ಹೀರೋಯಿನ್ಸ್ ಜೊತೆ ಗಣೇಶ್ ರೊಮ್ಯಾನ್ಸ್! ಉಳಿಯೋದ್ಯಾರು?

Triple Riding Movie Review: ಮೂವರು ಹೀರೋಯಿನ್ಸ್ ಜೊತೆ ಗಣೇಶ್ ರೊಮ್ಯಾನ್ಸ್! ಉಳಿಯೋದ್ಯಾರು?

ತ್ರಿಬಲ್ ರೈಡಿಂಗ್

ತ್ರಿಬಲ್ ರೈಡಿಂಗ್

ಗೋಲ್ಡನ್ ಸ್ಟಾರ್ ಗಣೇಶ್ ಅವರ ಲವ್​ಸ್ಟೋರಿ ಅಂದ್ರೆ ಸುಮ್ನೇನಾ? ಈಗ ತ್ರಿಬಲ್ ರೈಡಿಂಗ್ ಮೂಲಕ ಮತ್ತೊಂದು ಲವ್​ಸ್ಟೋರಿಗೆ ಸಾಕ್ಷಿಯಾಗಿದ್ದಾರೆ ಗಣೇಶ್ ಫ್ಯಾನ್ಸ್, ಹೇಗಿದೆ ಸಿನಿಮಾ?

  • Share this:

ಗೋಲ್ಡನ್ ಸ್ಟಾರ್ ಗಣೇಶ್ (Golden star Ganesh) ಅವರನ್ನು ಲವರ್ ಬಾಯ್  (Lover Boy) ಲುಕ್​​ನಲ್ಲಿ ನೋಡೋದು ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸ ವಿಚಾರವಲ್ಲ. ಮುಂಗಾರು ಮಳೆ (Mungaru Male) ಹುಡುಗ ಈಗ ಮತ್ತೆ ಲವ್ ಬಾಯ್ ಆಗಿ ತ್ರಿಬಲ್ ರೈಡಿಂಗ್ (Triple Riding) ಹೊರಟಿದ್ದು ಸಿನಿಮಾ ರಿಲೀಸ್ ಆಗಿದೆ. ರೈಡ್ ಶುರುವಾಗಿದೆ. ಮೂವರು ಬ್ಯೂಟಿಫುಲ್ ನಟಿಯರ ಜೊತೆ ಗಣೇಶ್ ರೊಮ್ಯಾನ್ಸ್ ಮಾಡಿದ್ದು ಈ ಸಿನಿಮಾ ಕಾಮಿಡಿ ಸಿನಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ. ಸಿನಿಮಾ ಬಗ್ಗೆ ಹೇಳುವುದಾದರೆ ಲವ್ ಕಂ ಕಾಮಿಡಿ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡೋಕೆ ಟ್ರೈ ಮಾಡಿದರೂ ಕಾಮಿಡಿ ಒಂಚೂರೂ ಮೇಲಾಗಿ ಲವ್​ಸ್ಟೋರಿ ಸ್ವಲ್ಪವೇ ಸ್ವಲ್ಪ ಡಲ್ ಹೊಡೆದಿದೆ. ಆದರೆ ಗಣೇಶ್ ಅವರ ಜೊತೆ ಮೂವರು ನಾಯಕಿರು ಅಂದ್ರೆ ಸುಮ್ನೇನಾ? ಬೋರ್ ಹೊಡೆಸದೆ  ನಿಮ್ಮನ್ನು ಕೂರಿಸುತ್ತೆ ಮೂವಿ.


ರೈಡ್ ಬಿಟ್ಟು ಏಳೋ ಮನಸಾಗಲ್ಲ


ಮೂವರು ಹುಡುಗಿಯರು ಗಣೇಶ್ ಹಿಂದೆ ಬಿದ್ದಿರುವಾಗ ಈ ಸಿನಿಮಾ ಪ್ರೇಕ್ಷಕರನ್ನು ಸಹಜವಾಗಿಯೇ ಹಿಡಿದು ಕೂರಿಸುತ್ತೆ. ಲವ್ ಸ್ಟೋರಿ, ಪೊಸೆಸಿವ್​​ನೆಸ್, ಕ್ರಶ್, ರೊಮ್ಯಾನ್ಸ್, ಕಾಮಿಡಿ ಎಲ್ಲವೂ ಸೇರಿ ಸಿನಿಮಾ ಕೂಲ್ ಆಗಿ ಕಂಟಿನ್ಯೂ ಆಗುತ್ತೆ. ಹಾಗಾಗಿ ಪ್ರೇಕ್ಷಕನನ್ನು ಹಿಡಿದಿಡೋ ಟೆಕ್ನಿಕ್ ಬಿಗಿನಿಂಗ್ ಟು ಎಂಡ್ ವರ್ಕೌಟ್ ಆಗಿದೆ.




ಕಾಮಿಡಿ ಎಕ್ಸ್​ಪರ್ಟ್ಸ್​ ಎಲ್ಲ ಒಂದುಕಡೆ


ಸೀರಿಯಸ್ ಪಾತ್ರಗಳನ್ನು, ಲವರ್ ಬಾಯ್ ಪಾತ್ರಗಳನ್ನು ಎಷ್ಟು ಚೆನ್ನಾಗಿ ಮಾಡುತ್ತಾರೋ ಹಾಗೆಯೇ ಕಾಮಿಡಿ ವಿಚಾರದಲ್ಲಿ ಗಣೇಶ್​ ಹಿಂದೆ ಬಿದ್ದಿಲ್ಲ. ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್​, ರಚನಾ ಇಂದರ್​, ರವಿಶಂಕರ್​ ಗೌಡ ಜೊತೆ ಸೇರಿ ಅವರು ಕೂಡಾ ಪ್ರೇಕ್ಷಕರ ನಗಿಸುವಲ್ಲಿ ಕೈ ಜೋಡಿಸುತ್ತಾರೆ.




ಇದನ್ನೂ ಓದಿ: Chandan Shetty: ಚಂದನ್ ಶೆಟ್ಟಿ ಹೊಸ ಕಿಕ್! ತ್ರಿಬಲ್ ಹೀರೋಯಿನ್​ಗಳಿಗೆ YATTA ಹಾಡು ಬರೆದ ಕನ್ನಡ Rapper


ಈ ಸಿನಿಮಾದಲ್ಲಿ ಲವ್​ ಸ್ಟೋರಿ ವರ್ಸಸ್ ಕಾಮಿಡಿ ನಡುವೆ ಒಂದು ಕಂಡೂ ಕಾಣದ ಸ್ಪರ್ಧೆ ಇದೆ. ಸಾಧುಕೋಕಿಲ ಮತ್ತು ರಂಗಾಯಣ ರಘು ಅವರು ಸಖತ್ತಾಗಿ ನಗಿಸಿದ್ದಾರೆ. ಇವರಿಬ್ಬರ ಕಾಮಿಡಿಗೆ ಪ್ರೇಕ್ಷಕ ನಕ್ಕು ಸುಸ್ತಾಗುವುದರಲ್ಲಿ ನೋ ಡೌಟ್. ಆರಂಭದಿಂದ ಕ್ಲೈಮ್ಯಾಕ್ಸ್​ ತನಕ ಸಾಧುಕೋಕಿಲ ಅವರ ಅಭಿನಯದಿಂದ ತ್ರಿಬಲ್ ರೈಡಿಂಗ್​ನಲ್ಲಿ ಕಾಮಿಡಿ ಹೈಲೈಟ್ ಆಗಿದೆ.


'99', 'ಗೀತಾ', 'ಗಿಮಿಕ್' ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಬಾರಿಸಿದ ಗೋಲ್ಡನ್ ಸ್ಟಾರ್ ಗಣೇಶ್​ ಕೈಯಲ್ಲಿ ಬರೋಬ್ಬರಿ ಐದು ಚಿತ್ರಗಳಿದ್ದವು. ಪ್ರೊಡಕ್ಷನ್, ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದ ಸಿನಿಮಾಗಳ ಮಧ್ಯೆಯೇ ಅವರು ಹೊಸ ಸಿನಿಮಾ 'ತ್ರಿಬಲ್​ ರೈಡಿಂಗ್'​ಗೂ ಸಹಿ ಹಾಕಿದ್ದರು. ಅದೀಗ ಸಕ್ಸಸ್​ಫುಲ್ ಆಗಿ ರಿಲೀಸ್ ಆಗಿದೆ.




'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್​ ಜೊತೆ ಕೆಲಸ ಮಾಡಿದ್ದ ಮಹೇಶ್​ ಗೌಡ 15 ವರ್ಷಗಳ ಹಿಂದೆಯೇ ಗಣೇಶ್​ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಕನಸು ಕಂಡಿದ್ದರು. ಈ ಚಿತ್ರ ಕೃಪಾಳು ಎಂಟರ್ಟೈನ್ಮೆಂಟ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿದ್ದು, ರಾಮ್​ ಗೋಪಲ್​ ವೈಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.




ಸಾಯಿ ಕಾರ್ತಿಕ್ ಸಂಗೀತ, ಆನಂದ್ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ, ವಿಕ್ರಂ ಮತ್ತು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ರಾಜು ಮತ್ತು ಭೂಷಣ್ ನೃತ್ಯ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಭರಾಟೆ ಚೇತನ್ ಕುಮಾರ್ ಹಾಗೂ ನಿರ್ದೇಶಕ ಮಹೇಶ್ ಗೌಡ ತ್ರಿಬಲ್ ರೈಡಿಂಗ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Published by:Divya D
First published: