HBD Ganesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​​: ರಿಲೀಸ್​ ಆಯ್ತು ಹೊಸ ಚಿತ್ರದ ಪೋಸ್ಟರ್​..!

Prashant Raj And Ganesh: ಗಣೇಶ್​ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇದ್ದರೂ, ಅವರ ಅಭಿನಯದ ಚಿತ್ರತಂಡಗಳ ಕಡೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಅವರ ಹುಟ್ಟುಹಬ್ಬದಂದೇ ನಿಮ್ಮ ಸಿನಿಮಾ ನಿರ್ಮಾಣ ಸಂಸ್ಥೆ ಹೊಸ ಸಿನಿಮಾ ಪ್ರಕಟಿಸುವ ಮೂಲಕ ಶುಭಕೋರಿದೆ.

Anitha E | news18-kannada
Updated:July 2, 2020, 11:40 AM IST
HBD Ganesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​​: ರಿಲೀಸ್​ ಆಯ್ತು ಹೊಸ ಚಿತ್ರದ ಪೋಸ್ಟರ್​..!
ಗಣೇಶ್​ ಹೊಸ ಸಿನಿಮಾದ ಪೋಸ್ಟರ್​
  • Share this:
ಗೋಲ್ಡನ್​ ಸ್ಟಾರ್​ ಗಣೇಶ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಕೊರೋನಾ ಸೋಂಕಿನಿಂದಾಗಿ ಜನರು ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದಾರೆ. ಜೊತೆಗೆ ಅಭಿಮಾನಿಗಳೂ ಸಹ ತನ್ನನ್ನು ನೋಡಲು ಬರುವ ಬದಲು ಮೆನಗಳಲ್ಲೇ  ಸುರಕ್ಷಿತವಾಗಿದ್ದು ಶುಭಕೋರಿ ಎಂದು ಗಣೇಶ್  ಮನವಿ ಮಾಡಿದ್ದಾರೆ.

ಗಣೇಶ್​ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇದ್ದರೂ, ಅವರ ಅಭಿನಯದ ಚಿತ್ರತಂಡಗಳ ಕಡೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಅವರ ಹುಟ್ಟುಹಬ್ಬದಂದೇ 'ನಿಮ್ಮ ಸಿನಿಮಾ ನಿರ್ಮಾಣ' ಸಂಸ್ಥೆ ಹೊಸ ಸಿನಿಮಾ ಪ್ರಕಟಿಸುವ ಮೂಲಕ ಶುಭಕೋರಿದೆ.

Ganesh
ಗಣೇಶ್​


ಪ್ರಶಾಂತ್ ರಾಜ್ ಅವರ 'ನಿಮ್ಮ ಸಿನಿಮಾ ನಿರ್ಮಾಣ' ಸಂಸ್ಥೆಯ 10ನೇ ವರ್ಷಾಚರಣೆಯ ಸಂಭ್ರಮದಲ್ಲಿ 'ಪ್ರೊಡಕ್ಷನ್​​ ನಂ 7'  ಸಿನಿಮಾ ಪ್ರಕಟಿಸಿದೆ. ಜೊತೆಗೆ ಆ ಸಿನಿಮಾದ ಪೋಸ್ಟರ್​ ಸಹ ರಿಲೀಸ್​ ಮಾಡಿದೆ. ಈ ಬಗ್ಗೆ ಪ್ರಶಾಂತ್​ ರಾಜ್​ ಟ್ವೀಟ್​ ಮಾಡಿದ್ದಾರೆ.


'ಜೂಮ್' ಹಾಗೂ 'ಆರೆಂಜ್' ಬ್ಯಾಕ್ ಟು ಬ್ಯಾಕ್  ಸಿನಿಮಾಗಳನ್ನು ನೀಡಿದ ನಂತರ ಮತ್ತೆ ಪ್ರಶಾಂತ್​​ ರಾಜ್​  ಹಾಗೂ ಗಣೇಶ್ ಅವರ ಜೋಡಿ ಹ್ಯಾಟ್ರಿಕ್​ ಹಿಟ್ ನೀಡಲು ಒಂದಾಗಿದೆ. ಈ ಸಿನಿಮಾಗೆ ಸದ್ಯಕ್ಕೆ 'ಪ್ರೊಡಕ್ಷನ್ ನಂ 7' ಎಂದು ಟೈಟಲ್​ ನೀಡಲಾಗಿದೆ.

Golden Star Ganesh is acting once again in Prashanth Raj Movie here is the first look poster of his new movie
ಗಣೇಶ್​ ಹಾಗೂ ಪ್ರಶಾಂತ್​ ರಾಜ್​ ಅವರ ಕಾಂಬಿನೇಷನ್​ನಲ್ಲಿ ಬರಲಿರುವ​ ಹೊಸ ಸಿನಿಮಾದ ಪೋಸ್ಟರ್​


 

ಈ ಚಿತ್ರಕ್ಕೆ ಎಸ್.ಎಸ್ ತಮನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪ್ರಶಾಂತ್ ರಾಜ್ ಗಣೇಶ್ ಜೊತೆ ತಮನ್ ಅವರಿಗೂ ಇದು ಹ್ಯಾಟ್ರಿಕ್ ಸಿನಿಮಾ. ರೊಮ್ಯಾಂಟಿಕ್ ಕಾಮಿಡಿ ಕೊಟ್ಟು‌ ಯಶಸ್ವಿಯಾಗಿದ್ದ ಈ ಜೋಡಿ ಈಗ ಡಾರ್ಕ್ ಕ್ರೈಂ ಥ್ರಿಲ್ಲರ್​ ಸಿನಿಮಾ ಕೊಡಲು​ ಸಜ್ಜಾಗಿದೆ.

ಹೊಸ ಲುಕ್​ನ ಫೋಟೋಗಳನ್ನು ಹಂಚಿಕೊಂಡು ಮಾಧ್ಯಮಗಳ ಮೇಲೆ ಗರಂ ಆದ ಸ್ಯಾಂಡಲ್​ವುಡ್​ ನಟಿ..!


 

 

ಇದನ್ನೂ ಓದಿ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಾಸ್ಯ ಕಲಾವಿದ ಮಿಮಿಕ್ರಿ ರಾಜ ಗೋಪಾಲ್ ಇನ್ನಿಲ್ಲ
First published: July 2, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading