Golden Star Ganesh: ಗೋಲ್ಡನ್ ಗಣಿ ಸಿಕ್ಸರ್ ಬಾರಿಸಲು ರೆಡಿ! ಪ್ರೀತಂ ಗುಬ್ಬಿ ಜೊತೆ ಹೊಸ ಪಯಣ

ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟರ್​ ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿ ರೋಲ್​ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರ ಒಂದು ಹಂತದ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ

ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ

  • Share this:
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ಡೈರೆಕ್ಟರ್ ಪ್ರೀತಂ ಗುಬ್ಬಿ (Preetham Gubbi) ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಈಗ ಚಿತ್ರೀಕರಣದ ಹಂತದಲ್ಲಿಯೇ ಇದೆ. ದೂರದ ಮಂಗಳೂರಲ್ಲಿ ಈ ಸಿನಿಮಾದ ಶೂಟಿಂಗ್ (Shooting) ಕೂಡ ನಡೆದಿದೆ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟರ್​ (Cricketer ) ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್  ಈಜುಗಾರ್ತಿ ರೋಲ್​ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರ ಒಂದು ಹಂತದ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಮಂಗಳೂರಿನ ಸುಂದರ ತಾಣದಲ್ಲಿಯೇ ಒಂದಷ್ಟು ವಾಟರ್ ಗೇಮ್ಸ್ ದೃಶ್ಯಗಳನ್ನ ತೆಗೆಯಲಾಗಿದೆ. ಚಿತ್ರದ ಒಂದಷ್ಟು ದೃಶ್ಯಗಳನ್ನೂ ಇಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇನ್ನೇನೂ ಸಿನಿಮಾ ಎರಡನೇ ಹಂತದ ಇಲ್ಲಿಯ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಆಫ್ರಿಕಾ ದೇಶಕ್ಕೂ ಹಾರಲಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ವಿಶೇಷ ಟೈಟಲ್ ಸಿನಿಮಾ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾದ ಪೋಸ್ಟರ್ ಗಮನ ಸೆಳೆಯುತ್ತಿದೆ. ಪವರ್ ಸ್ಟಾರ್ ಪುನಿತ್ ಅಭಿನಯದ ಭಾಗ್ಯವಂತ ಸಿನಿಮಾದಲ್ಲಿ ಒಂದು ಹಾಡು ಹಾಡಿದ್ದರು. ಬಾನದಾರಿಯಲಿ ಸೂರ್ಯ ಜಾರಿ ಹೋದ ಅಂತ. ಅದೇ ಹಾಡಿನ ಪಲ್ಲವಿಯ ಮೊದಲೆರಡು ಪದ ಇಲ್ಲಿ ಈ ಒಂದು ಚಿತ್ರಕ್ಕೆ ಟೈಟಲ್ ಆಗಿವೆ.

ಹೌದು, ಈ ಹಾಡಿನ ಪಲ್ಲವಿ ಮೊದಲ ಲೈನ್ ಅನ್ನೇ ಇಲ್ಲಿ ಶೀರ್ಷಿಕೆ ಮಾಡಿಕೊಳ್ಳಲಾಗಿದೆ. ವಿಶೇಷವೆಂದರೆ ಈ ಚಿತ್ರಕ್ಕಾಗಿಯೇ ಮಾಡಿಕೊಂಡ ಪೋಸ್ಟರ್ ತುಂಬಾ ವಿಶೇಷವಾಗಿಯೇ ಇದೆ. ಬಾನಂಗಳದಲ್ಲಿ ಸೂರ್ಯ ಮತ್ತು ಚಂದ್ರನನ್ನ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ನೋಡ್ತಾ ಇರ್ತಾರೆ.

Golden Star Ganesh New Movie Shooting at Mangalore
ಬಾನದಾರಿಯಲಿ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್


ಬಾನದಾರಿಯಲಿ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟರ್
ಪೋಸ್ಟರ್ ನಲ್ಲಿ ಇದುವೇ ಹೆಚ್ಚು ಗಮನ ಸೆಳೆಯುವಂತಿದೆ. ಚಿತ್ರದ ಟೈಟಲ್ ಏನೋ ಸ್ಪೆಷಲ್ ಆಗಿದೆ. ಆದರೆ ಚಿತ್ರದ ನಾಯಕ ಇಲ್ಲಿ ಕ್ರಿಕೆಟರ್, ಚಿತ್ರದ ನಾಯಕಿ ಏನೂ ಕಡಿಮೆ ಇಲ್ಲ. ಈಕೆ ಈಜುಗಾರ್ತಿ, ಕ್ರೀಡೆಯನ್ನೆ ಆಧಾರಿಸಿದ ಈ ಸಿನಿಮಾ ಈ ಮೂಲಕ ಈಗಲೇ ಕುತೂಹಲ ಹುಟ್ಟುಹಾಕಿದೆ

ನಿಜ, ಗೋಲ್ಡನ್ ಸ್ಟಾರ್​ ಫ್ಯಾನ್ಸ್ ಈ ಸಿನಿಮಾ ಬಗ್ಗೆ ಒಂದು ಕುತೂಹಲ ಇಟ್ಟುಕೊಂಡಿದ್ದಾರೆ. ಹಾಗೇನೆ ಗೋಲ್ಡನ್ ಸ್ಟಾರ್ ಗಣೇಶ್ ಸ್ನೇಹಿತ ಪ್ರೀತಂ ಗುಬ್ಬಿ ಈ ಸಿನಿಮಾವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಇವರ ಕಾಂಬಿನೇಷನ್​ನಲ್ಲಿ ಒಳ್ಳೆ ಸಿನಿಮಾಗಳೇ ಬಂದಿವೆ. ಜನ ಕೂಡ ಅವುಗಳನ್ನ ಮೆಚ್ಚಿರೋದು ಉಂಟು.

Golden Star Ganesh New Movie Shooting at Mangalore
ಬಾನದಾರಿಯಲಿ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್


ಇದನ್ನೂ ಓದಿ: Ashika Ranganath: ಮದಗಜನ ಪಲ್ಲವಿಗೆ ಪ್ರಶಸ್ತಿಯ ಗರಿ, ಕನ್ನಡದ ಮಲ್ಲಿಗೆ ಜೊತೆ ವಿಶೇಷ ಸಂದರ್ಶನ

ಬಾನದಾರಿಯಲಿ ಚಿತ್ರಕ್ಕೆ ಪೀತಾ ಜಯರಾಂ ಕಥೆ-ಪ್ರೀತಂ ಗುಬ್ಬಿ ಡೈರೆಕ್ಷನ್
ಬಾನದಾರಿಯಲಿ ಚಿತ್ರದ ಕಥೆಯನ್ನ ಪ್ರೀತಾ ಜಯರಾಂ ಬರೆದಿದ್ದರೆ ಅದೇ ಕಥೆಯನ್ನ ಡೈರೆಕ್ಟರ್ ಪ್ರೀತಂ ಗುಬ್ಬಿ ಈಗ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಒಂದು ವಿಶೇಷ ಕಥೆಗೆ ಮ್ಯಾಜಿಲ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಈ ಬಾನದಾರಿಯಲ್ಲಿ ಚಿತ್ರಕ್ಕಿದೆ.

ಸಿನಿಮಾದ ಒಟ್ಟು ಕೆಲಸದಲ್ಲಿ ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಮೂರನೇ ಹಂತದ ಚಿತ್ರೀಕರಣ್ಕಕಾಗಿಯೇ ಸಿನಿಮಾ ತಂಡ ಆಫ್ರಿಕಾ ದೇಶಕ್ಕೂ ಪಯಣ ಬೆಳೆಸಲಿದೆ. ಅಲ್ಲಿಂದ ಬಂದ್ಮೇಲೆ ಬಾನದಾರಿಯಲಿ ಸಿನಿಮಾ ಅಪ್​ಡೇಟ್ ಸಿಗುತ್ತವೆ.

ಇದನ್ನೂ ಓದಿ: Duniya Vijay: ಭೀಮನ ಅಂಗಳಕ್ಕೆ Ash Melo ಎಂಟ್ರಿ, ಸ್ಕೈಲರ್​ಗೂ ಚಾನ್ಸ್ ಕೊಟ್ಟ ದುನಿಯಾ ವಿಜಯ್

ಕನ್ನಡದ ಬಾನದಾರಿಯಲಿ ಒಂದು ವಿಶೇಷ ಸಿನಿಮಾ. ಈ ಸಿನಿಮಾದ ಬಗ್ಗೆ ಇಲ್ಲಿವರೆಗೂ ಅಂತಹ ಸುದ್ದಿಯೇನೂ ಕೇಳಿರಲಿಲ್ಲ. ಆದರೆ ಈಗ ಸಿನಿಮಾ ತಂಡ ಅಧಿಕೃತವಾಗಿಯೇ ಒಂದಷ್ಟು ಮಾಹಿತಿಯನ್ನ ಕೊಟ್ಟಿದೆ. ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.
First published: