ನಮಸ್ಕಾರ.. ನಮಸ್ಕಾರ.. ನಮಸ್ಕಾರ.. : ಮತ್ತೆ ಕಿರುತೆರೆಗೆ ಬಂದ Golden Star Ganesh !

Golden Star Ganesh: ಒಂದು ಕಾಲದಲ್ಲಿ ಕಿರುತೆರೆಯಿಂದಲೇ ಹೆಸರು ಮಾಡಿದವರು ಗಣೇಶ್. ಇದೀಗ ಅವರು ಜೀ ಕನ್ನಡ(Zee Kannada) ವಾಹಿನಿಗಾಗಿ ಹೊಸ ರಿಯಾಲಿಟಿ ಶೋ ಗೋಲ್ಡನ್​ ಗ್ಯಾಂಗ್​ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಗೋಲ್ಡನ್​ ಸ್ಟಾರ್ ಗಣೇಶ್​

ಗೋಲ್ಡನ್​ ಸ್ಟಾರ್ ಗಣೇಶ್​

  • Share this:
ಸಂಜೆ ಆರು ಗಂಟೆ ಆಯ್ತು ಅಂದರೆ ಉದಯ ಟಿವಿ(Udaya TV) ಮುಂದೆ ಎಲ್ಲರೂ ಬಂದು ಕೂರುತ್ತಿದ್ದರು. ಅರೇ...ಇದು ಈಗಲ್ಲ ಹೇಳಿದ್ದು. 15 ವರ್ಷಗಳ ಹಿಂದಿನ ಮಾತು. ಅದಕ್ಕೂ ಒಂದು ಕಾರಣವಿತ್ತು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಪ್ರೋಗ್ರಾಂ(Comedy Program) ನಡೆಸುಕೊಡುತ್ತಿದ್ದಿದ್ದು ಇದೇ ನಮ್ಮ ಗೋಲ್ಡನ್​ ಸ್ಟಾರ್(Golden Star)​. ನಮಸ್ಕಾರ.. ನಮಸ್ಕಾರ.. ನಮಸ್ಕಾರ.. ಅಂತಾನೆ ಎಲ್ಲರ ಮನಗೆದ್ದಿದ್ರು ಗೋಲ್ಡನ್​ ಸ್ಟಾರ್​. ಆಗ ಇನ್ನೂ ಕಾಮಿಡಿ ಟೈಂ ಗಣೇಶ್(Ganesh)​. ಉದಯ ಟವಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡ ಟೈಂಗೆ ಸಖತ್​ ಟಿಆರ್​ಪಿ(TRP( ಜೊತೆಗೆ ಜನಪ್ರಿಯತೆ ಗಳಿಸಿತ್ತು. ಇದಾದ ಬಳಿಕ ಗಣೇಶ್​ ಸಿನಿಮಾರಂಗಕ್ಕೆ ಕಾಲಿಟ್ಟು ದೊಡ್ಡ ಯಶಸ್ಸನ್ನು ಕಂಡರು. ಕಾಮಿಡಿ ಟೈಂ ಗಣೇಶ್​ನಿಂದ ಗೋಲ್ಡನ್​ ಸ್ಟಾರ್​ ಬಿರುದು ಪಡೆದುಕೊಂಡರು. ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ ಸಿನಿಮಾಗಳು ಸೂಪರ್​-ಡೂಪರ್(Super - Duper)​ ಹಿಟ್​ ಆಗಿತ್ತು. ವಿಷಯ ಅದಲ್ಲ.. ಮತ್ತೆ ಗೋಲ್ಡನ್​ ಸ್ಟಾರ್​ ಗಣೇಶ್​ ಕಿರುತೆರೆಗೆ ಬರುತ್ತಿದ್ದಾರೆ ಅದು ‘ಗೋಲ್ಡನ್​ ಗ್ಯಾಂಗ್’(Golden Gang)​ ಜೊತೆ. ಗಣೇಶ್​ ಅಭಿನಯದ 'ಸಖತ್‌'(Sakath) ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಎಲ್ಲರನ್ನು ರಂಜಿಸುತ್ತಿದೆ. ಈ ಮಧ್ಯೆ ಗಣೇಶ್‌ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಒಂದು ಕಾಲದಲ್ಲಿ ಕಿರುತೆರೆಯಿಂದಲೇ ಹೆಸರು ಮಾಡಿದವರು ಗಣೇಶ್. ಇದೀಗ ಅವರು ಜೀ ಕನ್ನಡ(Zee Kannada) ವಾಹಿನಿಗಾಗಿ ಹೊಸ ರಿಯಾಲಿಟಿ ಶೋ ಗೋಲ್ಡನ್​ ಗ್ಯಾಂಗ್​ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಸಖತ್​ ಥ್ರಿಲ್ಲಿಂಗ್​ ಗೇಮ್​ ಶೋ ಗೋಲ್ಡನ್​ ಗ್ಯಾಂಗ್​!

ಗಣೇಶ್​ ಹಾಗೂ ಕಿರುತೆರೆಗೆ ಒಂಥರಾ ನಂಟು. ಎಷ್ಟೇ ಬ್ಯುಸಿಯಿದ್ದರು ಗಣೇಶ್​ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಹಿಂದೆ ಸೂಪರ್​ ಮಿನಿಟ್​ ಕಾರ್ಯಕ್ರಮದ ನಿರೂಪಕರಾಗಿದ್ದರಯ. ನಾಯಕ , ಗಾಯಕ , ನಿರ್ದೇಶಕ ಮತ್ತು ನಿರೂಪಕ ಹೀಗೆ ಎಲ್ಲಾ ವಿಭಾಗಗಳಲ್ಲೂ ಮಿಂಚುತ್ತಿರುವ ಗಣೇಶ್ ಅವರು ಬೆಳ್ಳಿತೆರೆ ಹಾಗೂ ಕಿರುತರೆಯಲ್ಲೂ ತಮ್ಮ ಛಾಪು ಮೂಡಿಸಿದವರು. ಇದೀಗ ಜೀ ಕನ್ನಡದ ಜೊತೆಗೆ 'ಗೋಲ್ಡನ್ ಗ್ಯಾಂಗ್' ಎಂಬ ಅಪರೂಪದ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನತೆಯನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗುವುದಕ್ಕೆ ಸಜ್ಜಾಗಿದ್ದಾರೆ. ಗಣೇಶ್ ಅವರ ಸಾರಥ್ಯದ 'ಗೋಲ್ಡನ್ ಗ್ಯಾಂಗ್' ಸಖತ್​ ಥ್ರಿಲ್ಲಿಂಗ್ ಗೇಮ್ ಶೋ ಆಗಿದ್ದು ಕನ್ನಡದ ಹಿರಿತೆರೆ ಮತ್ತು ಕಿರುತೆರೆಯ ಕಲಾವಿದರ ಗ್ಯಾಂಗ್‌ಗಳು ಈ ಶೋನ ಭಾಗವಾಗಲಿದೆ.

ಇದನ್ನು ಓದಿ : ಮಂಗಳಗೌರಿ ಮದುವೆ ಧಾರವಾಹಿಯ ಪೊಲೀಸ್​ ಪಾತ್ರಧಾರಿ ನಟ ಚಿನ್ನಪ್ಪ ‘ರಾಜೀನಾಮೆ’..!

ಗೋಲ್ಡನ್​  ಗ್ಯಾಂಗ್​ನ ಪ್ರೋಮೋ ರಿಲೀಸ್​

ಈ ಹಿಂದೆಯೇ ಒಂದು ಪ್ರೋಮೋ ರಿಲೀಸ್ ಮಾಡಿ, ಗಣೇಶ್‌ ಅವರ ಹೊಸ ರಿಯಾಲಿಟಿ ಶೋ ಬರ್ತಾ ಇದೆ ಎಂಬ ಮಾಹಿತಿಯನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿತ್ತು. ಈಗ ಶೋನ ಸಂಪೂರ್ಣ ಮಾಹಿತಿಯೊಂದಿಗೆ ಮತ್ತೊಂದು ಪ್ರೋಮೋವನ್ನು ರಿಲೀಸ್ ಮಾಡಿದೆ. ಗ್ಯಾಂಗ್‌ಗಳೊಂದಿಗೆ ಬಾಲ್ಯ, ಯೌವ್ವನದ ತುಂಟತನ, ಕುಚೇಷ್ಟೆಗಳ ಸವಿನೆನಪುಗಳನ್ನು ಮೆಲುಕು ಹಾಕುತ್ತ ನೆನಪಿನಲ್ಲಿ ಉಳಿಯುವಂಥಾ ಆಟಗಳನ್ನು ಆಡಿಸುತ್ತಾ ಕಲಾವಿದರ ಆ ದಿನಗಳನ್ನು 'ಗೋಲ್ಡನ್ ಸ್ಟಾರ್' ನಮ್ಮೆಲ್ಲರಿಗೂ ತಮ್ಮದೇ ರೀತಿಯಲ್ಲಿ ಪರಿಚಯಿಸಲಿದ್ದಾರೆ. ಗೋಲ್ಡನ್​ ಸ್ಟಾರ್​ ಅಭಿಮಾನಿಗಳು ಯಾವಾಗ ಶೋ ಶುರುವಾಗುತ್ತೆ ಅಂತ ಕಾಯುತ್ತಿದ್ದಾರೆ.

ಇದನ್ನು ಓದಿ : ಡಿ. 2ರಂದು ಕಿರುತೆರೆ ಸ್ಟಾರ್​ ಕಾವ್ಯ ಗೌಡ ಮದುವೆ, ಸಿದ್ಧತೆ ನೋಡಿ ಭರ್ಜರಿಯಾಗಿದೆ..!

ಗೋಲ್ಡನ್ ಗ್ಯಾಂಗ್’ ಒಂದು ಅಪರೂಪದ ಕಾರ್ಯಕ್ರಮ. ಇದು ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗಲಿದೆ ಎಂದು ಜೀ ಕನ್ನಡ ವಾಹಿನಿ ಹೇಳಿಕೊಂಡಿದೆ. ಈ ಶೋ ತುಂಬ ಥ್ರಿಲ್ಲಿಂಗ್​ ಆಗಿರಲಿದ್ದು ಕನ್ನಡ ಸಿನಿಮಾ ಮತ್ತು ಕಿರುತೆರೆ ಲೋಕದ ಹಲವು ಕಲಾವಿದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲಾವಿದರ ಆ ದಿನಗಳನ್ನು ಗೋಲ್ಡನ್ ಸ್ಟಾರ್ ಗಣೇಶ್​ ಅವರು ಪ್ರೇಕ್ಷಕರಿಗೆ ತಮ್ಮದೇ ರೀತಿಯಲ್ಲಿ ಪರಿಚಯಿಸಲಿದ್ದಾರೆ. ಶೀಘ್ರದಲ್ಲೇ ‘ಗೋಲ್ಡನ್​ ಗ್ಯಾಂಗ್​’ ಪ್ರಸಾರ ಆರಂಭ ಆಗಲಿದೆ.

Published by:Vasudeva M
First published: