HOME » NEWS » Entertainment » GOLDEN STAR GANESH CANCELS BIRTHDAY CELEBRATIONS WITH FANS ZP

ಗೋಲ್ಡನ್ ಸ್ಟಾರ್ ಸಂಭ್ರಮಕ್ಕೆ ಕೊರೋನಾ ಬ್ರೇಕ್..!

ಇದೇ ಜುಲೈ 2ರಂದು ಸ್ಯಾಂಡಲ್​ವುಡ್​ ಗೋಲ್ಡನ್ ಸ್ಟಾರ್ ಗಣೇಶ್ 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯ ಗೋಲ್ಡನ್ ಸ್ಟಾರ್ ಬರ್ತ್​ಡೇಗೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅವರ ನಿವಾಸಕ್ಕೆ ಬರುವ ನಿರೀಕ್ಷೆಯಿತ್ತು.

news18-kannada
Updated:June 25, 2020, 7:55 PM IST
ಗೋಲ್ಡನ್ ಸ್ಟಾರ್ ಸಂಭ್ರಮಕ್ಕೆ ಕೊರೋನಾ ಬ್ರೇಕ್..!
Ganesh
  • Share this:
ಕೊರೋನಾ ಅಟ್ಟಹಾಸದಿಂದ ದೇಶವೇ ತತ್ತರಿಸಿದೆ. ಲಾಕ್​ಡೌನ್ ಎಫೆಕ್ಟ್​ನಿಂದಾಗಿ ಹಲವು ಸಮಸ್ಯೆಗಳು ಉಲ್ಬಣಿಸಿವೆ. ಆದರೆ ಅನ್​ಲಾಕ್ ಆದರೂ ಸಮಸ್ಯೆಗಳು ಬಗೆಹರಿದಿಲ್ಲ. ಇನ್ನು ಹೊಸ ಸಿನಿಮಾಗಳ ಶೂಟಿಂಗ್ ಹಾಗೂ ರಿಲೀಸ್​ಗೆ ಅನುಮತಿ ದೊರೆಯದ ಕಾರಣ, ಚಿತ್ರರಂಗದ ಸಮಸ್ಯೆ ಹೇಳತೀರದಾಗಿದೆ. ಅದರ ನಡುವೆಯೇ ಸ್ಟಾರ್ಗಳು ಹಾಗೂ ಅಭಿಮಾನಿಗಳಿಗೆ ಈ ಕೊರೊನಾ ಹಾಗೂ ಲಾಕ್​ಡೌನ್ ಇನ್ನೊಂದು ಬಗೆಯ ಸಮಸ್ಯೆಗೆ ಕಾರಣವಾಗಿದೆ.

ಹೌದು, ಸ್ಟಾರ್​ಗಳ ಹುಟ್ಟುಹಬ್ಬ ಅಂದರೆ ಅವರ ಅಭಿಮಾನಿಗಳಿಗೂ ಹಬ್ಬದ ದಿನ. ಹೀಗಾಗಿಯೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದಂದು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಫ್ಯಾನ್ಸ್ ಬರುತ್ತಾರೆ. ಕೇಕ್ ಕಟ್ ಮಾಡಿಸಿ, ಗಿಫ್ಟ್ ಕೊಟ್ಟು, ಕೈಕುಲುಕಿ, ಅಪ್ಪಿಕೊಂಡು, ಕಾಲುಮುಗಿದು, ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ. ಆದರೆ ಕಳೆದ ಮೂರು ತಿಂಗಳಿನಿಂದ ಕೊರೊನಾ ಲಾಕ್ಡೌನ್ನಿಂದಾಗಿ ಸಿನಿಮಾ ಶೂಟಿಂಗ್, ಪ್ರದರ್ಶನಗಳಿಗೆ ಮಾತ್ರವಲ್ಲ ಸ್ಟಾರ್ಗಳ ಹುಟ್ಟುಹಬ್ಬದ ಅದ್ಧೂರಿ ಆಚರಣೆಗೂ ಬ್ರೇಕ್ ಬಿದ್ದಿದೆ.

ಇದೇ ಜುಲೈ 2ರಂದು ಸ್ಯಾಂಡಲ್​ವುಡ್​ ಗೋಲ್ಡನ್ ಸ್ಟಾರ್ ಗಣೇಶ್ 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯ ಗೋಲ್ಡನ್ ಸ್ಟಾರ್ ಬರ್ತ್​ಡೇಗೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅವರ ನಿವಾಸಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಖುದ್ದು ಗಣಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಯಾರೂ ಮನೆ ಬಳಿ ಬರಬೇಡಿ ಎಂದು ಓಪನ್ ಲೆಟರ್ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಅವರ ಪತ್ರದ ಸಾರಾಂಶ ಹೀಗಿದೆ…
ನನ್ನೆಲ್ಲಾ ಅಭಿಮಾನಿಗಳೇ, ಬಂಧುಗಳೇ, ಸ್ನೇಹಿತರೇ, ಹಿತೈಷಿಗಳೇ ಈ ಕೊರೋನಾದ ಸಂಕಷ್ಟಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆ ತಾಲ್ಲೂಕುಗಳಲ್ಲೂ ನೀವು ನೊಂದವರ, ಅಸಹಾಯಕರ, ಹಸಿದವರ ಬೆಂಬಲಕ್ಕೆ ನಿಂತಿದ್ದೀರಿ. ಇದಕ್ಕೆ ಯಾವ ಪ್ರಚಾರವನ್ನೂ ಬಯಸದೇ ಸದ್ದು ಗದ್ದಲವಿಲ್ಲದೇ ನಿಮ್ಮ ಮಾನವೀಯತೆಯನ್ನು ತೋರಿಸಿದ್ದೀರಿ. ಇದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಿಮ್ಮ ಕಾರ್ಯಗಳಿಗಾಗಿ ಹೆಮ್ಮೆ ಪಡುತ್ತೇನೆ. ನಿಮಗೆಲ್ಲ ಗೊತ್ತಿರುವ ಹಾಗೆ ಜುಲೈ 2ರಂದು ಪ್ರತಿವರ್ಷ ಸಾವಿರಾರು ಮಂದಿ ಬೆಂಗಳೂರಿಗೆ ಬಂದು ನನ್ನ ಜನ್ಮದಿನವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸುತ್ತಿದ್ದಿರಿ, ಇದಕ್ಕೆ ನಾನು ಸದಾ ಚಿರಋಣಿ. ಆದರೆ ಈ ವರ್ಷ ಎಂದಿನಂತಿಲ್ಲ. ಕೊರೋನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ, ಬಡಜನರು ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟ ಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹುಟ್ಟುಹಬ್ಬದ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ. ಹೊರಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು, ಅದೇ ದಿನ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ. ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೇ ನನಗೆ ಶುಭಕೋರಿ ಆಶೀರ್ವದಿಸಿ… ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್.


ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರವಲ್ಲ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್, ನಟ ನೀನಾಸಂ ಸತೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ವಿನಯ್ ರಾಜ್​ಕುಮಾರ್, ರಾಧಿಕಾ ಪಂಡಿತ್ ಸೇರಿದಂತೆ ಹಲವು ಸ್ಯಾಂಡಲ್​ವುಡ್ ಸ್ಟಾರ್​ಗಳು ಈ ವರ್ಷ ಕೊರೊನಾ ಲಾಕ್​ಡೌನ್​ನಿಂದಾಗಿ ಅಭಿಮಾನಿಗಳಿಲ್ಲದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
First published: June 25, 2020, 7:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories