HBD Golden Star Ganesh: ನಟ ಗಣೇಶ್ ಹುಟ್ಟುಹಬ್ಬಕ್ಕೆ ಸಿಂಪಲ್​ ಸುನಿ ನೀಡಿದ ಡಬಲ್​ ಗಿಫ್ಟ್​​!

Happy Birthday Ganesh: ಮತ್ತೊಂದೆಡೆ ಗಣೇಶ್​ ಸಖತ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಹಾಗಾಗಿ ಗೋಲ್ಡನ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಚಿತ್ರತಂಡ ಜುಲೈ 1 ರಂದು ಸಂಜೆ ರ‍್ಯಾಪ್ ಮೋಷನ್​ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಮತ್ತೊಂದು ಸರ್​ಪ್ರೈಸ್​​ ನೀಡಿದೆ. ಹಾಗಾಗಿ ಸಿಂಪಲ್​ ಸುನಿ ಕಡೆಯಿಂದ ಗೋಲ್ಡನ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಡಬಲ್​ ಗಿಫ್ಟ್​​ ಸಿಕ್ಕಂತಾಗಿದೆ.

ಗೋಲ್ಡನ್​ ಸ್ಟಾರ್​ ಗಣೇಶ್​

ಗೋಲ್ಡನ್​ ಸ್ಟಾರ್​ ಗಣೇಶ್​

  • Share this:
    ಗೋಲ್ಡನ್​ ಸ್ಟಾರ್​ ಗಣೇಶ್​ಗೆ ಇಂದು 40ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಗಣಿ ತಮ್ಮ ಅಭಿಮಾನಿಗಳಿಗೆ ಈ ಹಿಂದೆಯೇ ಮನವಿ ಮಾಡಿದ್ದರು. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಗೋಲ್ಡನ್​ಸ್ಟಾರ್​ಗೆ ಶುಭಾಶಯಗಳು ಕೋರುತ್ತಿದ್ದಾರೆ. ಮತ್ತೊಂದೆಡೆ ಗಣಿ ಹುಟ್ಟುಹಬ್ಬಕ್ಕೆ ನಿರ್ದೇಶಕ ಸಿಂಪಲ್​ ಸುನಿ  ಡಬಲ್​ ಗಿಫ್ಟ್​​​ ನೀಡಿದ್ದಾರೆ. ಸುನಿ ನೀಡಿರುವ ಉಡುಗೊರೆಗೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

    ನಟ ಗಣೇಶ್​ ಅವರು ಸಿಂಪಲ್​ ಸುನಿ ಅವರ ‘ದಿ ಸ್ಟೋರಿ ಆಫ್​ ರಾಯಗಢ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್​ ಕೆಲ ದಿನಗಳ ಹಿಂದೆ ರಿಲೀಸ್​ ಆಗಿದೆ. ಆ ಮೂಲಕ ಸಿಂಪಲ್​ ಸುನಿ ಗಣೇಶ್​ ಅವರಿಗೆ ಸರ್​ಪ್ರೈಸ್​ ನೀಡಿದ್ದರು.

    ಮತ್ತೊಂದೆಡೆ ಗಣೇಶ್​ ಸಖತ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಹಾಗಾಗಿ ಗೋಲ್ಡನ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಚಿತ್ರತಂಡ ಜುಲೈ 1 ರಂದು ಸಂಜೆ ರ‍್ಯಾಪ್ ಮೋಷನ್​ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಮತ್ತೊಂದು ಸರ್​ಪ್ರೈಸ್​​ ನೀಡಿದೆ. ಹಾಗಾಗಿ ಸಿಂಪಲ್​ ಸುನಿ ಕಡೆಯಿಂದ ಗೋಲ್ಡನ್​ ಸ್ಟಾರ್​ ಹುಟ್ಟುಹಬ್ಬಕ್ಕೆ ಡಬಲ್​ ಗಿಫ್ಟ್​​ ಸಿಕ್ಕಂತಾಗಿದೆ.

    ದಿ ಸ್ಟೋರಿ ಆಫ್ ರಾಯಗಢ


     



    ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗಣಿ

    ಈ ವರ್ಷ ಎಂದಿನಂತಿಲ್ಲ. ಕೊರೋನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ, ಬಡಜನರು ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟ ಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹುಟ್ಟುಹಬ್ಬದ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ. ಹೊರ ಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು, ಅದೇ ದಿನ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ. ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೇ ನನಗೆ ಶುಭಕೋರಿ ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು ಗೋಲ್ಡನ್ ಸ್ಟಾರ್.

    ಭಜರಂಗಿ ಶಿವಣ್ಣನ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲಿದೆ ಬಿಗ್​​ ಸರ್​​ಪ್ರೈಸ್​​!

    ಕನ್ನಡ ಸಿನಿ ಪರದೆ ಮೇಲೆ ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗೇನು ಮಾಡುತ್ತಿದ್ದಾರೆ?
    First published: