ಗೋಲ್ಡನ್ ಸ್ಟಾರ್ ಗಣೇಶ್ ನಾಳೆ (ಜುಲೈ 2ರಂದು) ಹುಟ್ಟುಹಬ್ಬದ ಆಚರಿಸಿಕೊಳ್ಳಲಿದ್ದಾರೆ. ಹಾಗಾಗಿ ‘ಸಖತ್’ ಚಿತ್ರತಂಡ ಅವರಿಗೆ ಒಂದು ದಿನದ ಮುಂಚಿತವಾಗಿ ಸಖತ್ತಾಗಿರೋ ಸರ್ಪ್ರೈಸ್ ನೀಡಿದೆ.
ನಟ ಗಣೇಶ್ ನಿರ್ದೇಶಕ ಸಿಂಪಲ್ ಸುನಿ ಜೊತೆ ಕೈ ಜೋಡಿಸಿಕೊಂಡು ‘ಸಖತ್’ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ‘ದಿ ಸ್ಟೋರಿ ಆಫ್ ರಾಯಗಡ’ ಸಿನಿಮಾದಲ್ಲಿ ನಟಿಸಿಸುತ್ತಿದ್ದಾರೆ. ಈಗಾಗಲೇ ಸಿಂಪಲ್ ಸುನಿ ಗಣೇಶ್ ಹುಟ್ಟುಹಬ್ಬಕ್ಕೂ ಮುಂಚಿತವಾಗಿ ರಾಯಗಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಬಿಗ್ ಸರ್ಪ್ರೈಸ್ ನೀಡಿದ್ದರು. ಇದೀಗ ‘ಸಖತ್’ ಚಿತ್ರತಂಡ ಕಡೆಯಿಂದ ನಿರ್ದೇಶಕ ಸುನಿ ರ‍್ಯಾಪ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
‘ಸಖತ್’ ಟೀಂ ಆನಂದ್ ಆಡಿಯೋ ಯ್ಯೂಟೂಬ್ ಚಾನೆಲ್ನಲ್ಲಿ ರ‍್ಯಾಪ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ನಡಿಯಲ್ಲಿ ಈ ರ‍್ಯಾಪ್ ಮೋಷನ್ ಪೋಸ್ಟರ್ ನಿರ್ಮಾಣವಾಗಿದ್ದು, ಜುದಾಹ್ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.
‘ಸಖತ್’ ರ‍್ಯಾಪ್ ಮೋಷನ್ ಪೋಸ್ಟರ್ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ 14 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಅನೇಕರು ಈ ವಿಡಿಯೋ ನೋಡುವ ಮೂಲಕ ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಡ್ವಾನ್ಸ್ ವಿಶ್ ಮಾಡುತ್ತಿದ್ದಾರೆ.
ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗಣಿ
ಈ ವರ್ಷ ಎಂದಿನಂತಿಲ್ಲ. ಕೊರೋನಾದಿಂದಾಗಿ ನಮ್ಮ ಬದುಕಿನ ಶೈಲಿಯೇ ಬದಲಾಗಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ, ಬಡಜನರು ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟ ಸಾಧ್ಯವಾಗಿದೆ. ನನ್ನ ನಾಡಿನ ಜನರು ಹೀಗೆ ಸಂಕಷ್ಟದಲ್ಲಿ ಇರುವಾಗ ವೈಭವದ ಹುಟ್ಟುಹಬ್ಬದ ಆಚರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಧರಿಸಿದ್ದೇನೆ. ಹೊರ ಜಿಲ್ಲೆಗಳಿಂದ ನನ್ನ ಅಭಿಮಾನಿಗಳು ಈ ಸಮಯದಲ್ಲಿ ಬೆಂಗಳೂರಿಗೆ ಬರುವುದು ಬೇಡ. ನೀವು ನನಗಾಗಿ ಖರ್ಚು ಮಾಡುವ ಹಣವನ್ನು, ಅದೇ ದಿನ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಅದೇ ಅರ್ಥಪೂರ್ಣ ಆಚರಣೆಯಾಗುತ್ತದೆ. ನನಗೆ ಶುಭಕೋರಲು ನನ್ನ ನಿವಾಸಕ್ಕೆ ಬರುವುದು ಬೇಡ. ನೀವೆಲ್ಲಿದ್ದೀರೋ ಅಲ್ಲಿಂದಲೇ ನನಗೆ ಶುಭಕೋರಿ ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ