‘ಮುಂಗಾರು ಮಳೆಯೇ ಏನು ನಿನ್ನ ಅಲೆಗಳ ಲೀಲೆ..’ ಮುಂಗಾರು ಮಳೆ(Mungaru Male) ಕನ್ನಡ ಸಿನಿಮಾದ ದಿಕ್ಕನ್ನೇ ಬದಲಿಸಿದ ಚಿತ್ರ ಎಂದರೆ ತಪ್ಪಾಗಲ್ಲ. ಕನ್ನಡ ಸಿನಿಮಾರಂಗದಲ್ಲಿ ಮುಂಗಾರು ಮಳೆ ಸಿನಿಮಾ ಬರೆದಿರುವ ದಾಖಲೆ(Records)ಯನ್ನು ಮುರಿಯುವುದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ.. ಸಾಧ್ಯವಾಗುವುದಿಲ್ಲ..ಭಾರತೀಯ ಸಿನಿಮಾ ರಂಗವನ್ನು ಕನ್ನಡದತ್ತ ತಿರುಗುವಂತೆ ಮಾಡಿದ್ದು 'ಮುಂಗಾರು ಮಳೆ' ಸಿನಿಮಾ. ಸ್ಯಾಂಡಲ್ವುಡ್(Sandalwood) ಪಾಲಿಗೆ ಯಶಸ್ಸಿನ ಅನೇಕ ದಾಖಲೆಗಳನ್ನು ಬರೆದ ಈ ಚಿತ್ರವು ಬಿಡುಗಡೆಯಾಗಿ 15 ವರ್ಷಗಳೇ ಕಳೆದಿವೆ. ಆದರೂ , ಆ ಸಿನಿಮಾ ಹ್ಯಾಂಗೋವರ್(Hangover)ನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾದ ಬಜೆಟ್ ಕೇವಲ 2 ಕೋಟಿ ರೂ., ಬಾಕ್ಸ್ ಆಫೀಸ್ ಒಟ್ಟು ಕಲೆಕ್ಷನ್ 75 ಕೋಟಿ ರೂ., ಮುನ್ನೂರು ದಿನಗಳಲ್ಲಿ 50 ಕೋಟಿಗೂ ಹೆಚ್ಚು ಹಣ ಬಾಚಿದ ಮೊದಲ ಕನ್ನಡ ಸಿನಿಮಾ. ಎಲ್ಲ ಥಿಯೇಟರ್ಗಳ(Theater) ಲೆಕ್ಕ ಹಾಕಿದರೆ 865 ದಿನ ಪ್ರದರ್ಶನ ಕಂಡು ದಾಖಲೆ ಮೂಡಿಸಿದ ಚಿತ್ರ. ಭಾರತೀಯ ಸಿನಿಮಾ ರಂಗದಲ್ಲೇ ಮಲ್ಟಿಪ್ಲೆಕ್ಸ್(Multiplex) ಚಿತ್ರಮಂದಿರದಲ್ಲಿ ಒಂದು ವರ್ಷ ಪ್ರದರ್ಶನ ಕಂಡ ಮೊದಲ ಚಿತ್ರ ಅಂದರೆ ಅದು ಗಣೇಶ್ ಅಭಿನಯದ ಮುಂಗಾರು ಮಳೆ ಸಿನಿಮಾ. ಇದೀಗ 15 ವರ್ಷಗಳ ಬಳಿಕ ಗಣೇಶ್ ಈ ಸಿನಿಮಾದ ಸೀಕ್ರೆಟ್(Secret) ಒಂದನ್ನು ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅದೇನು ಅಂತೀರಾ..? ಮುಂದೆ ನೋಡಿ..
ಮುಂಗಾರುಮಳೆಗೆ ಮೊದಲು ಹೆಸರಿಟ್ಟಿದ್ದ ‘ಚುಮ್ಮ’ ಅಂತೆ!
ಹೌದು, ಮುಂಗಾರು ಮಳೆ ಸಿನಿಮಾಗೆ ಮೊದಲು ‘ಚುಮ್ಮ’ ಎಂದು ಹೆಸರಡಿಲಾಗಿತ್ತಂತೆ. ಈ ವಿಚಾರವನ್ನು ಸ್ವತಃ ಗೋಲ್ಡ್ ಸ್ಟಾರ್ ಗಣೇಶ್ ರಿವೀಲ್ ಮಾಡಿದ್ದಾರೆ. ಜೀ ಕನ್ನಡದಲ್ಲಿ ಹೊಸದಾಗಿ ಸ್ನೇಹಿತರಿಗಾಗಿ, ಸ್ನೇಹಿತರಿಂದ, ಸ್ನೇಹಿತರಿಗೋಸ್ಕರ ಗೋಲ್ಡನ್ ಗ್ಯಾಂಗ್ ಎಂಬ ರಿಯಾಲಿಟಿ ಶೋ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ಮುಂಗಾರು ಮಳೆ ಚಿತ್ರತಂಡ ಬಂದಿದೆ. ಈ ಸಂದರ್ಭದಲ್ಲಿ ಗೋಲ್ಡ್ ಸ್ಟಾರ್ ಗಣೇಶ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.ಕನ್ನಡ ಸಿನಿಮಾ ರಂಗದಲ್ಲಿ ಮುಂಗಾರು ಮಳೆ ಒಂದು ಮೈಲುಗಲ್ಲು. ಇದು ಕೇವಲ ಕನ್ನಡದ ಪ್ರೇಕ್ಷಕರನ್ನು ಮಾತ್ರ ತಲುಪಲಿಲ್ಲ. ನಾನಾ ಭಾಷೆಯ ಪ್ರೇಕ್ಷಕರು ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಇದೀಗ ಆ ಸಿನಿಮಾಗೆ ಮೊದಲು ಹೆಸರಿಟ್ಟಿದ್ದು ‘ಚುಮ್ಮ’ ಎಂದು ತಿಳಿದು ಬಂದಿದೆ.
ಇದನ್ನು ಓದಿ : Golden Gang ಜೊತೆ ಬಂದ್ರು ಗೋಲ್ಡನ್ ಸ್ಟಾರ್ ಗಣೇಶ್: ಜೀ ಕನ್ನಡದಲ್ಲಿ ಸ್ನೇಹಿತರಿಗಾಗಿ, ಸ್ನೇಹಿತರಿಗೋಸ್ಕರ ಹೊಸ ರಿಯಾಲಿಟಿ ಶೋ!
ಸ್ಯಾಂಡಲ್ವುಡ್ನಲ್ಲಿ ಸುನಾಮಿ ಸೃಷ್ಟಿಸಿದ್ದ ‘ಮುಂಗಾರು ಮಳೆ’
ಹೌದು, ಹೊಸಬರೇ ಇದ್ದ ಮುಂಗಾರು ಮಳೆ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಅಷ್ಟೇ ಅಲ್ಲದೇ ಸ್ಯಾಂಡಲ್ವುಡ್ಗೆ ಸಾಕಷ್ಟು ಭರವಸೆ ಕಲಾವಿದರನ್ನು ನೀಡಿತು. ಮುಂಗಾರು ಮಳೆ ಸಿನಿಮಾ ಮೂಲಕ ಕಾಮಿಡಿ ಟೈಂ ಗಣೇಶ್, ರಾತ್ರೋ ರಾತ್ರಿ ಸ್ಟಾರ್ ಆಗಿದ್ದರು. ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಯೋಗರಾಜ್ ಭಟ್ ವಿಕಟಕವಿ ಅಂತಲೇ ಹೆಸರಾದರು. ಕನ್ನಡ ಚಿತ್ರರಂಗದ ಆಲ್ಟೈಮ್ ಸಿನಿಮಾ ಅಂದರೆ ಮುಂಗಾರು ಮಳೆ ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಇದನ್ನು ಓದಿ: ಕತ್ತಲು ಆವರಿಸಿದ್ದ ಭಾವನಾ ಬದುಕಿಗೆ ಬೆಳಕಾಗಿ ಬಂದಿದ್ದ ನವೀನ್.. ಜೀವನವೇ ಬದಲಾಯ್ತು!
ಸ್ನೇಹಿತರಿಗೋಸ್ಕರವೇ ‘ಗೋಲ್ಡನ್ ಗ್ಯಾಂಗ್’!
ಹಿರಿತೆರೆ , ಕಿರುತೆರೆ , ರಾಜಕೀಯ , ಕ್ರೀಡಾವಲಯ ಹೀಗೆ ವಿವಿಧ ಕ್ಷೇತ್ರಗಳ ಸಾಧಕರು ಅವರ ಸ್ನೇಹಿತರುಗಳು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ ಅಷ್ಟೇ ಅಲ್ಲದೆ ವೀಕ್ಷಕರಿಗೆ ತಮ್ಮ ಬಾಲ್ಯ , ಯೌವ್ವನದ ದಿನಗಳನ್ನು , ತಾವಾಡಿದ ಆಟ - ತುಂಟಾಟಗಳನ್ನು ನೆನಪಿಸಲಿದೆ ಎನ್ನುತ್ತಿದೆ ಜೀ ಕನ್ನಡ ನಮ್ಮೆಲ್ಲರ " ಗೋಲ್ಡನ್ ಗ್ಯಾಂಗ್ " ಗಳ ಜೊತೆಗೆ ಕಾರ್ಯಕ್ರಮ ನೋಡೋಣ ಸ್ನೇಹವನ್ನು ಸಂಭ್ರಮಿಸೋಣ.ಗೋಲ್ಡನ್ ಸ್ಟಾರ್ ಗಣೇಶ್ಗೆ ಕಿರುತೆರೆ ಹೊಸದೇನಲ್ಲಾ. ಇಲ್ಲಿಂದಲೇ ಗಣೇಶ್ ವೃತ್ತಿ ಜೀವನ ಆರಂಭ ಆಗಿತ್ತು. ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗಲೂ ಆಗಾಗ ಕಿರು ತೆರೆಯಲ್ಲಿ ರಿಯಾಲಿಟಿ ಶೋ ಮೂಲಕ ಜನರ ರಂಜಿಸಿದ್ದಾರೆ. ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಈ ಶೋ ಪ್ರಸಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ