ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ (Baanadariyalli Movie New Updates) ಅಭಿನಯದ ಬಾನದಾರಿಯಲ್ಲಿ ಸಿನಿಮಾ ರೆಡಿ ಆಯಿತೇ? ಅಪ್ಪು ಜನ್ಮ ದಿನ ಮಾರ್ಚ್-17 ರಂದು ಸಿನಿಮಾ ಬರೋದಿತ್ತು. ಆ ದಿನ (Golden Star Ganesh Latest News) ಯಾಕೆ ಈ ಸಿನಿಮಾ ಬರಲಿಲ್ಲ. ಸರಿ ಅಂದು ಕಬ್ಜ ಬಂತು. ಹಾಗಾಗಿಯೇ ಈ ಸಿನಿಮಾ ರಿಲೀಸ್ ಆಗಲಿಲ್ಲ ಬಿಡಿ. ಆದರೂ ಇನ್ನೂ ಸಿನಿಮಾ ಯಾಕೆ ರಿಲೀಸ್ ಆಗಿಲ್ಲ. ಏನ್ ಇರಬಹುದು ಕಾರಣ? ಈ ಸಿನಿಮಾ ಮೂಲಕ ಆಫ್ರಿಕಾದ ಮಸೈಮಾರ ಕಾಡಿನ ಅದ್ಭುತ ದೃಶ್ಯಗಳನ್ನ (Baanadariyalli Movie Release Updates) ಕೂಡ ತೆಗೆಯಲಾಗಿದೆ. ಅದನ್ನ ನೋಡೋದು ಯಾವಾಗ? ಡೈರೆಕ್ಟರ್ ಪ್ರೀತಂ ಗುಬ್ಬಿ ಚಿತ್ರವನ್ನ ಇನ್ನು ಮುಗಿಸಿಲ್ವೇ?
ಈ ಎಲ್ಲ ಪ್ರಶ್ನೆಗೆ ಇಲ್ಲೊಂದಿಷ್ಟು (Golden Star Ganesh New Movie) ಇಂಟ್ರಸ್ಟಿಂಗ್ ಉತ್ತರ ಸಿಕ್ಕಿದೆ. ಅದನ್ನ ಇಲ್ಲಿ ಹೇಳಿದ್ದೇವೆ ಓದಿ.
ಬಾನದಾರಿಯಲ್ಲಿ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ?
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಇದೆ. ಈ ನಿರೀಕ್ಷೆ ಇರಲು ಕಾರಣ ಚಿತ್ರದ ಬಗ್ಗೆ ಈಗಾಗಲೇ ಹೊರ ಬಂದಿರೋ ಒಂದಷ್ಟು ಸ್ಪೆಷಲ್ ವಿಷಯಗಳು ಅಂತಲೇ ಹೇಳಬಹುದು. ಇದರ ಜೊತೆಗೆ ಕನ್ನಡದ ಈ ಚಿತ್ರವನ್ನ ದೂರದ ಆಫ್ರಿಕಾದ ಮಸೈಮರಾ ಕಾಡಿನಲ್ಲೂ ಚಿತ್ರೀಕರಿಸಲಾಗಿದೆ.
ವಿಶೇಷವಾಗಿ ಈ ಚಿತ್ರದ ಬಹುತೇಕ ಭಾಗವನ್ನ ಆಫ್ರಿಕಾದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿಯ ಮಸೈಮರಾ ಕಾಡಿನಲ್ಲಿ ಚಿತ್ರೀಕರಿಸೋವಾಗ ಇಡೀ ಟೀಮ್ ವಿವಿಧ ಅನುಭವವನ್ನ ಕೂಡ ಪಡೆದುಕೊಂಡಿದೆ. ಹೆಚ್ಚು-ಕಡಿಮೆ ಎರಡು ಕಿಲೋಮೀಟರ್ ನಡೆದುಕೊಂಡೇ ಕಾಡಿನೊಳಗೆ ಚಿತ್ರೀಕರಣ ಮಾಡಿದ ಅನುಭವವನ್ನ ಕೂಡ ಸಿನಿಮಾ ತಂಡ ಪಡೆದುಕೊಂಡಿದೆ.
ಕೀನ್ಯಾದಲ್ಲಿ ಕನ್ನಡದ ಸಿನಿಮಾ ಭರ್ಜರಿ ಶೂಟಿಂಗ್
ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಏನಂದ್ರೆ, ಇಲ್ಲಿಯ ಮಾರುಕಟ್ಟೆ ಮತ್ತು ಇಲ್ಲಿಯ ಪುರಾತನ ಗುಹೆಯಲ್ಲೂ ಕನ್ನಡದ ಬಾನದಾರಿಯಲ್ಲಿ ಚಿತ್ರದ ಚಿತ್ರೀಕರಣ ಆಗಿದೆ. ವಿಶೇಷವಾಗಿಯೇ ಈ ಚಿತ್ರದಲ್ಲಿ ಕಿನ್ಯಾದ ಪ್ರಮುಖ ಸ್ಥಳಗಳನ್ನ ಕೂಡ ಸೆರೆಹಿಡಿಯಲಾಗಿದೆ.
ಹಿರಿಯ ನಟ ರಂಗಾಯಣ ರಘು, ನಾಯಕಿ ರುಕ್ಮಿಣಿ ವಸಂತ, ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ ಹೀಗೆ ಇನ್ನೂ ಅನೇಕರು ಅಭಿನಯದ ಈ ಚಿತ್ರದ ಚಿತ್ರೀಕರಣ ಎಲ್ಲಿಗೆ ಬಂದಿದೆ. ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿಯೇ ಇದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾ ರೆಡಿ ಟು ರಿಲೀಸ್ ಅನ್ನುವ ಸತ್ಯ ಕೂಡ ಈಗಾಗಲೇ ರಿವೀಲ್ ಆಗಿದೆ.
ಪುನೀತ್ ರಾಜ್‌ಕುಮಾರ್ ಜನ್ಮ ದಿನಕ್ಕೆ ಚಿತ್ರ ಬರಲೇ ಇಲ್ಲ
ಬಾನದಾರಿಯಲ್ಲಿ ಸಿನಿಮಾ ರೆಡಿಯಾಗಿದ್ದು, ಚಿತ್ರವನ್ನ ಮಾರ್ಚ್-17 ರಂದು ರಿಲೀಸ್ ಮಾಡುವ ಪ್ಲಾನ್ ಕೂಡ ಇತ್ತು. ಪುನೀತ್ ರಾಜ್‌ಕುಮಾರ್ ಜನ್ಮದಿನದಂದು ಈ ಚಿತ್ರವನ್ನ ರಿಲೀಸ್ ಮಾಡುವ ಅನೌನ್ಸ್‌ಮೆಂಟ್ ಕೂಡ ಆಗಿತ್ತು. ಆದರೆ ಆಗ ಪ್ಯಾನ್ ಇಂಡಿಯಾ ಕಬ್ಜ ರಿಲೀಸ್ ಅನೌನ್ಸ್ ಆಗಿದ್ದೇ ತಡ, ಎಲ್ಲ ಪ್ಲಾನ್ ಬದಲಾಗಿಯೇ ಬಿಟ್ಟವು ನೋಡಿ.
ಇದೀಗ ಈ ಚಿತ್ರವನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗುತ್ತಿದೆ. ಡೈರೆಕ್ಟರ್ ಪ್ರೀತಂ ಗುಬ್ಬಿ ತಮ್ಮ ಈ ಚಿತ್ರದ ರಿಲೀಸ್ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ತಮ್ಮ ಈ ಚಿತ್ರವನ್ನ ಯಾವಾಗ ರಿಲೀಸ್ ಮಾಡುತ್ತೇವೆ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.
ಬಾನದಾರಿಯಲ್ಲಿ ಸಿನಿಮಾ ಯಾವಾಗ ರಿಲೀಸ್ ಗೊತ್ತೇ?
ನಮ್ಮ ಚಿತ್ರವನ್ನ ಈಗಲೇ ರಿಲೀಸ್ ಮಾಡೋದಿಲ್ಲ. ಮೊದಲು ಎಲೆಕ್ಷನ್ ಮುಗಿಯಬೇಕು. ಇದಾದ್ಮೇಲೆ ಐಪಿಎಲ್ ಪಂದ್ಯಗಳು ಮುಗಿಯಬೇಕು. ಆಗಲೇ ಬಾನದಾರಿಯಲ್ಲಿ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ಚಿತ್ರದ ಡೈರೆಕ್ಟರ್ ಪ್ರೀತಂ ಗುಬ್ಬಿ ಹೇಳಿಕೊಂಡಿದ್ದಾರೆ.
ಅರ್ಜುನ್ ಜನ್ಯ ಸಂಗೀತದ ಈ ಚಿತ್ರದ ಹಾಡುಗಳು ಗಮನ ಸೆಳೆದಿವೆ. ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿ ಕುತೂಹಲ ಮೂಡಿಸಿದೆ. ಅಭಿಲಾಷ್ ಕಲ್ಲತ್ತಿ ಕ್ಯಾಮೆರಾ ಕಣ್ಣಲ್ಲಿ ಬಾನದಾರಿಯಲ್ಲಿ ಸಿನಿಮಾ ಮೂಡಿ ಬಂದಿದೆ.
ಇದನ್ನೂ ಓದಿ: Kannada Serial: ಭಾಗ್ಯಲಕ್ಷ್ಮೀ ಸೀರಿಯಲ್ನ ತಾಂಡವ್ ಆಡಿಷನ್ ಮಾಡಿದ ನಟಿ ಯಾರು ಗೊತ್ತೇ?
ಮಾಸ್ತಿ ಡೈಲಾಗ್ ಬರೆದಿದ್ದಾರೆ. ಪ್ರೀತಂ ಜಯರಾಮ್ ಬರೆದ ಕಥೆಯನ್ನ ಡೈರೆಕ್ಟರ್ ಪ್ರೀತಂ ಗುಬ್ಬಿ ಡೈರೆಕ್ಟ್ ಮಾಡಿದ್ದಾರೆ. ಒಟ್ಟಾರೆ ಚಿತ್ರ ಎಲೆಕ್ಷನ್ ಮತ್ತು ಐಪಿಎಲ್ ಪಂದ್ಯ ಮುಗಿದ ಮೇಲೆನೇ ರಿಲೀಸ್ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ