Happy Birthday Ganesh: ತ್ರಿಬಲ್ ರೈಡಿಂಗ್​ನಲ್ಲಿ ಗಾಳಿಪಟ ಹಾರಿಸ್ತಿದ್ದಾರೆ ಬರ್ತಡೇ ಬಾಯ್ ಗಣೇಶ್

Golden Star Ganesh: ‘ಸಖತ್’​ ಸಿನಿಮಾದ ಜೊತೆಗೆ ‘ತ್ರಿಬಲ್​ ರೈಡಿಂಗ್’ ಹೋಗಲು ರೆಡಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ, ‘ಗಾಳಿಪಟ 2’ ಹಾರಿಸಲು ಮುಂದಾಗಿದ್ದಾರೆ ಗೋಲ್ಡನ್​ ಸ್ಟಾರ್​​ ಗಣೇಶ್​.

Golden Star Ganesh

Golden Star Ganesh

 • Share this:
  ನಮಸ್ಕಾರ.. ನಮಸ್ಕಾರ..ನಮಸ್ಕಾರ ಎನ್ನುತ್ತ ಅಭಿಮಾನಿಗಳ ಮನಗೆದ್ದ  ಸ್ಯಾಂಡಲ್​ವುಡ್​ ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮುಂಗಾರು ಮಳೆಗೆ ಗಾಳಿಪಟ ಹಾರಿಸಿದ ಈ ನಟ ಇಂದು 41ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅಭಿಮಾನಿಗಳಂತೂ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರುತ್ತಿದ್ದಾರೆ.

  ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ ಗಣೇಶ್​ ಕೊರೋನಾ ಸಾಂಕ್ರಾಮಿಕದಿಂದಾಗಿರುವ ಸಾವು ನೋವುಗಳಿಂದ ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದ ಅವರು ಹುಟ್ಟುಹಬ್ಬದಂದು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿಕೊಂಡಿರುತ್ತೇನೆ ಎಂದಿದ್ದರು.

  ಸೆಲೆಬ್ರಿಟಿ ಎಂದ ಮೇಲೆ ಮನೆಯ ಎದುರು ಅಭಿಮಾನಿಗಳು ಜಮಾಯಿಸುವುದು ಸಾಮಾನ್ಯ. ಹಾಗೆಯೇ ನೆಚ್ಚಿನ ನಟನಿಗೆ ಹೂವು, ಹಣ್ಣ ಹಂಪಲು, ಕೇಕ್​ ತಂದು ಹಬ್ಬ ಆಚರಿಸಿಕೊಳ್ಳುತ್ತಾ. ಒಂದು ಫೀಸ್ ಕೇಕ್​ ತಿನ್ನಿಸಿ ಶುಭಾಶಯ ಕೋರುವ ಅಭಿಮಾನಿಗಳೇ ಹೆಚ್ಚು. ಆದರೆ ಈ ಬಾರಿ ಉಡುಗೊರೆ ಮುಂತಾದುವುದಕ್ಕೆ ಹಣ ಖರ್ಚು ಮಾಡದೆ ಅದೇ ಹಣವನ್ನು ಕೊರೊನಾ ಸಂಕಷ್ಟದಲ್ಲಿರುವ ಜೀವಗಳಿಗೆ ನೀಡಿ ಎಂದು ಗಣೇಶ್​ ಮನವಿ ಮಾಡಿದ್ದಾರೆ.

  ಹುಟ್ಟುಹಬ್ಬದಂದು ಗೋಲ್ಡನ್​ ಸ್ಟಾರ್​ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಸಖತ್’​ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಸೆಟ್​ಗೆ ತೆರಳಿರುವುದು ರಿಫ್ರೆಶ್​ ಎನಿಸಿದೆ. ಇದು ಸಂತೋಷ ನೀಡುವ ಕೆಲಸ, ನಾನು ಇಷ್ಟಪಡುವುದನ್ನು ಮಾಡಲು ಸಂತೋಷವಾಗುತ್ತಿದೆ. ಸೆಟ್​ ವಾತಾವರಣ, ಸ್ನೇಹಿತರ ಭೇಟಿ, ಸಿಬ್ಬಂಧಿಯೊಂದಿಗೆ ಮಾತನಾಡುವುದು ಮತ್ತು 2 ತಿಂಗಳ ನಂತರ ಕ್ಯಾಮೆರಾ ಎದುರಿಸುವುದು ನಿಜವಾಗಿಯೂ ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.

  ಅಂದಹಾಗೆಯೇ ‘ಸಖತ್’​​ ಸುನಿ ನಿರ್ದೇಶನ ಸಿನಿಮಾಗಿದೆ. ಕೆವಿಎನ್​ ಪ್ರೊಡಕ್ಷನ್​ನಲ್ಲಿ ರಿಯಾಲಿಟಿ ಶೋ ಆಧರಿಸಿ ಸಖತ್​ ಸಿನಿಮಾವನ್ನು ತೆರೆಗೆ ತರುವ ಪ್ಲಾನ್​ ಚಿತ್ರತಂಡದ್ದು, ಇದೊಂದು ಕೋರ್ಟ್​ ರೂಂ ಡ್ರಾಮಾ ಆಗಿದ್ದು, ಗಣೇಶ್​ ಮೊದಲ ಬಾರಿಗೆ ವಿಶೇಷಚೇತನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ನಿಶ್ವಿಕ ನಾಯ್ಡು ನಟಿಸುತ್ತಿದ್ದಾರೆ.

  ‘ಸಖತ್’​ ಸಿನಿಮಾದ ಜೊತೆಗೆ ‘ತ್ರಿಬಲ್​ ರೈಡಿಂಗ್’ ಹೋಗಲು ರೆಡಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ, ‘ಗಾಳಿಪಟ 2’ ಹಾರಿಸಲು ಮುಂದಾಗಿದ್ದಾರೆ. ಕೊರೊನಾ ಮುಗಿದ ನಂತರ ಒಂದೊಂದೇ ಸಿನಿಮಾಗಳನ್ನು ಅಭಿಮಾನಿಗಳಿಗೆ ಒಪ್ಪಿಸಲಿದ್ದಾರೆ.
  Published by:Harshith AS
  First published: