ಆರ್ಆರ್ಆರ್ ಗೋಲ್ಡನ್ ಗ್ಲೋಬ್ಸ್ನಲ್ಲಿ (Golden Globes 2023) ಬಂದಿದ್ದು ಐತಿಹಾಸಿಕ ಗೆಲುವನ್ನು ಮುಡಿಗೇರಿಸಿಕೊಂಡಿದೆ. ಗೋಲ್ಡನ್ ಗ್ಲೋಬ್ಸ್ನಲ್ಲಿ ಅವಾರ್ಡ್ ಮುಡಿಗೇರಿಸಿಕೊಂಡು ಗೆದ್ದು ಬೀಗಿದೆ ರಾಜಮೌಳಿ ಸಿನಿಮಾ. SS ರಾಜಮೌಳಿಯವರ (SSR) ಬ್ಲಾಕ್ಬಸ್ಟರ್ ಹಾಲಿವುಡ್ನ (Hollywood) ಅತಿದೊಡ್ಡ ಪ್ರಶಸ್ತಿಗಳಲ್ಲಿ ಒಂದಾಗಿರುವ ಪ್ರಶಸ್ತಿ ಪಡೆದಿದೆ. ವಿಶ್ವಾದ್ಯಂತ ವೈರಲ್ ಆದಂತಹ ನಾಟು ನಾಟು (Natu Natu) ಹಾಡಿಗಾಗಿ ಅತ್ಯುತ್ತಮ ಒರಿಜಿನಲ್ ಸಾಂಗ್ ಅವಾರ್ಡ್ (Best original Song) ಗೆದ್ದಿದೆ.
ಬೆಸ್ಟ್ ಒರಿಜಿನಲ್ ಸಾಂಗ್ ಅವಾರ್ಡ್ ವಿಭಾಗದಲ್ಲಿ ವೇರ್ ದಿ ಕ್ರಾಡಾಡ್ಸ್ ಸಿಂಗ್ನಿಂದ ಟೇಲರ್ ಸ್ವಿಫ್ಟ್ನ ಕ್ಯಾರೊಲಿನಾ, ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೊದಿಂದ ಸಿಯೊ ಪಾಪಾ, ಟಾಪ್ ಗನ್ನಿಂದ ಲೇಡಿ ಗಾಗಾಸ್ ಹೋಲ್ಡ್ ಮೈ ಹ್ಯಾಂಡ್: ಮೇವರಿಕ್ ಮತ್ತು ಲಿಫ್ಟ್ ಮಿ ಅಪ್ ಫ್ರಮ್ ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ ಹಾಡುಗಳು ನಾಮಿನೇಟ್ ಆಗಿದ್ದವು.
ಇಂಗ್ಲಿಷ್ ಅಲ್ಲದೆ ಬೇರೆ ಭಾಷೆಯ ಸಿನಿಮಾಗಳ ವಿಭಾಗದಲ್ಲಿ RRR ಗೋಲ್ಡನ್ ಗ್ಲೋಬ್ಸ್ನಲ್ಲಿ ಎರಡನೇ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಆರ್ಆರ್ಆರ್ ಸಿನಿಮಾವನ್ನು ಗೋಲ್ಡನ್ ಗ್ಲೋಬ್ಸ್ನಲ್ಲಿ ಅದರ ನಿರ್ದೇಶಕರು ಮತ್ತು ಸ್ಟಾರ್ ನಟರು ಪ್ರತಿನಿಧಿಸುತ್ತಿದ್ದಾರೆ. ಎಸ್ಎಸ್ ರಾಜಮೌಳಿ, ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರೊಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ.
ಇದನ್ನೂ ಓದಿ: RRR: ನಾಚೊ ನಾಚೊ ಡ್ಯಾನ್ಸ್ ಮೇನಿಯಾ! ಹುಕ್ಸ್ಟೆಪ್ ಟ್ರೈ ಮಾಡಿ 4 ಲಕ್ಷ ಜನರ ಕಾಲು ಟ್ವಿಸ್ಟ್
ಜೂನಿಯರ್ NTR ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಪಿರಿಯಡಿಕಲ್ ಡ್ರಾಮಾ ಸಿನಿಮಾ 1920 ರ ಬ್ರಿಟಿಷ್ ಆಕ್ರಮಿತ ಭಾರತದ ಚಿತ್ರಣ ತೋರಿಸುತ್ತದೆ. ಪಾತ್ರವರ್ಗದಲ್ಲಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಜೊತೆಗೆ ಬ್ರಿಟಿಷ್ ನಟರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಇದ್ದಾರೆ.
ಕಲೆಕ್ಷನ್ ಎಷ್ಟು?
ಜಾಗತಿಕವಾಗಿ ₹ 1,200 ಕೋಟಿ ಗಳಿಸಿದ RRR ಈಗಾಗಲೇ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗಳಲ್ಲಿ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಸೇರಿದಂತೆ ಅಂತರರಾಷ್ಟ್ರೀಯ ಗೌರವಗಳನ್ನು ಗೆದ್ದಿದೆ.
RRR ವಿವಿಧ ಆಸ್ಕರ್ ವಿಭಾಗಗಳಲ್ಲಿ ಪರಿಗಣನೆಗೆ ಸ್ವತಃ ಅರ್ಜಿ ಸಲ್ಲಿಸಿದೆ. ಹೆಚ್ಚು ಅಲ್ಲದಿದ್ದರೂ ಕನಿಷ್ಠ ಒಂದು ವಿಭಾಗದಲ್ಲಿ ನಾಮನಿರ್ದೇಶನಗೊಳ್ಳುವ ನಿರೀಕ್ಷೆಯಿದೆ.
ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿರುವ ಗೋಲ್ಡನ್ ಗ್ಲೋಬ್ಸ್ ಅನ್ನು ಹಾಸ್ಯನಟ ಜೆರೋಡ್ ಕಾರ್ಮೈಕಲ್ ಹೋಸ್ಟ್ ಆಗಿ ಆಯೋಜಿಸುತ್ತಿದ್ದಾರೆ. ಕಳೆದ ವರ್ಷದ ಗೋಲ್ಡನ್ ಗ್ಲೋಬ್ಗಳನ್ನು ಎನ್ಬಿಸಿ ಬಹಿಷ್ಕರಿಸಿತು. ಅದು ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಟಾಮ್ ಕ್ರೂಸ್ ನೇತೃತ್ವದ ಹಾಲಿವುಡ್ನ ಅನೇಕ ದೊಡ್ಡ ತಾರೆಗಳು ಅವರ ಮೂರು ಗ್ಲೋಬ್ಗಳನ್ನು ಹಿಂದಿರುಗಿಸಿದರು.
ನೆಟ್ಫ್ಲಿಕ್ಸ್ ಇಂಡಿಯಾ ನಾಚೊ ನಾಚೊ ಸಿನಿಮಾದ ಕುರಿತು ಹೊಸ ಅಪ್ಡೇಟ್ ಹಂಚಿಕೊಂಡಿದ್ದು ಈ ಹಾಡು ಎಷ್ಟು ಕ್ರೇಜ್ ಸೃಷ್ಟಿಸಿದೆ ಎನ್ನುವುದನ್ನು ರಿವೀಲ್ ಮಾಡಿದೆ. 4,25,936 ಜನರು ನಾಚೊ ನಾಚೊ ಹಾಡಿನ ಹುಕ್ ಸ್ಟೆಪ್ ರೀ-ಕ್ರಿಯೇಟ್ ಮಾಡೋಕೆ ಹೋಗಿ ಕಾಲು ಟ್ವಿಸ್ಟ್ ಮಾಡಿಕೊಂಡಿದ್ದಾರೆ ಎಂದು ನೆಟ್ಫ್ಲಿಕ್ಸ್ ತಿಳಿಸಿದೆ. ಅಂತೂ ಡ್ಯಾನ್ಸ್ ಗೊತ್ತಿರೋರು, ಗೊತ್ತಿಲ್ಲದೆ ಇರೋರು ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ತ್ರಿಬಲ್ ಆರ್ ಸಿನಿಮಾ ಭಾಷೆಯ ಗಡಿಯನ್ನು ಮೀರಿ ಎಲ್ಲಾ ಕಡೆಗಳಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ. ಸಿನಿಮಾ ನೋಡಿದ ಮಂದಿ ಇದನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ಟಿಆರ್ ಡ್ಯಾನ್ಸ್ ಮಾಡುವ ನಾಟು ನಾಟು ಸಾಂಗ್ ಎಲ್ಲೆಡೆ ಹಿಟ್ ಆಗಿದೆ. ಇದರ ಸ್ಟೆಪ್ ಭಾರೀ ಕಷ್ಟ ಎನಿಸುವುದು ಮಾತ್ರವಲ್ಲದೆ ತುಂಬಾ ಸ್ಫೀಡಾಗಿರುವ ಸ್ಟೆಪ್ ಎಂಬಂತೆ ಕಾಣಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ