ವೈರಲ್ ಆಯಿತು Sakath Teaser​: ಮತ್ತೊಮ್ಮೆ ನಕ್ಕು ನಲಿಸಲಿದ್ದಾರೆ ಗಣಿ-ಸುನಿ..!

ಸಖತ್​ ಒಂದು ರೊಮ್ಯಾಂಟಿಕ್ ಕಾಮಿಡಿ ಕಮ್ ಕ್ರೈಂ ಥ್ರಿಲ್ಲರ್ ಶೈಲಿಯ ಸಿನಿಮಾ ಆಗಿದ್ದು, ಆ ಎಲ್ಲದರ ಝಲಕ್ ನೋಡುಗರಿಗೆ ಟೀಸರ್​ನಲ್ಲಿಯೇ ದೊರೆಯುತ್ತದೆ. ಗೋಲ್ಡನ್ ಸ್ಟಾರ್ ಕಾಮಿಡಿ ಕಿಕ್ ಜೊತೆಗೆ ಅಂಧನ ಪಾತ್ರದಲ್ಲಿಯೂ ಫೈಟ್ಸ್ ಮಾಡಿದ್ದಾರೆ.

ರಿಲೀಸ್ ಆಯ್ತು ಗಣೇಶ್​ ಅಭಿನಯದ ಸಖತ್​ ಚಿತ್ರದ ಟೀಸರ್​

ರಿಲೀಸ್ ಆಯ್ತು ಗಣೇಶ್​ ಅಭಿನಯದ ಸಖತ್​ ಚಿತ್ರದ ಟೀಸರ್​

  • Share this:
ಗೋಲ್ಡನ್ ಸ್ಟಾರ್ ಗಣೇಶ್  (Golden Star Ganesh) 'ಸಖತ್' ಚಿತ್ರದ ಮೂಲಕ ವಿಭಿನ್ನ ಪಾತ್ರದಲ್ಲಿ ಸಖತ್‍ಆಗಿಯೇ ಮಿಂಚುತ್ತಿದ್ದಾರೆ. 2017ರಲ್ಲಿ ರಿಲೀಸ್ ಆದ ಹಿಟ್ ಸಿನಿಮಾ ಚಮಕ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಚಿತ್ರ 'ಚಮಕ್'. ವಿಶೇಷ ಅಂದರೆ ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ರಿಲೀಸ್  (Sakath Movie Teaser) ಆಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 13 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿದೆ. ಇದೇ ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ವಿಶೇಷ ಚೇತನನ ಪಾತ್ರದಲ್ಲಿ ನಟಿಸಿದ್ದು, ಟೀಸರ್​ ತುಂಬಾ ಸಿನಿಪ್ರಿಯರನ್ನು ನಕ್ಕು ನಗಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಇದೇ ಮೊದಲ ಬಾರಿಗೆ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದು, ತಮ್ಮ ಮುಗ್ಧತೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.

'ಸಖತ್'​ ಒಂದು ರೊಮ್ಯಾಂಟಿಕ್ ಕಾಮಿಡಿ ಕಮ್ ಕ್ರೈಂ ಥ್ರಿಲ್ಲರ್ ಶೈಲಿಯ ಸಿನಿಮಾ ಆಗಿದ್ದು, ಆ ಎಲ್ಲದರ ಝಲಕ್ ನೋಡುಗರಿಗೆ ಟೀಸರ್​ನಲ್ಲಿಯೇ ದೊರೆಯುತ್ತದೆ. ಗೋಲ್ಡನ್ ಸ್ಟಾರ್ ಕಾಮಿಡಿ ಕಿಕ್ ಜೊತೆಗೆ ಅಂಧನ ಪಾತ್ರದಲ್ಲಿಯೂ ಫೈಟ್ಸ್ ಮಾಡಿದ್ದಾರೆ.ಟಿವಿ ರಿಯಾಲಿಟಿ ಶೋ, ಒಂದು ಕೊಲೆ ಹಾಗೂ ಕೋರ್ಟ್ ಕೇಸ್ ಸುತ್ತ 'ಸಖತ್' ಕಥೆಯನ್ನು ಹೆಣೆಯಲಾಗಿದೆ. ರಂಗಾಯಣ ರಘು, ಸಾಧು ಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಹಲವು ಹಾಸ್ಯನಟರ ದಂಡೇ ಚಿತ್ರದಲ್ಲಿದ್ದು, ಹಾಸ್ಯದ ರಸದೌತಣ ಬಡಿಸುವ ಎಲ್ಲ ನಿರೀಕ್ಷೆಗಳೂ ಇವೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಚಿತ್ರದಲ್ಲಿ ಕಣ್ಣಿಲ್ಲದ ವ್ಯಕ್ತಿಯ ಪಾತ್ರದಲ್ಲಿ ನಟಿಸಿರುವ ಕಾರಣ ಕನ್ನಡದಲ್ಲೇ ರಿಲೀಸ್ ಆದ ಶಿವರಾಜ್‍ಕುಮಾರ್ ಅವರ 'ಕವಚ' ಚಿತ್ರಕ್ಕೆ ಅಥವಾ ಬಾಲಿವುಡ್‍ನಲ್ಲಿ ಆಯುಷ್ಮಾನ್ ಖುರಾನಾ ನಟಿಸಿದ್ದ 'ಅಂಧಾಧುನ್' ಚಿತ್ರಕ್ಕೂ ಹೋಲಿಕೆ ಮಾಡುವುದು ಸಾಮಾನ್ಯ. ಆದರೆ ಅದಕ್ಕೂ ಟೀಸರ್​ನಲ್ಲಿ ಸಿಂಪಲ್ ಸುನಿ ಮತ್ತು ಗೋಲ್ಡನ್ ಗಣಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Ganesh: ರಿಲೀಸ್​ ಆಯ್ತು ಪ್ರೇಮಕ್ಕೆ ಕಣ್ಣಿಲ್ಲಾ ಹಾಡು: ಪ್ರಚಾರ ಕಾರ್ಯ ಆರಂಭಿಸಿದ ಸಖತ್​ ಚಿತ್ರತಂಡ

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ 'ಸಖತ್' ಚಿತ್ರವನ್ನು ನಿರ್ಮಿಸಲಾಗಿದ್ದು, ನಿಶಾ ವೆಂಕಟ್ ಕೋಣಂಕಿ ಹಾಗೂ ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್, ಶಾಂತ ಕುಮಾರ್ ಸಂಕಲನ, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಈಗಾಗಲೇ ಸೆನ್ಸಾರ್ ಮುಗಿಸಿರುವ ಸಖತ್ ಚಿತ್ರವು ಇದೇ ನವೆಂಬರ್ 12ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.

2019ರಲ್ಲಿ '99', 'ಗಿಮಿಕ್', 'ಗೀತಾ' ಚಿತ್ರಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಈಗ ಕೊರೋನಾ ಕಂಟಕ ಮುಗಿದು ಎರಡು ವರ್ಷಗಳ ನಂತರ ಸಖತ್ ಮೂಲಕ ಮತ್ತೆ ಬಿಗ್ ಸ್ಕ್ರೀನ್‍ಗೆ ರೀ-ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. 'ಸಖತ್' ಬೆನ್ನಲ್ಲೇ 'ತ್ರಿಬಲ್ ರೈಡಿಂಗ್', 'ಗಾಳಿಪಟ 2' ಹಾಗೂ 'ದ ಸ್ಟೋರಿ ಆಫ್ ರಾಯಗಢ್'​ ಚಿತ್ರಗಳೂ ಸದ್ಯ ಚಿತ್ರೀಕರಣದ ಬೇರೆ ಬೇರೆ ಹಂತದಲ್ಲಿವೆ.

ಇದನ್ನೂ ಓದಿ: Sakath: ರಿಲೀಸ್​ ದಿನಾಂಕ ಪ್ರಕಟಿಸಿದ ಗೋಲ್ಡನ್​ ಸ್ಟಾರ್​ ಗಣೇಶ್​..!

ಹಾಗೇ 2019ರ 'ಬಜಾರ್' ಚಿತ್ರದ ಬಳಿಕ ಕೊರೋನಾದಿಂದಾಗಿ ನಿರ್ದೇಶಕ ಸಿಂಪಲ್ ಸುನಿಯ ಚಿತ್ರಗಳೂ ರಿಲೀಸ್ ಆಗಿರಲಿಲ್ಲ. ಈಗ ಇದೇ ನವೆಂಬರ್ 12ರಂದು ಸಖತ್ ರಿಲೀಸ್ ಆಗಲಿದ್ದು, ಆ ಬಳಿಕ 'ಅವತಾರ ಪುರುಷ', 'ರಾಬಿನ್‍ಹುಡ್' ಹಾಗೂ 'ಗೋಲ್ಡನ್ ಸ್ಟಾರ್ ಗಣೇಶ್' ಜತೆ ಮೂರನೇ ಕಾಂಬಿನೇಷನ್ ಚಿತ್ರ 'ದ ಸ್ಟೋರಿ ಆಫ್ ರಾಯಗಢ್' ಚಿತ್ರಗಳು ತೆರೆಗೆ ಬರಲಿವೆ.
Published by:Anitha E
First published: