ಬಿಡುಗಡೆಯಾಗಿದೆ ಅಕ್ಷಯ್​ ಕುಮಾರ್​ ಅಭಿನಯದ 'ಗೋಲ್ಡ್'​ ಸಿನಿಮಾದ ಟ್ರೇಲರ್​

news18
Updated:June 25, 2018, 4:40 PM IST
ಬಿಡುಗಡೆಯಾಗಿದೆ ಅಕ್ಷಯ್​ ಕುಮಾರ್​ ಅಭಿನಯದ 'ಗೋಲ್ಡ್'​ ಸಿನಿಮಾದ ಟ್ರೇಲರ್​
news18
Updated: June 25, 2018, 4:40 PM IST
ನ್ಯೂಸ್​ 18 ಕನ್ನಡ 

ಅಕ್ಷಯ್​ ಕುಮಾರ್​ ಅಭಿನಯದ 'ಗೋಲ್ಡ್​' ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. ತಪನ್​ ದಾಸ್​ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅಕ್ಷಯ್​ ಕುಮಾರ್. 1948ರ ಒಲಂಪಿಕ್ಸ್​ನಲ್ಲಿ ಭಾರತ ಹಾಕಿ ಪಂದ್ಯವನ್ನು ಗೆದ್ದ ಐತಿಹಾಸಿಕ ಕ್ಷಣಗಳನ್ನು ಈ ಸಿನಿಮಾದಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ.

ತಪನ್​ ದಾಸ್ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಹಾಕಿ ತಂಡ ಒಲಂಪಿಕ್​ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಕನಸು ಕಂಡವರು. ಈ ಸಿನಿಮಾದ ಮೂಲಕ ಅಕ್ಷಯ್​ ಮತ್ತೊಮ್ಮೆ ದೇಶ ಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ನಿನ್ನೆಯಷ್ಟೆ ಈ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. ಫರ್ಹಾನ್​ ಅಖ್ತರ್​ ಹಾಗೂ ರಿತೇಶ್​ ಸಿದ್ವಾನಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು ರೀಮಾ ಖಾಗ್ಟಿ ನಿರ್ದೇಶಿಸುತ್ತಿದ್ದಾರೆ. ಅಕ್ಷಯ್​ ಜತೆಗೆ ಮೌನಿ ರಾಯ್​, ಕುನಾಲ್​ ಕಪೂರ್​, ವಿನೀತ್​ ಕುಮಾರ್​ ಸಿಂಗ್​ ಹಾಗೂ ಅಮಿತ್​ ಸಾದ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಆಗಸ್ಟ್​ 15ಕ್ಕೆ ತೆರೆಗೆ ಬರಲಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...