ಬಾಲಿವುಡ್ (Bollywood) ಲೆಜೆಂಡ್ ರಾಜ್ ಕಪೂರ್ (Raj Kapoor) ಅವರ ಬಂಗಲೆಯನ್ನು ಗೋದ್ರೆಜ್ ಪ್ರಾಪರ್ಟೀಸ್ (Godrej Properties) ವಶಪಡಿಸಿಕೊಂಡಿದೆ. ಗೋದ್ರೆಜ್ ಗ್ರೂಪ್‌ನ ರಿಯಲ್ ಎಸ್ಟೇಟ್ ಶಾಖೆಯಾಗಿರುವ ಗೋದ್ರೆಜ್ ಪ್ರಾಪರ್ಟೀಸ್ ಲಿಮಿಟೆಡ್, ಪ್ರೀಮಿಯಂ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಚೆಂಬೂರಿನಲ್ಲಿರುವ ರಾಜ್ ಕಪೂರ್ ಅವರ ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅನೌನ್ಸ್ ಮಾಡಿದೆ. ಈ ಸೈಟ್ ಮುಂಬೈನ (Mumbai) ಚೆಂಬೂರ್‌ನ ಡಿಯೋನಾರ್ ಫಾರ್ಮ್ ರಸ್ತೆಯಲ್ಲಿದೆ.
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ಪಕ್ಕದಲ್ಲಿರುವ ಈ ಪ್ರಾಪರ್ಟಿ ಚೆಂಬೂರಿನ ಅತ್ಯಂತ ಪ್ರೀಮಿಯಂ ವಸತಿ ಲೇಔಟ್ಗಳಲ್ಲಿ ಒಂದಾಗಿದೆ. ಪನಿಯು ಫೆಬ್ರವರಿ 17 ರಂದು ಬಿಎಸ್‌ಇಗೆ ಸಲ್ಲಿಸಿದ ದಾಖಲೆಯಲ್ಲಿ ಇದನ್ನು ತಿಳಿಸಿದೆ.
ಗೋದ್ರೆಜ್ ಪ್ರಾಪರ್ಟೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೌರವ್ ಪಾಂಡೆ ಅವರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಐಕಾನಿಕ್ ಪ್ರಾಜೆಕ್ಟ್ ಅನ್ನು ನಮ್ಮ ಪೋರ್ಟ್‌ಫೋಲಿಯೊಗೆ ಸೇರಿಸಲು ನಮಗೆ ಖುಷಿಯಾಗಿದೆ. ಈ ಅವಕಾಶವನ್ನು ನಮಗೆ ವಹಿಸಿಕೊಟ್ಟಿದ್ದಕ್ಕಾಗಿ ಕಪೂರ್ ಕುಟುಂಬಕ್ಕೆ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.
ಪ್ರೀಮಿಯಂ ಬೆಳವಣಿಗೆಗಳ ಬೇಡಿಕೆಯು ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿದೆ. ಈ ಯೋಜನೆಯು ಚೆಂಬೂರಿನಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ದೊಡ್ಡ ಅವಕಾಶವಾಗಿದೆ. ಅಲ್ಲಿರುವಂತಹ ನಿವಾಸಿಗಳಿಗೆ ದೀರ್ಘಕಾಲದ ಮೌಲ್ಯವನ್ನು ಸೃಷ್ಟಿಸುವ ಹಾಗೂ ಸೈಟ್‌ನ ಪರಂಪರೆಯನ್ನು ಸಂಭ್ರಮಿಸಲು ಮಹೋನ್ನತ ವಸತಿ ಸಮುದಾಯ ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Shamna Kasim: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಪೂರ್ಣ! ಸ್ಪೆಷಲ್ ಫೋಟೋಶೂಟ್
ರಾಜ್ ಕಪೂರ್ ಅವರ ಕುಟುಂಬದವರಾದ ಕಪೂರ್ ಕುಟುಂಬದಿಂದ ಭೂಮಿಯನ್ನು ಖರೀದಿಸಲಾಗಿದೆ ಎಂದು ಕಂಪನಿಯು ತನ್ನ ಫೈಲಿಂಗ್‌ನಲ್ಲಿ ತಿಳಿಸಿದೆ.
ಪ್ರಾಪರ್ಟಿ ಸೇಲ್ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ನಟ ಮತ್ತು ರಾಜ್ ಕಪೂರ್ ಅವರ ಪುತ್ರ ರಣಧೀರ್ ಕಪೂರ್, ಚೆಂಬೂರಿನಲ್ಲಿರುವ ಈ ವಸತಿ ನಮ್ಮ ಕುಟುಂಬಕ್ಕೆ ಬಹಳ ಭಾವನಾತ್ಮಕ ನಂಟಾಗಿದೆ. ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಸ್ಥಳದ ಮುಂದಿನ ಹಂತದ ಅಭಿವೃದ್ಧಿಗಾಗಿ ಈ ಶ್ರೀಮಂತ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಗೋದ್ರೇಜ್ ಪ್ರಾಪರ್ಟೀಸ್‌ನೊಂದಿಗೆ ಕೈ ಜೋಡಿಸಲು ಸಂತೋಷಪಡುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ