ನೀವಂದುಕೊಂಡಂತಿಲ್ಲ ಗೋದ್ರಾ: ಮೋಷನ್ ಪೋಸ್ಟರ್​​ ಮೂಲಕವೇ ನಿರೀಕ್ಷೆ ಹುಟ್ಟುಹಾಕಿದ ಚಿತ್ರತಂಡ

Godhraa: ಮೋಷನ್ ಪೋಸ್ಟರ್​ ಟೀಸರ್​ನಲ್ಲಿ ಚಿತ್ರದ ತಾರಾಬಳಗದ ಪರಿಚಯ ಮಾಡಿಕೊಡಲಾಗಿದ್ದು, ಇಲ್ಲಿ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ, ಅಚ್ಯುತ್ ಕುಮಾರ್ ರಾಜಕರಣಿಯಾಗಿ, ವಸಿಷ್ಠ ಸಿಂಹ ಪೈಲೆಟ್ ಆಗಿ ಮಿಂಚಿದ್ದಾರೆ.

zahir | news18-kannada
Updated:January 13, 2020, 8:30 PM IST
ನೀವಂದುಕೊಂಡಂತಿಲ್ಲ ಗೋದ್ರಾ: ಮೋಷನ್ ಪೋಸ್ಟರ್​​ ಮೂಲಕವೇ ನಿರೀಕ್ಷೆ ಹುಟ್ಟುಹಾಕಿದ ಚಿತ್ರತಂಡ
ಸತೀಶ್
  • Share this:
ಅಭಿನಯ ಚತುರ ನೀನಾಸಂ ಸತೀಶ್ ಸಿನಿಮಾ ಆಯ್ಕೆಯಲ್ಲೂ ಚತುರ ಎಂಬುದುನ್ನು ಹಲವು ಬಾರಿ ನಿರೂಪಿಸಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ 'ಗೋದ್ರಾ' ಚಿತ್ರ. 'ಚಂಬಲ್' ಚಿತ್ರದಲ್ಲಿ ಪವರ್ ಫುಲ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದ ಸತೀಶ್ ಈ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿದ್ದಾರೆ.

ಅಂದರೆ ಈ ಸಿನಿಮಾ ಸಾಮಾನ್ಯ ಪತ್ರಿಕೋದ್ಯಮದ ಸುತ್ತ ಸುತ್ತುವ ಕಥೆ ಹೊಂದಿರಲಿದೆಯೇ ಅಥವಾ ಹತ್ಯಾಕಾಂಡದ ಕಹಾನಿ ತಿಳಿಸಲಿದೆಯೇ ಎಂದು ಕೇಳಿದರೆ ಖಂಡಿತ ಇಲ್ಲ. ಏಕೆಂದರೆ ಇಲ್ಲಿ ಸತೀಶ್ ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

ಗೋದ್ರಾ ಚಿತ್ರದ ಮೋಷನ್ ಪೋಸ್ಟರ್​ ವಿಡಿಯೋ​ ಬಿಡುಗಡೆಯಾಗಿದ್ದು, ಫಸ್ಟ್ ಝಲಕ್ ಮೂಲಕವೇ ಚಿತ್ರತಂಡ ಕಮಾಲ್ ಮಾಡಿದೆ ಎನ್ನಬಹುದು. ''ಭಾರತ ಜಾತ್ಯತೀತವಾಗಿಲ್ಲದಿದ್ದರೆ, ಅದು ಭಾರತವಲ್ಲ'' ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನುಡಿಮುತ್ತಿನೊಂದಿಗೆ ಆರಂಭವಾಗುವ ಟೀಸರ್ ಜೂಧ್ ಸ್ಯಾಂಡಿ ಅವರ​ ಅದ್ಭುತ ಹಿನ್ನೆಲೆ ಸಂಗೀತದೊಂದಿಗೆ ಗಮನ ಸೆಳೆಯುತ್ತದೆ.

ಮೋಷನ್ ಪೋಸ್ಟರ್​ ವಿಡಿಯೋದಲ್ಲಿ ಚಿತ್ರದ ತಾರಾಬಳಗದ ಪರಿಚಯ ಮಾಡಿಕೊಡಲಾಗಿದ್ದು, ಇಲ್ಲಿ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ, ಅಚ್ಯುತ್ ಕುಮಾರ್ ರಾಜಕರಣಿಯಾಗಿ, ವಸಿಷ್ಠ ಸಿಂಹ ಪೈಲೆಟ್ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ: Bigg Boss Kannada 7: ಹುಡುಗಿಯರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ನೀಡಿದ ಹೇಳಿಕೆ ಕಿಚ್ಚನನ್ನೇ ಬೆಚ್ಚಿ ಬೀಳಿಸಿತು..!

ಯುವ ನಿರ್ದೇಶಕ ಕೆ.ಎಸ್.ನಂದೀಶ್ ಈ ಬಹುನಿರೀಕ್ಷಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚೊಚ್ಚಲ ಪ್ರಯತ್ನದ ವಿಡಿಯೋ ಮೂಲಕ ಸಿನಿಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿದ್ದಾರೆ. ಇನ್ನು ಜೇಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಸದ್ಯ ಗಾಂಧಿನಗರದಲ್ಲಿ ಕೇವಲ ಮೋಷನ್ ಪೋಸ್ಟರ್​ ನಿಂದಲೇ ಗೋದ್ರಾ ಸದ್ದು ಮಾಡಲಾರಂಭಿಸಿದ್ದು, ನೀನಾಸಂ ಸತೀಶ್ ಖಾತೆಗೆ ಮತ್ತೊಂದು ಹಿಟ್ ಸೇರ್ಪಡೆಯಾಗಲಿದೆ ಎಂದೇ ಹೇಳಲಾಗುತ್ತಿದೆ.
Published by: zahir
First published: January 13, 2020, 8:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading