ಸ್ಯಾಂಡಲ್ ವುಡ್ನ ಅಭಿನಯ ಚತುರ ಸತೀಶ್ ನೀನಾಸಂ ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇದಕ್ಕಾಗಿ ಜಿಮ್ನಲ್ಲಿ ಪ್ರತಿದಿನ ತಪ್ಪದೆ ಕಸರತ್ತು ನಡೆಸುತ್ತಿದ್ದಾರೆ. ಸತತ 20 ಕ್ಕೂ ಹೆಚ್ಚು ದಿನಗಳಿಂದ ಒಂದು ದಿನವೂ ತಪ್ಪಿಸದೆ ಸತೀಶ್ ಕಸರತ್ತು ನಡೆಸುತ್ತಿದ್ದು, ಆ ಕುರಿತು ಒಂದು ವೀಡಿಯೋ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಸತೀಶ್ ನೀನಾಸಂ ಅಯೋಗ್ಯ, ಚಂಬಲ್, ಬ್ರಹ್ಮಚಾರಿ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಟ್ಟ ನಂತರ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲೀಗ ಅರ್ಧ ಡಜನ್ಗೂ ಹೆಚ್ಚು ಸಿನಿಮಾಗಳಿವೆ. ಅದರಲ್ಲಿ ಗೋದ್ರಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ಜೇಕಬ್ ವರ್ಗೀಸ್ ಶಿಷ್ಯ ನಂದೀಶ್ ನಿರ್ದೇಶನದಲ್ಲಿ ಗೋದ್ರಾ ದೃಶ್ಯರೂಪ ಪಡೆದುಕೊಂಡಿದ್ದು, ಸತೀಶ್ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೋಪ್ ಇಟ್ಟುಕೊಂಡಿದ್ದಾರೆ. ಇದು ನನ್ನ ಕೆರಿಯರ್ ವಿಶೇಷ ಸಿನಿಮಾಗಲಿದೆ ಎಂಬ ಭರವಸೆ ಅವರದು. ಗೋದ್ರಾ ಎಂಬ ಊರು, ಅಲ್ಲಿ ನಡೆಯೋ ಥ್ರಿಲ್ಲಿಂಗ್ ಅಂಶಗಳೇ ಸಿನಿಮಾದ ಕಥಾವಸ್ತುವಂತೆ. ಮಲೆನಾಡು ಸುತ್ತಮುತ್ತ ಹಾಗೂ ಚತ್ತೀಸ್ ಘಡದ ದಟ್ಟ ಕಾಡುಗಳಲ್ಲಿ ಈ ಸಿನಿಮಾ ಶೂಟ್ ಆಗಿದೆ.
ಈಗಾಗಲೇ ಗೋದ್ರಾ ಟೀಸರ್ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಟೀಸರ್ ನೋಡಿದ್ರೆ ಇಲ್ಲಿ ನಕ್ಸಲಿಸಂ ಹಿನ್ನೆಲೆ ಇರೋದು ಗೊತ್ತಾಗುತ್ತಿದ್ದು, ಅದೇ ಕಾರಣಕ್ಕೆ ಸಿನಿಮಾ ಮೇಲೆ ಚಿತ್ರರಸಿಕರ ವಿಶೇಷ ಆಸೆ ಹುಟ್ಟುವಂತೆ ಮಾಡಿದೆ.
ಸತೀಶ್ ನೀನಾಸಂ ಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರದಿಂದ ಚಿತ್ರಕ್ಕೆ ತನ್ನ ಸ್ಟಾರ್ ವರ್ಚಸನ್ನ ಸತೀಶ್ ಹೆಚ್ಚಿಸಿಕೊಳ್ಳುತ್ತಿದ್ದು, ಅದಕ್ಕೆ ತಕ್ಕ ಶ್ರಮ ಪರಿಶ್ರಮವನ್ನ ಕೂಡ ಹಾಕುತ್ತಿದ್ದಾರೆ. ಅದಕ್ಕೆ ಸಾಕ್ಷಿ ಅವರ ವರ್ಕೌಟ್ ನ ಈ ವೀಡಿಯೋ ಗಳು.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ