ಕೆಜಿಎಫ್ (KGF) .. ಎಲ್ಲರ ಬಾಯಲ್ಲೂ ಒಂದೇ ಪದ. ಏಪ್ರಿಲ್ (April) ನಿಂದ ಇಲ್ಲಿಯವರೆಗೂ ಅದರ ಖದರ್ ಮಾತ್ರ ಕಡಿಮೆಯಾಗಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮಾಡಿದ್ದು ಮೂರೇ ಮೂರು ಸಿನಿಮಾ ಮೂಲಕ ಸ್ಟಾರ್ ಡೈರೆಕ್ಟರ್ (Star) ಮಟ್ಟಕ್ಕೆ ಏರಿದವರು. ಚಿತ್ರರಂಗದಲ್ಲಿ ಕೆಜಿಎಫ್ (KGF) ಮೂಲಕ ನೀಲ್ ಹೆಸರು ಬದಲಾಗುತ್ತಿದೆ. ಕೆಜಿಎಫ್ ಹಿಟ್ ಆದ ನಂತರವೂ ಬಾಕ್ಸ್ ಆಫೀಸ್ (Box Office) ನಲ್ಲಿ ಕಲೆಕ್ಷನ್ ಗಳ ಸುನಾಮಿ ಸೃಷ್ಟಿಸಿದೆ. ಯಾರೂ ಮಾಡಿರದಂತಹ ದಾಖಲೆಗಳನ್ನು ಕೆಜಿಎಫ್ 2 (KGF 2) ಸಿನಿಮಾ ಮಾಡಿದೆ. ಅದರಲ್ಲೂ ರಾಕಿ ಭಾಯಿ ಹವಾ ಇನ್ನೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಡೀ ವಿಶ್ವಕ್ಕೆ ಕನ್ನಡಿಗರ ಗತ್ತು ತೋರಿಸಿದ ಖ್ಯಾತಿ ನಮ್ಮ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರಿಗೆ ಸಲ್ಲಬೇಕು.
ಹೊಂಬಾಳೆ ಪ್ರೊಡಕ್ಷನ್ ಕೆಜಿಎಫ್ 2 ಸಿನಿಮಾ ಬಳಿಕ ಸಾಲು ಸಾಲು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದೆ. ಇತ್ತ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಕೂಡ ರೆಡಿಯಾಗುತ್ತಿದ. ಇದೆಲ್ಲದರ ನಡುವೆ ಇಂದು ಹೊಂಬಾಳೆ ಪ್ರೊಡಕ್ಷನ್ ಬಿಗ್ ಅನೌನ್ಸ್ ಮಾಡಲು ಸಜ್ಜಾಗಿದೆ.
ರಾಕಿ ಭಾಯ್ ಜೊತೆ ಹೊಸ ಸಿನಿಮಾ ಅನೌನ್ಸ್?
ಇಂದು ಸಂಜೆ 5:25ಕ್ಕೆ ಹೊಸದೊಂದು ಘೋಷಣೆ ಮಾಡುವುದಾಗಿ ಹೊಂಬಾಳೆ ನಿನ್ನೆಯೇ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಇದನ್ನು ಕಂಡ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಮತ್ತೆ ರಾಕಿಂಗ್ ಸ್ಟಾರ್ ಯಶ್ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೂ ಹಲವರು ಕಾಮೆಂಟ್ಗಳಲ್ಲಿ ಈ ಬಗ್ಗೆ ಕೇಳಿದ್ದಾರೆ. ಯಶ್ ಅವರ ಜೊತೆ ನಿಮ್ಮ ಮುಂದಿನ ಸಿನಿಮಾದ ಬಗ್ಗೆಅಪ್ಡೇಟ್ ಕೊಡುತ್ತಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಹೊಂಬಾಳೆ ಬಂಡವಾಳ ಹೂಡಿದೆ. ಇದೀಗ ಮತ್ತೆ ರಾಕಿ ಭಾಯ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರೆ ಅಂತ ಹೇಳಲಾಗುತ್ತಿದೆ.
View this post on Instagram
ಇದನ್ನೂ ಓದಿ: KGF 3 ಮಲ್ಟಿ ಸ್ಟಾರರ್ ಸಿನಿಮಾನಾ? ಯಶ್ ಜೊತೆ ಸೇರಿಕೊಳ್ಳಲಿದ್ದಾರೆ ಟಾಲಿವುಡ್ನ ಡಾರ್ಲಿಂಗ್?
ಸುಳಿವು ಕೊಟ್ರಾ ಭುವನ್ ಗೌಡ?
ಹೌದು, ಹೊಂಬಾಳೆ ತನ್ನ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿತ್ತು. ಅದರಲ್ಲಿ ಸ್ವ್ಯಾಗ್, ಪಂಚ್, ಸ್ವಿಂಗ್ ಎಂದು ಬರೆದಿದೆ. ಬೇಟೆ ಶುರು ಎಂದು ಬರೆದುಕೊಂಡು ಫೋಟೋ ಹಂಚಿಕೊಳ್ಳಲಾಗಿದೆ. ಇದಾದ ಎರಡು ಗಂಟೆಗಳ ಬಳಿಕ ಕೆಜಿಎಫ್ ಸಿನಿಮಾಗಳ ಕ್ಯಾಮರಾಮ್ಯಾನ್ ಭುವನ್ ಗೌಡ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ವ್ಯಾಗ್ ಎಂಬುದಕ್ಕೆ ಮತ್ತೊಂದು ಹೆಸರು ಅಂದರೆ ರಾಕಿಂಗ್ ಸ್ಟಾರ್ ಯಶ್ ಎಂದು ಬರೆದುಕೊಂಡಿದ್ದಾರೆ. ಇದೆರಡನ್ನು ಗಮನಸಿದ ಅಭಿಮನಿಗಳು ಪಕ್ಕಾ ಯಶ್ ಜೊತೆ ಹೊಂಬಾಳೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎಂದು ಕಾಯುತ್ತಿದ್ದಾರೆ.
View this post on Instagram
ಸಲಾರ್ ಅಪ್ಡೇಟ್ ಅಂತಿದ್ದಾರೆ ಇನ್ನು ಕೆಲವರು!
ಇನ್ನೂ ಕೆಲ ಅಭಿಮಾನಿಗಳು ಇಲ್ಲ ಇದು ಪಕ್ಕಾ ಸಲಾರ್ ಅಪ್ಡೇಟ್ ಬಗ್ಗೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ. ಒಟ್ಟಾರೆ ಹೊಂಬಾಳೆ ಇಂದು ಸಂಜೆ 5:25 ಎಲ್ಲ ಕುತೂಹಲಗಳಿಗೆ ತೆರೆ ಎಳಲಿದೆ. ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ಗೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಸಾಲಾರ್ ಹೆಸರಿನಲ್ಲಿ ಚಿತ್ರ ತೆರೆಕಾಣುತ್ತಿದೆ. ಪ್ರಶಾಂತ್ ನೀಲ್ ಅದ್ಧೂರಿ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೆಜಿಎಫ್-2 ಡೈಲಾಗ್ಗಳಲ್ಲಿ ಉದ್ಯಮಿಗಳಿಗೆ ಬ್ಯುಸಿನೆಸ್ ಪಾಠ! ನೀವು ಸಿನಿಮಾ ನೋಡಿದಾಗ ಇದನ್ನ ಗಮನಿಸಿದ್ರಾ?
1971ರ ಭಾರತ-ಪಾಕಿಸ್ತಾನ ಯುದ್ಧದ ಕಥೆ?
ನಿರ್ದೇಶಕ ಪ್ರಶಾಂತ್ ನೀಲ್ ಸಾಲಾರ್ ಕಥೆಯ ಪ್ರಕಾರ ಇದು 50 ವರ್ಷಗಳ ಹಿಂದಿನ ಕಥೆಯಾಗಿರುತ್ತಂತೆ ಅಲ್ಲದೇ ಕೆಲವೊಂದು ರೂಮರ್ಸ್ ಗಳ ಪ್ರಕಾರ ಸಲಾರ್ ಚಿತ್ರದಲ್ಲಿ 1971ರ ಭಾರತ-ಪಾಕಿಸ್ತಾನ ಯುದ್ಧದ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ