Global Prabhas Day: ಪ್ರಭಾಸ್​ ಹುಟ್ಟುಹಬ್ಬಕ್ಕೆ ರಿಲೀಸ್​ ಆಗಲಿದೆ Radhe Shyam ಟೀಸರ್​

ಪ್ರಭಾಸ್​ ಅವರ ಹುಟ್ಟುಹಬ್ಬಂದು ರಾಧೆ ಶ್ಯಾಮ್​ ಚಿತ್ರತಂಡ ಟೀಸರ್​ ಅನ್ನು ಉಡಗೊರೆಯಾಗಿ ಕೊಡುತ್ತಿದೆ. ಅ.23ರಂದು ಪ್ರಭಾಸ್​ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು ಟೀಸರ್​ ಅನ್ನು ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ.

ರಾಧ್ಯೆ ಶ್ಯಾಮ್​ ಸಿನಿಮಾದ ಹೊಸ ಪೋಸ್ಟರ್​ನಲ್ಲಿ ಪ್ರಭಾಸ್​

ರಾಧ್ಯೆ ಶ್ಯಾಮ್​ ಸಿನಿಮಾದ ಹೊಸ ಪೋಸ್ಟರ್​ನಲ್ಲಿ ಪ್ರಭಾಸ್​

  • Share this:
ಟಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​, ಅಭಿಮಾನಿಗಳ ಡಾರ್ಲಿಂಗ್ ಎಂದೇ ಕರೆಯಲ್ಪಡುವ ಪ್ರಭಾಸ್​ ಅವರು 42ನೇ ವಸಂತಕ್ಕೆ ಕಾಲಿಡಲಿದ್ದಾರೆ. ನಟನ ಹುಟ್ಟುಹಬ್ಬಕ್ಕೆ ಈ ಸಲ ಅವರ ಅಭಿನಯದ ಸಿನಿಮಾ ರಾಧೆ ಶ್ಯಾಮ್ ಚಿತ್ರತಂಡ ಭರ್ಜರಿ ಉಡುಗೊರೆ ಕೊಡುತ್ತಿದೆ. ಹೌದು, ರಾಧಾಕೃಷ್ಣ ಕುಮಾರ್​ ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯುಕಿಯಾಗಿ ನಟಿಸಿದ್ದಾರೆ. ಈ ಹಿಂದೆಯೇ ರಿಲೀಸ್ ಆಗಿರುವ ಪೋಸ್ಟರ್, ಮೋಷನ್ ಪೋಸ್ಟರ್​ಗಳು ಚಿತ್ರದ ಬಗ್ಗೆ ಇದ್ದ ನಿರೀಕ್ಷೆಯನ್ನು ಹೆಚ್ಚಿಸುತ್ತಲೇ ಇವೆ. ಹೀಗಿರುವಾಗಲೇ ಚಿತ್ರತಂಡ ಈಗ ಮತತೊಂದು ಪ್ರಕಟಣೆ ಮಾಡಿದೆ. ತುಂಬಾ ಸಮಯದ ನಂತರ ಪ್ರಭಾಸ್​ ಮತ್ತೆ ರೊಮ್ಯಾಂಟಿಕ್​ ಸಿನಿಮಾದಲ್ಲಿ ಲವರ್​ ಬಾಯ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್​ ಅವರನ್ನು ಮತ್ತೆ ಬೆಳ್ಳಿತೆರೆ ಮೇಲೆ  ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಪ್ರಭಾಸ್​ ಅವರ ಹುಟ್ಟುಹಬ್ಬಂದು ರಾಧೆ ಶ್ಯಾಮ್​ ಚಿತ್ರತಂಡ ಟೀಸರ್​ ಅನ್ನು ಉಡಗೊರೆಯಾಗಿ ಕೊಡುತ್ತಿದೆ. ಅ.23ರಂದು ಪ್ರಭಾಸ್​ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು ಟೀಸರ್​ ಅನ್ನು ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ.






ಟೀಸರ್ ರಿಲೀಸ್​ ವಿಷಯವನ್ನು ರಿವೀಲ್​ ಮಾಡಿರುವ ಚಿತ್ರತಂಡ 6 ಭಾಷೆಗಳಲ್ಲಿ ಪ್ರಭಾಸ್ ಅವರ ಹೊಸ ಪೋಸ್ಟರ್​ ಅನ್ನು ರಿಲೀಸ್ ಮಾಡಿದೆ. ಜೊತೆಗೆ ವಿಕ್ರಮಾದಿತ್ಯ ಯಾರು ಎಂದು ತಿಳಿದುಕೊಳ್ಳಲು ಕಾಯುತ್ತಿರಿ ಎಂದಿದೆ ರಾಧೆಶ್ಯಾಮ್​ ಚಿತ್ರತಂಡ.

ಇದನ್ನೂ ಓದಿ: Prabhas 20: ರಿಲೀಸ್​ ಆಯ್ತು ಪ್ರಭಾಸ್​ ನಟನೆಯ ಚಿತ್ರದ ಟೈಟಲ್​- ಫಸ್ಟ್​ಲುಕ್​ ಪೋಸ್ಟರ್​..!

ಬೆಳಿಗ್ಗೆ 11:6ಕ್ಕೆ ಟೀಸರ್​ ರಿಲೀಸ್​ ಆಗಲಿದೆ. ಇಂಗ್ಲಿಷ್​ನಲ್ಲಿ ರಿಲೀಸ್​ ಆಗಲಿರುವ ಟೀಸರ್​ಗೆ ಇತರೆ ಭಾಷೆಗಳಲ್ಲಿ ಸಬ್​ಟೈಟಲ್​ ನೀಡಲಾಗಿರುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇನ್ನು ಪ್ರಭಾಸ್ ಅವರ ಹುಟ್ಟುಹಬ್ಬದ ದಿನವನ್ನು ಚಿತ್ರತಂಡ ಗ್ಲೋಬಲ್​ ಪ್ರಭಾಸ್​ ಡೇ ಎಂದು ಆಚರಿಸತ್ತಿದೆ. ಈ ಸಲ ಟೀಸರ್​ನಲ್ಲಿ ಯಾವುದೇ ಡೈಲಾಗ್​ ತೆಲುಗು ಅಥವಾ ಯಾವುದೇ ಸ್ಥಳೀಯ ಭಾಷೆಗಳಲ್ಲಿ ಇರುವುದಿಲ್ಲ.ಕಾರಣ ಟೀಸರ್​ ಇಂಗ್ಲಿಷ್​ನಲ್ಲಿರಲಿದೆಯಂತೆ.

ಇದನ್ನೂ ಓದಿ: Prabhas Radhe Shyam: ರಾಧೆ ಶ್ಯಾಮ್​ ಚಿತ್ರದಲ್ಲಿ ವಿಕ್ರಮಾದಿತ್ಯನಾದ ಪ್ರಭಾಸ್​: ಡಾರ್ಲಿಂಗ್​ ಲುಕ್​ಗೆ ಅಭಿಮಾನಿಗಳು ಫಿದಾ..!

ಪ್ರಭಾಸ್​ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಪೂಜೆ ಹೆಗ್ಡೆ ಜೊತೆ ನಟಿಸುತ್ತಿರುವ ಹಾಗೂ ರಾಧಾಕೃಷ್ಣ ಕುಮಾರ್ ನಿರ್ದೇಶನದ ರಾಧೆ ಶ್ಯಾಮ್​ ಮುಂದಿನ ವರ್ಷ ಜನವರಿ 14ರಂದು ರಿಲೀಸ್ ಆಗಲಿದೆ. ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್​ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್​ ನಿರ್ಮಿಸುತ್ತಿರುವ ಸಲಾರ್​ ಚಿತ್ರೀಕರಣ ಸಹ ನಡೆಯುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ.

ರಾಮನಾಗಿ ಪ್ರಭಾಸ್​...

ಬಾಲಿವುಡ್​ ನಿರ್ದೇಶಕ ಓಂರಾವತ್​ ಅವರ ನಿರ್ದೇಶನದಲ್ಲಿ ಪ್ರಭಾಸ್​ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಓಂರಾವತ್​ ಅವರ ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿರುವ ಪ್ರಭಾಸ್​ ಅವರಿಗೆ ನಾಯಕಿಯಾಗಿ ಕೃತಿ ಸನೋನ್​ ನಟಿಸುತ್ತಿದ್ದಾರೆ.. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಪ್ರಭಾಸ್​ ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ಮೀಸೆ ಬಿಟ್ಟಿದ್ದು, ಕೊಂಚ ತೂಕ ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದೆ ಈ ಸಿನಿಮಾದ ಹಾಡಿನ ಡ್ಯಾನ್ಸ್​ ಪ್ರಾಕ್ಟೀಸ್​ಗೆ ಬಂದಾಗ ಪ್ರಭಾಸ್​ ಅವರು ಮೇಕಪ್​ ಇಲ್ಲದೆ ಕಾಣಿಸಿಕೊಂಡಿದ್ದರು.

ಪ್ರಭಾಸ್​ ಅವರು ಮೀಸೆ ಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ನೆಟ್ಟಿಗರು ಆಗ ಪ್ರಭಾಸ್​ ಅವರನ್ನು ಅಂಕಲ್, ವಯಸ್ಸಾಗಿದೆ ಎಂದೆಲ್ಲ ಟ್ರೋಲ್ ಮಾಡಿದ್ದರು. ಆಗ ಪ್ರಭಾಸ್​ ಅಭಿಮಾನಿಗಳು ನಟನ ಬೆಂಬಲಕ್ಕೆ ನಿಂತಿದ್ದರು.
Published by:Anitha E
First published: