‘ಗ್ಲೀ‘ ಸಿನಿಮಾ ಖ್ಯಾತಿಯ ಹಾಲಿವುಡ್ ನಟಿ ನಯಾ ರಿವೇರಾ ಅವರ ಶವ ಪಿರು ಸರೋವರದ ಬಳಿ ಪತ್ತೆಯಾಗಿದೆ. ಜುಲೈ 8ರಂದು ಕಾಣೆಯಾಗಿದ್ದರು. ಇದೀಗ 5 ದಿನಗಳ ಬಳಿಕ ರಿವೇರಾ ಶವ ಪೊಲೀಸರಿಗೆ ಸಿಕ್ಕಿದೆ.
ನಯಾ ರಿವೇರಾ ಅವರಿಗೆ 33 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ 4 ವರ್ಷದ ಪುತ್ರನೊಂದಿಗೆ ಅವರು ಬೋಟಿಂಗ್ ತೆರಳಿದ್ದರು. ಈ ವೇಳೆ ಆಯತಪ್ಪಿ ಅಮ್ಮ ಮಗ ನೀರಿಗೆ ಬಿದ್ದಿದ್ದರು. ರಿವೇರಾ ತನ್ನ ಶಕ್ತಿ ಮೀರಿ ಮಗನನ್ನು ಬೋಟ್ ಮೇಲೆ ತಲುಪಿಸುವ ಮೂಲಕ ಆತನನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಾಗಲೇ ಅವರು ನೀರಿನಲ್ಲೇ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ರಿವೇರಾ ನಾಪ್ತೆಯಾಗಿರುವ ವಿಚಾರ ತಿಳಿದು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಇದೀಗ 5 ದಿನಗಳ ಬಳಿಕ ಕೌಂಟಿಯ ಪಿರು ಸರೋವರದ ಬಳಿ ರಿವೇರಾ ಅವರ ಶವ ಪತ್ತೆಯಾಗಿದೆ. ರಿವೇರಾ ನಾಪ್ತೆಯಾದ ದಿನದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಪೊಲೀಸರು ರಿವೇರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ರಿವೇರಾ ಕ್ಯಾಲಿಫೋರ್ನಿಯಾದ ವೆಲೆನ್ಸಿಯಾದಲ್ಲಿ ಜನಿಸಿದರು. ಬಾಲ್ಯದಲ್ಲಿ ಇರುವಾಗಲೇ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ನಾಲ್ಕನೇ ವಯಸ್ಸಿನಲ್ಲಿ ‘ಸಿಬಿಎಸ್ ಸಿಟ್ಕಾಮ್ ದಿ ರಾಯಲ್ ಫ್ಯಾಮಿಲಿ’ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅಷ್ಟೇ ಅಲ್ಲ ತಮ್ಮ 10ನೇ ವಯಸ್ಸಿಗೆ ‘ಫ್ರೆಷ್ ಪ್ರಿನ್ಸ್ ಆಫ್ ಬೆಲ್ ಏರ್’, ‘ಫ್ಯಾಮಿಲಿ ಮ್ಯಾಟರ್ಸ್’ ಹಾಗೂ ‘ಬೇವಾಚ್’ ಎಂಬ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರು.
![]()
ನಟಿ ನಯಾ ರಿವೇರಾ
‘ಗ್ಲೀ’ ಚಿತ್ರದಲ್ಲಿ ನಟಿಸಿದ ರಿವೇರಾ ‘ಸ್ಕ್ರೀನ್ ಆ್ಯಕ್ಟರ್ ಗಿಲ್ಡ್’ ಹಾಗೂ ‘ಟೀನ್ ಚಾಯ್ಸ್’ ಪ್ರಶಸ್ತಿಯನ್ನು ಪಡೆದಿದ್ದರು. ಅನೇಕ ಬಾರಿ ‘ಗ್ರಾಮಿ ಪ್ರಶಸ್ತಿ’ಗಾಗಿ ಕೂಡ ನಾಮಿನೇಟ್ ಆಗಿದ್ದರು. ಇದೀಗ ರಿವೇರಾ ಅವರ ಶವ 5 ದಿನಗಳ ಬಳಿಕ ಪತ್ತೆಯಾಗಿದೆ. ನಟಿಯ ಸಾವಿಗೆ ಅನೇಕ ಅಭಿಮಾನಿಗಳು ಕಂಬನಿ ಸುರಿದ್ದಾರೆ. ಹಾಲಿವುಡ್ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಧೆಯಾಗಿ ಖ್ಯಾತಿ ಪಡೆದ ಈ ನಟಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?
ಖ್ಯಾತ ಗಾಯಕಿ ಮಗ ಆತ್ಮಹತ್ಯೆ!
John Cena: ಅಮಿತಾಭ್, ಅಭಿಷೇಕ್ ಬಚ್ಚನ್ ಫೋಟೋ ಹಂಚಿಕೊಂಡ WWE ಚಾಂಪಿಯನ್ ಜಾನ್ ಸೀನಾ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ