• Home
  • »
  • News
  • »
  • entertainment
  • »
  • Kantara Movie: ದೈವದ ವೇಷ ಹಾಕಿದ್ದ ಯುವತಿಯಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ

Kantara Movie: ದೈವದ ವೇಷ ಹಾಕಿದ್ದ ಯುವತಿಯಿಂದ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ

ದೈವ ವೇಷ ಧರಿಸಿದ್ದ ಯುವತಿ

ದೈವ ವೇಷ ಧರಿಸಿದ್ದ ಯುವತಿ

ದೈವದ ವೇಷ ಧರಿಸಿ ವಿವಾದಕ್ಕೆ ಗುರಿಯಾಗಿದ್ದ ಯುವತಿ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟು ತಪ್ಪು ಕಾಣಿಕೆ ಒಪ್ಪಿಸಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ ಸಿನಿಮಾ (Kantara Movie) ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಸಿನಿಮಾದಲ್ಲಿ ದೈವದ ರೂಪ, ಮ್ಯೂಸಿಕ್, ಸೀನ್​ಗಳು ಪ್ರೇಕ್ಷರನ್ನು ಭಾರೀ ಪ್ರಭಾವಿಸಿತು. ಸಿನಿಮಾ ಹಾಡಿನ ಟ್ಯೂನ್​ಗಳಿಗೆ ರೀಲ್ಸ್​ಗಳನ್ನು (Reels Video) ಮಾಡುವುದು, ವಿಡಿಯೋಗಳನ್ನು ಮಾಡುವುದು ಆರಂಭವಾದಾಗ ರಿಷಬ್ ಶೆಟ್ಟಿ  (Rishab Shetty) ಅವರೇ ಇದನ್ನು ಫಾಲೋ ಮಾಡಬೇಡಿ ಎಂದು ಹೇಳಿದ್ದರು. ಅಷ್ಟಾಗಿಯೂ ಶ್ವೇತಾ ರೆಡ್ಡಿ (Shwetha Reddy) ಎನ್ನುವ ಯುವತಿ ದೈವದ ವೇಷ ಧರಿಸಿ ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಕಾಂತಾರ ಸಿನಿಮಾ ಸುದ್ದಿಯಾಗುತ್ತಿದ್ದಂತೆ ಅದರಲ್ಲಿ ಬಂದಂತಹ ದೈವದ ವೇಷವನ್ನು ಇಮಿಟೇಟ್ ಮಾಡಿದ ಯುವತಿ ಈಗ ಅದಕ್ಕಾಗಿ ಧರ್ಮಸ್ಥಳಕ್ಕೆ (Dharmasthala) ಭೇಟಿ ಕೊಟ್ಟು ತಪ್ಪು ಕಾಣಿಕೆ ಒಪ್ಪಿಸಿದ್ದಾರೆ. ವಿಡಿಯೋಗೋಸ್ಕರ ದೈವದ ವೇಷ ಧರಿಸಿದ್ದ ಯುವತಿ ದೇವಾಲಯಕ್ಕೆ ಬಂದು ತಪ್ಪು ಕಾಣಿಕೆ ಒಪ್ಪಿಸಿದ್ದು ಈಗ ಸಮಸ್ತ ದೈವಾರಾಧಕರಲ್ಲೂ ಕ್ಷಮೆ ಕೇಳಿದ್ದಾರೆ.


ನಾವು ಬೆಂಗಳೂರಿನವರು, ನಮಗೇನೂ ಗೊತ್ತಿಲ್ಲ


ತುಂಬಾ ಕಷ್ಟ ಆಗಿತ್ತು. ನೆಗೆಟಿವ್ ಕಾಮೆಂಟ್ಸ್ ಬರುತ್ತಿತ್ತು. ನಾವು ಬೆಂಗಳೂರಿನವರು. ನಮಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ಮುಂದೇನೂ ಆಗಬಾರದು ಎಂದು ದೇವಸ್ಥಾನಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ್ದೇವೆ. ನಾವು ದೈವ ಯಕ್ಷಗಾನ ಎಲ್ಲವೂ ಒಂದೇ ಎಂದು ತಿಳಿದುಕೊಂಡಿದ್ದೆವು.


ತೀರ್ಥಸ್ನಾನ ಮಾಡಿ ತಪ್ಪು ಕಾಣಿಕೆ ನೀಡಿದ ಯುವತಿ


ಎಲ್ಲಾ ಆದ ಮೇಲೆ ಇದನ್ನೆಲ್ಲಾ ಮಾಡಬಾರದು ಎನ್ನುವುದು ಗೊತ್ತಾಯಿತು. ಶ್ವೇತಾ ರೆಡ್ಡಿ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಕೇಳಿದ್ದಾರೆ. ಶ್ವೇತಾ ರೆಡ್ಡಿ ತೀರ್ಥ ಸ್ನಾನ ಮಾಡಿ ತಪ್ಪು ಕಾಣಿಕೆ ಒಪ್ಪಿಸಿದ್ದಾರೆ.


ಕರಾವಳಿ ಮಂದಿಯಿಂದ ವಿರೋಧ


ಮೇಕಪ್​ ಆರ್ಟಿಸ್ಟ್​ ಆಗಿರುವ ಶ್ವೇತಾ ರೆಡ್ಡಿ ಕಾಂತಾರ ದೈವದ ವಿಡಿಯೋವನ್ನು ಶೂಟ್ ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿ ರೀಲ್ಸ್ ಪೋಸ್ಟ್ ಮಾಡಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.


ಇದನ್ನೂ ಓದಿ: Kantara Box Office Collection: 16 ಕೋಟಿಯ ಸಿನಿಮಾ 300 ಕೋಟಿ ಗಳಿಕೆ! ಕಾಂತಾರ ಕಮಾಲ್


ವರಾಹ ರೂಪಂ ಹಾಡಿಗೆ ರೀಲ್ಸ್


ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದ  ಯುವತಿ ಶ್ವೇತಾ ರೆಡ್ಡಿ ದೈವಾರಾಧನೆಯನ್ನು ಅಣಕ ಮಾಡಿದ್ದಾರೆ ಎಂದು ನೆಟ್ಟಿಗರು ತೀವ್ರವಾಗಿ ಆರೋಪಿಸಿದ್ದರು. ಯುವತಿ ವಿರುದ್ದ ಮಂಗಳೂರಿನ ದೈವಾರಾಧಕರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.  ಮೂವಿ ನೋಡಿ ಬಣ್ಣ ಹಚ್ಚಿ ಕಿರೀಟ ಕಟ್ಟಿ ಹುಚ್ಚಾಟ ಮಾಡಿದ್ದಾಳೆ. ಮೌಲ್ಯಯುತವಾದ್ದನ್ನು ಅಪಮೌಲ್ಯಗೊಳಿಸಿದ್ದಾಳೆ ಎಂದು ಆರೋಪಿಸಿದ್ದರು.


ವೈರಲ್ ಆಗಿದ್ದ ವಿಡಿಯೋ


ದೈವಾರಾಧನೆಗೆ ರೀತಿ ರಿವಾಜುಗಳು ಇದೆ. ಅದನ್ನು ಅಣಕ ಮಾಡಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ವಿರುದ್ದ ದೂರು ದಾಖಲಿಸುವಂತೆ ಒತ್ತಾಯ ಕೇಳಿಬಂದಿತ್ತು.


ಇದನ್ನೂ ಓದಿ: Kriti Sanon: ಡಿಸೈನರ್ ಸೀರೆಯುಟ್ಟ ಕೃತಿ! ಆದಿಪುರುಷ್ ಬೆಡಗಿಯ ಹಾಟ್ ಲುಕ್


ಇದ್ದಕ್ಕೆ ತಕ್ಕ ಶಾಸ್ತಿಯಾಗುತ್ತೆ ಎಂಬ ಕಾಮೆಂಟ್‌ಗಳನ್ನು ನೆಟ್ಟಿಗರು ಹಾಕಿದ್ದಾರೆ. ನಂತರ ಯುವತಿ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಅದರೂ ಯುವತಿ ವಿರುದ್ಧ ಆಕ್ರೋಶ ಕಮ್ಮಿಯಾಗಿರಲಿಲ್ಲ.


ಸ್ವತಃ ನಟ ರಿಷಬ್ ಶೆಟ್ಟಿ ಈ ರೀತಿ ಯಾರು ಸಿನಿಮಾ ನೋಡಿ ಅಣಕು ಮಾಡುವುದು, ರೀಲ್ಸ್ ಮಾಡುವುದು ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಈ ಯುವತಿ ಈ ರೀತಿ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಯುವತಿ ತಪ್ಪು ಕಾಣಿಕೆ ನೀಡಿದ್ದು ಸದ್ಯ ಈ ವಿವಾದ ತಣ್ಣಗಾಗಿದೆ.

Published by:Divya D
First published: