Girki Movie: ಗಿರ್ಕಿ ಸಿನಿಮಾದ ಲವ್ ಸಾಂಗ್ ರಿಲೀಸ್​, ಹಾಡು ಬಿಡುಗಡೆ ಮಾಡಿದ ಲವ್​ ಮಾಕ್ಟೇಲ್​ ಕಪಲ್

Sandalwood: ಇನ್ನು ಈ ಸಿನಿಮಾಗಾಗಿ ಜಯಂತ ಕಾಯ್ಕಿಣಿ ಅವರು ಕದಿಯಲೇನು ಎಂಬ ಹಾಡನ್ನು ಬರೆದಿದ್ದು, ಕನ್ನಡ ಚಿತ್ರರಂಗದ ತಾರಾ ಜೋಡಿ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ  ಶುಭ ಕೋರಿದ್ದಾರೆ.

ಗಿರ್ಕಿ ಸಿನಿಮಾ

ಗಿರ್ಕಿ ಸಿನಿಮಾ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಹೊಸ ಸಿನಿಮಾಗಳ (New Films) ಹಾವಳಿ ಆರಂಭವಾಗಿದೆ. ಒಂದರ ನಂತರ ಒಂದು ಸಿನಿಮಾಗಳು ಸೆಟ್ಟೇರುತ್ತಿದ್ದು, ಜೊತೆಗೆ ಹಲವಾರು ಸಿನಿಮಾಗಳು ಸಹ ಬಿಡುಗಡೆಗೆ ಸಿದ್ದವಾಗಿದೆ. ಇನ್ನು ಇತ್ತೀಚೆಗಷ್ಟೇ ಮತ್ತೊಂದು ಹೊಸ ಸಿನಿಮಾವೊಂದರ ಹಾಡು ಬಿಡುಗಡೆಯಾಗಿದೆ. ಗಿರ್ಕಿ (Girki) ಎನ್ನುವ ಚಿತ್ರದ ಲವ್​ ಸಾಂಗ್ ಬಿಡುಗಡೆಯಾಗಿದ್ದು, ಸ್ಯಾಂಡಲ್​ವುಡ್​ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಈ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಇನ್ನು ಈ ಸಿನಿಮಾ ಮುಂದಿನ ತಿಂಗಳು ತೆರೆ ಮೇಲೆ ಬರುತ್ತಿದ್ದು, ಈಗಾಗಲೇ ಆ ಸಾಂಗ್ ಜನರಿಗೆ ಬಹಳ ಇಷ್ಟವಾಗಿದೆ.

ಈ ಗಿರ್ಕಿ ಸಿನಿಮಾವನ್ನು ಸ್ಯಾಂಡಲ್​ವುಡ್​ ನಿರ್ದೇಶಕ ಯೋಗರಾಜ್ ಭಟ್ ಅವರ ಶಿಷ್ಯವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌. ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್​ ಸಹಯೋಗದೊಂದಿಗೆ ನಟ ತರಂಗ ವಿಶ್ವ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ವೀರೇಶ್ ಅವರಿಗೆ ಇದು ಮೊದಲ ಚಿತ್ರವಾಗಿದ್ದು, ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.


ಇನ್ನು ಈ ಸಿನಿಮಾಗಾಗಿ ಜಯಂತ ಕಾಯ್ಕಿಣಿ ಅವರು ಕದಿಯಲೇನು ಎಂಬ ಹಾಡನ್ನು ಬರೆದಿದ್ದು,   ಕನ್ನಡ ಚಿತ್ರರಂಗದ ತಾರಾ ಜೋಡಿ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ  ಶುಭ ಕೋರಿದ್ದಾರೆ. A2 music ಮೂಲಕ  ಹಾಡು ಬಿಡುಗಡೆಯಾಗಿದ್ದು, ಜನರಿಗೆ ಈಗಾಗಲೇ ಇಷ್ಟವಾಗಿದ್ದು, ಇನ್ನೂ ಹೈಪ್ ಮೂಡಿಸುವ ನಿರೀಕ್ಷೆಯಲ್ಲಿ ಸಿನಿತಂಡವಿದೆ. ಇನ್ನು ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಹಾಡಿನ ಶೂಟಿಂಗ್ ಆಗಿದ್ದು,  ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಈ ಸುಮಧುರವಾದ ಹಾಡನ್ನು ಹಾಡಿದ್ದು. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ವಿಲೋಕ್ ರಾಜ್ ಹಾಗೂ ದಿವ್ಯಾ ಉರುಡುಗ ಅಭಿನಯಿಸಿದ್ದಾರೆ.

ಇದನ್ನೂ ಓದಿ: 1000 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ನಮ್ಮನೆ ಯುವರಾಣಿ

ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಿದ್ದಾರೆ. ಹಾಗೆಯೇ ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದ್ದು, ಒಟ್ಟಾರೆ4ಯಾಗಿ ಜನರಿಗೆ ಮೋಡಿ ಮಾಡಿದೆ.

ಈ ಹಿಂದೆ ಇದೇ ಸಿನಿಮಾದ ಯೋಗರಾಜ್ ಭಟ್ ಅವರು ಬರೆದಿರುವ ಎಣ್ಣೆ ಸಾಂಗ್ ಕೂಡ ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಚಿತ್ರದ ಲವ್ ಸಾಂಗ್ ಬಿಡುಗಡೆಯಾಗಿದ್ದು, ಜುಲೈ 8 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಮತ್ತೊಂದು ವಿಶೇಷ ಎಂದರೆ, ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಹಾಗೆಯೇ ಈ ಚಿತ್ರಕ್ಕೆ ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಇಬ್ಬರು ನಾಯಕರು ಹಾಗೂ ಇಬ್ಬರು ನಾಯಕಿಯರಿದ್ದು,  ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ಬಿಗ್​ಬಾಸ್ ಖ್ಯಾತಿಯ​ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: ವಾರವಾದ್ರೂ ಚಾರ್ಲಿ ಹವಾ ನಿಂತಿಲ್ಲ, ಬಾಕ್ಸ್​ ಆಫೀಸ್​ನಲ್ಲಿ ಶೆಟ್ರು ಫಿಲ್ಮ್​ ಭರ್ಜರಿ ಬ್ಯಾಟಿಂಗ್

ಈ ಚಿತ್ರದ ಮೂಲಕ ವಿಲೋಕ್ ರಾಜ್ ನಾಯಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟೀಸರ್ ನೋಡಿರುವ ಸಿನಿರಸಿಕರು ವಿಲೋಕ್ ರಾಜ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Sandhya M
First published: