Vaijanath Biradar: 90 ಬಿಡಿ ಮನೆಗೆ ನಡಿ; ಭಿಕ್ಷುಕ ಪಾತ್ರಕ್ಕೇ ಫೇಮಸ್ ಆಗಿದ್ದ ವೈಜನಾಥ್ ಬಿರಾದಾರ್ ಈಗ ಹೀರೋ!

ಹಾಸ್ಯ ನಟ ವೈಜನಾಥ್ ಬಿರಾದಾರ್ ಎಲ್ಲರಿಗೂ ಗೊತ್ತಿಲ್ಲ. ಹಾಸ್ಯ ಪ್ರಿಯರಿಗೆ ಮಾತ್ರ ಈ ಕಲಾವಿದನ ಪರಿಚಯ ಇದೆ. ಆದರೆ ಇಂತಹ ನಟ ಈಗ ಹೀರೋ ಆಗಿರೋದೇ ವಿಶೇಷ.

ವೈಜನಾಥ್ ಬಿರಾದಾರ್

ವೈಜನಾಥ್ ಬಿರಾದಾರ್

  • Share this:
    ಹಾಸ್ಯ ನಟ ವೈಜನಾಥ್ ಬಿರಾದಾರ್ (Vaijanath Biradar) ಎಲ್ಲರಿಗೂ ಗೊತ್ತಿಲ್ಲ. ಹಾಸ್ಯ ಪ್ರಿಯರಿಗೆ ಮಾತ್ರ ಕಲಾವಿದನ ಪರಿಚಯ ಇದೆ. ಆದರೆ ಇಂತಹ ನಟ ಈಗ ಹೀರೋ (Hero) ಆಗಿರೋದೇ ವಿಶೇಷ. ಕನ್ನಡ ಚಿತ್ರರಂಗದಲ್ಲಿ ಭಿಕ್ಷುಕನ ಪಾತ್ರದ ಮೂಲಕವೇ ಎಲ್ಲರ ಹೃದಯ ಕದ್ದ ಹಾಸ್ಯ ಕಲಾವಿದನ (Comedy Artist) ಬದುಕು ಅಷ್ಟೇನೂ ರಂಗೀನ್ ಆಗಿಲ್ಲ ಬಿಡಿ. ಕಷ್ಟಗಳು ಇದ್ದೇ ಇವೆ. ಅವುಗಳನ್ನ ಎದುರಿಸುತ್ತಲೇ, ಮಿರಿಸುತ್ತಲೇ ಸಾಗಿ ಬರ್ತಿರೋ ವೈಜನಾಥ್ ಬಿರಾದಾರ್ ಈಗ 500 ಸಿನಿಮಾಗಳನ್ನ ಪೂರ್ಣಗೊಳಿಸಿದ್ದಾರೆ. 500 ನೇ ಚಿತ್ರನೇ ಚಿತ್ರದ ಟೈಟಲ್ (Film Title) ತುಂಬಾನೇ ಮಜವಾಗಿದೆ.


    ವೈಜನಾಥ್ ಬಿರಾದಾರ್ ಕನ್ನಡ ಚಿತ್ರರಂಗ ಕಾಣದೇ ಇರೋ ಅತ್ಯದ್ಭುತ ಕಲಾವಿದ. ಆದರೆ, ದುರಂತ ನೋಡಿ, ಈ ನಟನ ಪ್ರತಿಭೆ ಕೇವಲ  ಹಾಸ್ಯ ಪಾತ್ರಕ್ಕೆ ಸೀಮಿತವಾಗಿಬಿಟ್ಟಿತ್ತು. ಕನ್ನಡದ ಯಾವ ನಿರ್ದೇಶಕರು ಈ ಕಲಾವಿದನ ಅಸಲಿ ಕಲೆಯನ್ನ  ಹೊರಗೆ ತೆಗೆಯೋ ಪ್ರಯತ್ನವನ್ನೂ ಮಾಡಲೇ ಇಲ್ಲ. ಹಾಗಾಗಿಯೇ ಹೋಗಿ ಬಂದು ಅದೇ ಭಿಕ್ಷುಕನ ಪಾತ್ರಗಳೇ ಹುಡುಕಿಕೊಂಡು ಬರುತ್ತಿದ್ದವು.



    ಆದರೆ, ಕಲಾತ್ಮಕ ಚಿತ್ರಗಳಿಗೇನೆ ಹೆಸರಾದ ಗಿರೀಶ್ ಕಾಸರವಳ್ಳಿ ಹಾಗಲ್ಲ ಬಿಡಿ. ವೈಜನಾಥ್ ಬಿರಾದಾರ್ ಅವರಲ್ಲಿದ್ದ ಆ ಮಹಾನ್ ಪ್ರತಿಭೆಯನ್ನ ಗುರುತಿಸಿದರು. ರಾಷ್ಟ್ರಮಟ್ಟದಲ್ಲಿ ಬೆಳೆಯೋವಂತೆ ಮಾಡಿದರು. ಹಾಗೆ ಇವರ ಈ ಕನಸಿಗೆ ನೆರವಾಗಿದ್ದ ಚಿತ್ರದ ಹೆಸರು ಕನಸೆಂಬೋ ಕುದುರೆಯನೇರಿ. ಇದು 2010 ರಲ್ಲಿ ತೆರೆಗೆ ಬಂದಿತ್ತು.

    ವೈಜನಾಥ್ ಬಿರಾದಾರ್ ಹೀರೋ ಆಗಿರೋ ಸಿನಿಮಾ ರೆಡಿ
    ಈ ಚಿತ್ರದ ಅತ್ಯುತ್ತಮ ನಟನ ಪ್ರಶಸ್ತಿ ಪಡೆಯೋವಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್​ಗೂ ಬಿರಾದಾರ್ ಟಕ್ಕರ್ ಕೊಟ್ಟಿರೋದು ಅಷ್ಟೇ ಸತ್ಯ. ಆದರೆ, ಆ ಪ್ರಶಸ್ತಿ ಬಿಗ್ ಬಿ ಪಾಲಾಯಿತು ಬಿಡಿ. ಆದರೆ ಈ ಚಿತ್ರ ಆದ್ಮೇಲೆ ಎಂದಿನಂತೆ ಮತ್ತೆ ವೈಜನಾಥ್  ಬಿರಾದಾರ್ ಹಾಸ್ಯ ಪಾತ್ರಗಳಿಗೆ ಸೀಮಿತವಾದರು. ಆದರೆ, ಈಗ ಇದೇ ವೈಜನಾಥ್ ಬಿರಾದಾರ್ ಹೀರೋ ಆಗಿರೋ ಒಂದು ಸಿನಿಮಾ ರೆಡಿ ಆಗಿದೆ. ಇದರ ಹೆಸರು "90 ಬಿಡಿ ಮನೆಗೆ ನಡಿ". ಇದರಲ್ಲಿ ವೈಜನಾಥ್ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ.



    90 ಬಿಡಿ ಮನೆಗೆ ನಡಿ ಚಿತ್ರದಲ್ಲಿ ಚುಟು..ಚುಟು ಮಾದರಿಯ ಒಂದು ಹಾಡು ಇದೆ
    ಚಿತ್ರರಂಗದ ಎಲ್ಲರೂ ಈ ನಟನನ್ನ  ಭಿಕ್ಷುಕನ ಪಾತ್ರಕ್ಕೆ ಸೀಮಿತಗೊಳಿಸಿದರೆ, ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಈ ಕಲಾವಿದನಲ್ಲಿದ್ದ ಇತರ ಕಲೆಯನ್ನ ಹಾಸ್ಯದ ಚೌಕಟ್ಟಿನಲ್ಲಿಯೇ ಈಗ ಕಟ್ಟಿಕೊಟ್ಟಿದ್ದಾರೆ. ವಿಶೇಷವೆಂದ್ರೆ 90 ಬಿಡಿ ಮನೆಗೆ ನಡಿ ಚಿತ್ರದಲ್ಲಿ ಚುಟು..ಚುಟು ಹಾಡಿನ ಮಾದರಿಯ ಒಂದು ಹಾಡು ಕೂಡ ಇದೆ.



    ಇದನ್ನೂ ಓದಿ: Jacqueline and Sukesh: ರಾ ರಾ ರಕ್ಕಮ್ಮಗೆ ತಪ್ಪದ ಸಂಕಷ್ಟ, ಆತ ಮೋಸಗಾರ ಅಂತ ಗೊತ್ತಿದ್ರೂ ಜೊತೆಯಲ್ಲೇ ಇದ್ರಂತೆ!

    ಸಿಂಗಲ್ ಕಣ್ಣ ಹಾರಿಸ್ತಿ ಅಂತಲೇ ಶುರು ಆಗೋ ಗೀತೆ
    ಇದರಲ್ಲಿ ಯಾವ ಹೀರೋಗೂ ಕಮ್ಮಿ ಇಲ್ಲದ ರೀತಿಯಲ್ಲಿಯೇ ವೈಜನಾಥ್ ಬಿರಾದಾರ್ ಅಭಿನಯಿಸಿದ್ದಾರೆ. ಚುಟು ಚುಟು ಹಾಡನ್ನ ಹಾಡಿರೋ ಗಾಯಕರಾದ ರವೀಂದ್ರ ಸೊರ್ಗಾವಿ ಹಾಗೂ ಶಮಿತಾ ಮಲ್ನಾಡ್​ ಈ ವಿಶೇಷ ಹಾಡನ್ನ ಹಾಡಿದ್ದಾರೆ. ಶಿವು ಬೆರ್ಗಿ ಸಂಗೀತ ಕೊಟ್ಟು ಸಾಹಿತ್ಯವನ್ನು ಬರೆದಿದ್ದಾರೆ.



    ಇದನ್ನೂ ಓದಿ: Ranjani Raghavan: ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡಿ; ಇದು ಕನ್ನಡತಿಯ ಕರೆ!

    ಸಿಂಗಲ್ ಕಣ್ಣ ಹಾರಿಸ್ತಿ ಅಂತಲೇ ಶುರು ಆಗೋ ಈ ಗೀತೆಯ ವೀಡಿಯೋ ಸಾಂಗ್ ಅನ್ನೇ ಚಿತ್ರ ತಂಡ ರಿಲೀಸ್ ಮಾಡಿದೆ. ವೈಜನಾಥ್ ಬಿರಾದಾರ್ ಜೊತೆಗೆ ಇಲ್ಲಿ ನಟಿ ನೀತಾ ಮೈಂದರ್ಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಈ ಹಾಡು ರಿಲೀಸ್ ಆಗಿದ್ದು, ಹಾಸ್ಯ ಪ್ರಿಯರ ಹೃದಯ ಕದಿಯೋ ಎಲ್ಲ ಲಕ್ಷಣಗಳು ಈ ಹಾಡಿಗಿದೆ. ಉಳಿದಂತೆ ಇಡೀ ಸಿನಿಮಾ ಹೆಂಗಿದೆ ಅನ್ನೋದು ಸದ್ಯಕ್ಕೆ ಇರೋ ಕುತೂಹಲ.
    First published: