ಹ್ಯಾಟ್ರಿಕ್ ಹೀರೊ ಶಿವಣ್ಣನ ಎನರ್ಜಿಗೆ ಅಂತರಾಷ್ಟ್ರೀಯ ಕ್ರಿಕೆಟಿಗ ಫುಲ್ ಫಿದಾ

news18
Updated:September 9, 2018, 7:07 PM IST
ಹ್ಯಾಟ್ರಿಕ್ ಹೀರೊ ಶಿವಣ್ಣನ ಎನರ್ಜಿಗೆ ಅಂತರಾಷ್ಟ್ರೀಯ ಕ್ರಿಕೆಟಿಗ ಫುಲ್ ಫಿದಾ
@Shivu aDDa
news18
Updated: September 9, 2018, 7:07 PM IST
-ನ್ಯೂಸ್ 18 ಕನ್ನಡ

ಸ್ಯಾಂಡಲ್​ವುಡ್​ ಸ್ಟಾರ್​ಗಳ ಎನರ್ಜಿ ವಿಷಯಕ್ಕೆ ಬಂದರೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹೆಸರು ಮುಂಚೂಣಿಯಲ್ಲಿರುತ್ತದೆ. ಅದು ಸಿನಿಮಾದಲ್ಲಾಗಲಿ ಅಥವಾ ಕ್ರಿಕೆಟ್ ಮೈದಾನದಲ್ಲಾಗಲಿ ಸೆಂಚುರಿ ಸ್ಟಾರ್ ಫುಲ್ ಜೋಶ್​ನಲ್ಲಿ ಕಾಣಿಸುತ್ತಾರೆ. ಅದರಲ್ಲೂ ಕ್ರಿಕೆಟ್ ಮೈದಾನದಲ್ಲಂತೂ ಅವಕಾಶ ಸಿಕ್ಕಾಗೆಲ್ಲಾ ಸಖತ್ ಸ್ಟೆಪ್ಸ್​ ಹಾಕಿ ಅಭಿಮಾನಿಗಳನ್ನು ಮನರಂಜಿಸುವುದು ಶಿವಣ್ಣನ ಸ್ಟೈಲ್. ಈ ವಿಷಯ ಈಗ ಯಾಕಪ್ಪಾ ಅಂದರೆ ಶಿವಣ್ಣನ ಇಂತಹ ಎನರ್ಜಿ ನೋಡಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಆ್ಯಡಂ ಗಿಲ್​ಕ್ರಿಸ್ಟ್​ ಫಿದಾ ಆಗಿ ಬಿಟ್ಟಿದ್ದಾರೆ.ಕನ್ನಡ ಚಲನಚಿತ್ರ ಕಪ್ ಪಂದ್ಯಾಟಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಗಿಲ್​ಕ್ರಿಸ್ಟ್​, ಶಿವಣ್ಣನ ವಿಜಯನಗರ ಪೆಟ್ರಿಯಾಟ್ಸ್​ ತಂಡದ ಅಂತರಾಷ್ಟ್ರೀಯ ಆಟಗಾರ. ಆಸ್ಟ್ರೇಲಿಯಾದ ಅತಿರಥ ಮಹಾರಥರ ನಾಯಕತ್ವದ ಅಡಿಯಲ್ಲಿ ಬ್ಯಾಟ್ ಬೀಸಿರುವ ಗಿಲ್ಲಿಗೆ ಸೆಲೆಬ್ರಿಟಿ ಲೀಗ್ ಎಂಬುದು ಹೊಸ ಅನುಭವ. ಈ ಅನುಭವವನ್ನು ಮತ್ತಷ್ಟು ಹಸಿರಾಗಿಸಿದ್ದು ಶಿವಣ್ಣನ ಎನರ್ಜಿ ಎಂಬುದೇ ವಿಶೇಷ.

ಕೆಸಿಸಿ ಕಪ್​ನಲ್ಲಿ ತಂಡವನ್ನು ಮುನ್ನಡೆಸಿದ್ದ ಶಿವಣ್ಣನ ನಾಯಕತ್ವನ್ನು ಗುಣ ಮತ್ತು ಪ್ರೇಕ್ಷಕರನ್ನು ಮನರಂಜಿಸಿದ ಪರಿಗೆ ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟರ್ ಮನಸೋತಿದ್ದಾರೆ. ಅಲ್ಲದೆ ಶಿವಣ್ಣನೊಂದಿಗೆ ಫೋಟೊ ಕ್ಲಿಕ್ಕಿಸಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಎಂತಹ ಅದ್ಭುತ ನಾಯಕ, ಕುಣಿದು ಕುಪ್ಪಳಿಸುವ ಕಪ್ತಾನ ಎಂದು ಶೀರ್ಷಿಕೆ ನೀಡಿ ಹಾಡಿ ಹೊಗಳಿದ್ದಾರೆ. 
View this post on Instagram

 

A post shared by Adam Gilchrist (@gilly381) on


ತಂಡದ ಆಟಗಾರರಿಂದ ಫೋರ್, ಸಿಕ್ಸರ್ ಸುರಿಮಳೆ ಆಗುತ್ತಿದ್ದರೆ ಶಿವರಾಜ್​ ಕುಮಾರ್ ಅವರು ಟಗರು ಡ್ಯಾನ್ಸ್, ವಿಲನ್ ಸ್ಟೆಪ್ಸ್ ಮೂಲಕ ತಂಡದ ಆಟಗಾರರನ್ನು ಹುರಿದುಂಬಿಸಿದ್ದರು. ಇದನ್ನೆಲ್ಲವನ್ನು ಹತ್ತಿರದಿಂದಲೇ ನೋಡಿದ ಆ್ಯಡಂ ಗಿಲ್​ಕ್ರಿಸ್ಟ್​ ಶಿವಣ್ಣನ ಎನರ್ಜಿಗೆ ಕ್ಲೀನ್ ಬೌಲ್ಡ್​ ಆಗಿದ್ದಾರೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...