Gigi Hadid: ತಂಗಿಯ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಶುಭಾಶಯ ಕೋರಿದ ಅಮೆರಿಕನ್ ಮಾಡೆಲ್ ಗಿಗಿ ಹಡಿದ್‌

Bella Hadid Birthday: ಫೋಟೋದಲ್ಲಿ ಸೂಪರ್ ಮಾಡೆಲ್ ಬೆಲ್ಲಾ ಹಡಿದ್ ಹಾಗೂ ಕಾಯಾ ಸ್ವೆಟರ್ ಧರಿಸಿದ್ದು ಪಾರ್ಟಿ ಬಲೂನ್‌ಗಳನ್ನು ಅಲಂಕರಿಸುವುದರೊಂದಿಗೆ ಕಂಡುಬಂದಿದ್ದಾರೆ.

Gigi Hadid -Bella Hadid

Gigi Hadid -Bella Hadid

  • Share this:
    ಅಮೆರಿಕನ್ ಮಾಡೆಲ್ ಗಿಗಿ ಹಡಿದ್ (Gigi Hadid)‌ ತಮ್ಮ ಪ್ರೀತಿಯ ಸಹೋದರಿಗಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಸಹೋದರಿ ಬೆಲ್ಲಾ ಹಡಿದ್ (Bella Hadid) ಹುಟ್ಟುಹಬ್ಬಕ್ಕೆ ತಮ್ಮ ಮನೆಯಲ್ಲಿ ಮಾಡಿಕೊಂಡ ತಯಾರಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸಲುವಾಗಿ ಗಿಗಿ ತಮ್ಮ ಒಂದು ವರ್ಷದ ಮಗಳು ಕಾಯಾರೊಂದಿಗೆ ಸಹೋದರಿ ಬೆಲ್ಲಾ ಹಡಿದ್ ಇರುವ ಫೋಟೋವನ್ನು ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದು ತಂಗಿಗಾಗಿ ಭಾವನಾತ್ಮಕ ಹಾಗೂ ಪ್ರೀತಿ ತುಂಬಿದ ಹುಟ್ಟುಹಬ್ಬದ ಸಂದೇಶ ಕೋರಿದ್ದಾರೆ. ಫೋಟೋದಲ್ಲಿ ಸೂಪರ್ ಮಾಡೆಲ್ ಬೆಲ್ಲಾ ಹಡಿದ್ ಹಾಗೂ ಕಾಯಾ ಸ್ವೆಟರ್ ಧರಿಸಿದ್ದು ಪಾರ್ಟಿ ಬಲೂನ್‌ಗಳನ್ನು ಅಲಂಕರಿಸುವುದರೊಂದಿಗೆ ಕಂಡುಬಂದಿದ್ದಾರೆ.

    ಗಿಗಿ ಸಹೋದರಿಗೆ ಬರೆದಿರುವ ಹುಟ್ಟುಹಬ್ಬದ ಸಂದೇಶ ಹೀಗಿದ್ದು, ನಿನ್ನ ಹುಟ್ಟುಹಬ್ಬವನ್ನು ಇಂದು ಹಾಗೂ ಪ್ರತಿ ದಿನ ನಾವು ಆಚರಿಸುತ್ತೇವೆ. ಆಕೆ ನನ್ನ ಪುಟ್ಟ ಸಹೋದರಿಯಾಗಿರಬಹುದು. ಆದರೆ ಆಧ್ಯಾತ್ಮಿಕ ಅಂಗರಕ್ಷಕಿ ಕೂಡ ಹೌದು. ಚಿಕ್ಕಮ್ಮನಾಗಿ ಎಂದೆಂದಿಗೂ ಕಾಪಾಡುವವಳು ಎಂದು ಬರೆದುಕೊಂಡಿದ್ದಾರೆ. ನಿನ್ನ ಬೆಳವಣಿಗೆ ಹಾಗೂ ಬದ್ಧತೆಯ ಸಂಪೂರ್ಣ ಜವಬ್ದಾರಿಯನ್ನು ನೀನು ತೆಗೆದುಕೊಂಡಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಹಾಗೂ ನೀನು ನಿನಗಾಗಿ ಸೃಷ್ಟಿಸಿದ ಪ್ರತಿಯೊಂದೂ ನಿನಗೆ ಸಂತಸವನ್ನು ತರಲಿದೆ ನೀನು ಇದಕ್ಕೆ ಅರ್ಹಳು!!! 25 ನೇ ಜನ್ಮದಿನದ ಶುಭಾಶಯಗಳು. ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಗಿಗಿ ಬರೆದುಕೊಂಡಿದ್ದಾರೆ.

    ಗಿಗಿ ಹಡಿದ್ ಹಾಗೂ ಪ್ರಿಯಕರ ಜಯಾನ್ ಮಲಿಕ್ ತಮ್ಮ ಹೆಣ್ಣುಮಗುವಿನ ಫೋಟೋ ಹಂಚಿಕೊಂಡಿದ್ದು ಮಗುವಿನ ಮುಖವನ್ನು ಇನ್ನೂ ತೋರಿಸಬೇಕಾಗಿದೆ. ಜೋಡಿಗಳು ತಮ್ಮ ಮೊದಲ ಮಗುವನ್ನು ಸಪ್ಟೆಂಬರ್ 2020ರಲ್ಲಿ ಬರಮಾಡಿಕೊಂಡಿದ್ದರು. ಮಗುವಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಬಹಿರಂಗಗೊಳಿಸದೇ ಇರುವ ವೈಯಕ್ತಿಕ ನಿರ್ಧಾರಕ್ಕೆ ಮಾಧ್ಯಮಗಳು, ಸಾಮಾಜಿಕ ತಾಣ ಹಾಗೂ ಅಭಿಮಾನಿಗಳು ಗೌರವ ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ನಾವು ಉದ್ದೇಶಪೂರ್ವಕವಾಗಿ ಮಗಳ ಫೋಟೋವನ್ನು ಬಹಿರಂಗಪಡಿಸದೇ ಇರುವುದಿಲ್ಲ. ಆಕೆ ವಯಸ್ಸಿಗೆ ಬಂದಾಗ ಆಕೆಯನ್ನು ವಿಶ್ವಕ್ಕೆ ಹೇಗೆ ಪ್ರಸ್ತುತಪಡಿಸಬೇಕೆಂಬ ಆಯ್ಕೆಯನ್ನು ಮಗಳಿಗೆ ಬಿಟ್ಟಿದ್ದೇವೆ. ಹೀಗಾಗಿ ಮಗಳು ಬಯಸದೇ ಇರುವ ಸಾರ್ವಜನಿಕ ಚಿತ್ರಣವನ್ನು ಕುರಿತು ಚಿಂತಿಸದೆಯೇ ತನ್ನ ಬಾಲ್ಯವನ್ನು ಆಕೆ ಸಂಪೂರ್ಣವಾಗಿ ಕಳೆಯುವಂತಾಗಬೇಕು ಎಂಬುದು ನಮ್ಮ ಇರಾದೆಯಾಗಿದೆ ಎಂದು ಗಿಗಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನು ಓದಿ:  Viral Story: ಗಂಡ ಅತ್ತೆಯೊಂದಿಗೆ ಓಡಿ ಹೋದರೆ ದಿಕ್ಕು ಕಾಣದೆ ಹೆಂಡತಿ ಮಾವನನ್ನೇ ಮದುವೆಯಾದಳು!

    ನಮ್ಮ ಮಗಳನ್ನು ನ್ಯೂಯಾರ್ಕ್ ನಗರ ಹಾಗೂ ಸಂಪೂರ್ಣ ವಿಶ್ವದ ವೀಕ್ಷಣೆಗಾಗಿ ಕರೆದುಕೊಂಡು ಹೋಗುವಾಗ, ಕ್ಯಾಮೆರಾದಲ್ಲಿ ಮಗುವಿನ ಮುಖ ಕಂಡುಬಂದಾಗ ಅದನ್ನು ದಯವಿಟ್ಟು ಬ್ಲರ್ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ. ನನಗೆ ತಿಳಿದಿದೆ ಇದು ಹೆಚ್ಚಿನ ಕೆಲಸಗಳಿಗೆ ಕಾರಣವಾಗುತ್ತದೆ ಎಂಬುದು ಆದರೆ ಹೊಸದಾಗಿ ತಾಯಿಯಾಗಿರುವ ನಾನು ನನ್ನ ಮಗುವಿಗೆ ಅತ್ಯುತ್ತಮವಾಗಿರುವುದನ್ನು ನೀಡಲು ಬಯಸುತ್ತೇನೆ. ಎಲ್ಲಾ ಪೋಷಕರು ಮಾಡುವ ಅದೇ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸಾರ್ವಜನಿಕ ಕುಟುಂಬದಿಂದಲೂ ಬಂದಿರುವ ಅಪ್ತಾಪ್ತರನ್ನು ಮಾಧ್ಯಮದಲ್ಲಿ ಬಿಂಬಿಸದಂತೆ ಮಾಡಲು ನನ್ನ ಈ ಸಂವಹನ ನೆರವಾಗಲಿದೆ ಎಂದು ನಾನು ನಂಬುತ್ತೇನೆ ಎಂದು ಗಿಗಿ ಬರೆದುಕೊಂಡಿದ್ದಾರೆ.

    ಗಿಗಿ ಸಹೋದರಿಗೆ ಬರೆದಿರುವ ಹುಟ್ಟುಹಬ್ಬದ ಸಂದೇಶ, '' ನಿನ್ನ ಹುಟ್ಟುಹಬ್ಬವನ್ನು ಇಂದು ಹಾಗೂ ಪ್ರತಿ ದಿನ ನಾವು ಆಚರಿಸುತ್ತೇವೆ. ಆಕೆ ನನ್ನ ಪುಟ್ಟ ಸಹೋದರಿಯಾಗಿರಬಹುದು. ಆದರೆ ಆಧ್ಯಾತ್ಮಿಕ ಅಂಗರಕ್ಷಕಿ ಕೂಡ ಹೌದು. ಚಿಕ್ಕಮ್ಮನಾಗಿ ಎಂದೆಂದಿಗೂ ಕಾಪಾಡುವವಳು ಎಂದು ಬರೆದುಕೊಂಡಿದ್ದಾರೆ. ನಿನ್ನ ಬೆಳವಣಿಗೆ ಹಾಗೂ ಬದ್ಧತೆಯ ಸಂಪೂರ್ಣ ಜವಬ್ದಾರಿಯನ್ನು ನೀನು ತೆಗೆದುಕೊಂಡಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಹಾಗೂ ನೀನು ನಿನಗಾಗಿ ಸೃಷ್ಟಿಸಿದ ಪ್ರತಿಯೊಂದೂ ನಿನಗೆ ಸಂತಸವನ್ನು ತರಲಿದೆ ನೀನು ಇದಕ್ಕೆ ಅರ್ಹಳು!!! 25 ನೇ ಜನ್ಮದಿನದ ಶುಭಾಶಯಗಳು. ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ'' ಎಂದು ಗಿಗಿ ಬರೆದುಕೊಂಡಿದ್ದಾರೆ
    First published: