ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್​ ಗಿಫ್ಟ್​: ಪುನೀತ್​ ಹೊಸ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ..!

ಮಾರ್ಚ್ 17ಕ್ಕೆ ಪವರ್​ ಸ್ಟಾರ್​ ಪುನೀತ್​ ಹುಟ್ಟುಹಬ್ಬ. ಅಂದು ಅಪ್ಪು ತಮ್ಮ ಅಭಿಮಾನಿಗಳಿಗಾಗಿ ಡಬಲ್​ ಗಿಫ್ಟ್​ ಪ್ಲಾನ್​ ಮಾಡಿದ್ದಾರೆ. ತನ್ನ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಖುಷಿ ಪಡಿಸಲು ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

Anitha E | news18
Updated:March 15, 2019, 4:33 PM IST
ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್​ ಗಿಫ್ಟ್​: ಪುನೀತ್​ ಹೊಸ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ..!
ಹುಟ್ಟುಹಬ್ಬದಂದೇ ಅಪ್ಪು ಕೊಡಲಿದ್ದಾರೆ ಅಭಿಮಾನಿಗಳಿಗೆ ಡಬಲ್​ ಉಡುಗೊರೆ
Anitha E | news18
Updated: March 15, 2019, 4:33 PM IST
ಪವರ್​ ಸ್ಟಾರ್​ ಪುನೀತ್‍ರಾಜ್‍ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ರಾಜರತ್ನೋತ್ಸವ ಅನ್ನೋ ಹೆಸರಿನಲ್ಲಿ ಆಚರಿಸೋಕೆ ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಆದರೆ ಪುನೀತ್ ರಾಜ್​ಕುಮಾರ್​ ಹುಟ್ಟುಹಬ್ಬದಂದು ಕಾರಣಾಂತರಗಳಿಂದಾಗಿ ತಾನು ಮನೆಯಲ್ಲಿ ಇರುವುದಿಲ್ಲ. ಅದಕ್ಕಾಗಿ ಮರು ದಿನ ಭೇಟಿ ಮಾಡುವುದಾಗಿ ಅಭಿಮಾನಿಗಳಿಗೆ ಪ್ರೀತಿಯಿಂದ ಮನವಿ ಮಾಡಿಕೊಂಡಿದ್ದಾರೆ. ಆದರೆ ಒಂದು ದಿನ ತಡವಾದರೂ ಅಭಿಮಾನಿಗಳಿಗೆ ಸಮಯ ಕೊಡುತ್ತಿರುವ ಪುನೀತ್​, ಹುಟ್ಟುಹಬ್ಬದಂದು ಫ್ಯಾನ್ಸ್​ಗೆ ಡಬಲ್​ ಗಿಫ್ಟ್​ ಕೊಡಲು ನಿರ್ಧರಿಸಿದ್ದಾರೆ.

ಹೌದು, ಸಂತೋಷ್​ ಆನಂದ್​ ರಾಮ್​ ನಿರ್ದೇಶನದ 'ಯುವರತ್ನ' ಸಿನಿಮಾದ ಫಸ್ಟ್​ ಲುಕ್​ ಅಂದೇ ಬಿಡುಗಡೆಯಾಗುತ್ತಿದೆ. ಈ ಕುರಿತಂತೆ ಹೊಂಬಾಳೆ ಫಿಲ್ಮ್ಸ್​ ಹಾಗೂ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸಹ ಟ್ವೀಟ್​ ಮಾಡಿದ್ದಾರೆ.

#Yuvarathnaa First look on power star’s birthday💪 stylish -Mass first look ...Need ur wishes & Support 🙏 @PuneethRajkumar sir @VKiragandur sir @hombalefilms @Karthik1423 pic.twitter.com/rzIBaSbjBm
ಯುವರತ್ನ ಚಿತ್ರದ ಫಸ್ಟ್ ಲುಕ್ ಇದೆ ಮಾರ್ಚ್ 17 ಅಪ್ಪು ಹುಟ್ಟುಹಬ್ಬದ ದಿನ ಬಿಡುಗಡೆಯಾಗಲಿದೆ#YuvarathnaaFLonMar17@PuneethRajkumar @SanthoshAnand15 pic.twitter.com/goP1cmBtFG

ಹೊಸ ಸಿನಿಮಾ ಜೇಮ್ಸ್​ ಪುನೀತ್​ ಸದ್ಯ 'ಯುವರತ್ನ' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮುಗಿಯುವ ಮೊದಲೇ ಮೊತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರಂತೆ. ಯುವರತ್ನನ ನಂತರ ಅವರು ಜೇಮ್ಸ್​ ಆಗಿ ತೆರೆ ಮೇಲೆ ಅಬ್ಬರಿಸಲಿದ್ದಾರೆ.

ಅಪ್ಪು ಹುಟ್ಟುಹಬ್ಬದಂದೇ ಈ ಸಿನಿಮಾ ಮೋಷನ್​ ಪೋಸ್ಟರ್​ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಚೇತನ್​ ಕುಮಾರ್, ಪುನೀತ್​ ಅವರ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಾಜರತ್ನೋತ್ಸವ ಹೆಸರಿನಲ್ಲಿ ಪುನೀತ್ ಹುಟ್ಟುಹಬ್ಬ ಆಚರಿಸಲು ನಿರ್ಧರಿಸುವ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಎಲ್ಲ ಪುಟಗಳಲ್ಲೂ ಒಂದೇ ಪ್ರೊಫೈಲ್​ ಫೋಟೋ ಹಾಕಿಕೊಂಡಿದ್ದಾರೆ.

ಇನ್ನು ಅಪ್ಪು ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಸಿದ್ದಪಡಿಸಿರುವ ಹಾಡಿನ ಟ್ರೈಲರ್​ ಸದ್ಯ ಬಿಡುಗಡೆಯಾಗಿದೆ.

ಸದ್ಯ ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಮ್ಮ ಕಡೆಯಿಂದ ನಾನಾ ರೀತಿ ಉಡುಗೊರೆ ಕೊಟ್ಟರೆ, ಅಭಿಮಾನಿಗಳಿಗೂ ಪುನೀತ್​ ತಮ್ಮ ಕಡೆಯಿಂದ ಗಿಫ್ಟ್ ಅನ್ನು ಸಿದ್ದವಾಗಿಟ್ಟುಕೊಂಡಿದ್ದಾರೆ. - ಅನಿತಾ ಈ, 
First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626