Nicolas Cage: ಹಾಲಿವುಡ್ ನ ಖ್ಯಾತ ಸ್ಟಾರ್ ಗೆ ಇದೆಂಥಾ ದುಸ್ಥಿತಿ? ಕಂಠ ಪೂರ್ತಿ ಕುಡಿದು Ghost Rider ಮಾಡಿದ್ದೇನು?

Nicolas Cage: ಹಾಲಿವುಡ್ ನಲ್ಲಿ ಮೂರು ದಶಕಗಳ ಕಾಲ ರೂಲ್ ಮಾಡಿದ್ದ ನಿಕೋಲಸ್ ಈ ರೀತಿ ಕುಡಿದು ಗಲಾಟೆ ಮಾಡಿ, ಬಾರ್ ನಿಂದ ಹೊರದಬ್ಬಿಸಿ ಕೊಂಡಿದ್ದಾರೆ ಎಂದರೆ ನಿಜಕ್ಕೂ ಬೇಸರದ ಸಂಗತಿ.

ನಿಕೊಲಸ್ ಕೇಜ್

ನಿಕೊಲಸ್ ಕೇಜ್

  • Share this:
    Drunk Hollywood Actor: ಕಂಠ ಪೂರ್ತಿ ಕುಡಿದು ಗಲಾಟೆ ಮಾಡುವದು ಅಂದ್ರೆ ಅದ್ಯಾಕೋ ಸಿನೆಮಾ ಮಂದಿಗೆ ಬಲು ಇಷ್ಟದ ಕೆಲಸ ಅನ್ಸುತ್ತೆ. ಹಾಲಿವುಡ್ ಸ್ಟಾರ್ ಗಳು ಕುಡಿದು ಸಾರ್ವಜನಿರೊಂದಿಗೆ ಕಿರಿಕ್ ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಅದೆ ಸಾಲಿಗೆ "ಗೋಸ್ಟ್ ರೈಡರ್" (Ghost Rider) ಅಂತಲೇ ಖ್ಯಾತಿ ಪಡೆದಿರವ ನಿಕೋಲಸ್ ಕೇಜ್ (Nicolas Cage) ಸೇರಿಕೊಂಡಿದ್ದಾರೆ. ಲಾಸ್ ವೇಗಾಸ್ ನ ಬಾರ್ ಒಂದರಲ್ಲಿ ಕಂಠ ಪೂರ್ತಿ ಕುಡಿದು ಗಲಾಟೆ ಮಾಡಿದ್ದಾರೆ. ರೌಡಿಯಂತೆ ವರ್ತಿಸಿ ಅಲ್ಲಿದ್ದ ಇತರೆ ಗ್ರಾಹಕರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಸೇಮ್ ನಿರಾಶ್ರಿತ ವ್ಯಕ್ತಿಯಂತೆ ಬಾರ್ ಗೆ, ಎಂಟ್ರಿಯಾಗಿದ್ದರಂತೆ ನಟ ನಿಕೋಲಸ್ ಕೇಜ್.ಕಿರಿಕ್ ಜಾಸ್ತಿ ಆಗುತ್ತಿದ್ದಂತೆ, ಬಾರ್ ನ ಸಿಬ್ಬಂದಿ ನಿಕೋಲಸ್ ಕೇಜ್ ರವರನ್ನ ಹೊರದಬ್ಬಿದ್ದಾರೆ. ಗಲಾಟೆ ವೇಳೆ ನಾವು ಆತನನ್ನು ನಟ ಎಂದು ಗುರುತಿಸಲು ಆಗಲಿಲ್ಲ, ಹತ್ತಿರ ಬಳಿಕ ಬಂದಮೇಲೆ ಆತ ನಿಕೋಲಸ್ ಎಂದು ತಿಳಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    "ಲಿವಿಂಗ್ ಲಾಸ್ ವೇಗಾಸ್" (Living los Vegas) ಎಂಬ ಸಿನಿಮಾದಲ್ಲಿ ನಿಕೋಲಸ್ ಮದ್ಯವ್ಯಸನಿ, ನಿರಾಶ್ರಿತ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕಾಗಿ ಇವರಿಗೆ ಜಗತ್ತಿನ ಶ್ರೇಷ್ಠ ಪ್ರಶಸ್ತಿ ಆಸ್ಕರ್ ಕೂಡ ಸಿಕ್ಕಿತ್ತು. ಇದೀಗ ನಿಕೋಲಸ್ Lawry’s Prime Rib ಪಬ್ ನಲ್ಲಿ ದುರ್ವರ್ತನೆ ತೋರಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. "ಲೀವಿಂಗ್ ಲಾಸ್ ವೇಗಾಸ್ - 2" ಚಿತ್ರದಲ್ಲಿ ನಟಿಸಲು ಟ್ರೈನಿಂಗ್ ನಡೆಸುತ್ತಿದ್ದಾರೆ ಅಂತ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

    ಪಬ್ ನಲ್ಲಿ ರಾದ್ಧಾಂತ

    ಪಬ್ ಸಿಬ್ಬಂದಿ ಜೊತೆ ಜಗಳ ಹಾಗೂ ಸಿಬ್ಬಂದಿ ನಿಕೋಲಸ್ ರವರನ್ನು ಹೊರದಬ್ಬುವ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮರಾ ಒಂದರಲ್ಲಿ ಸೆರೆಯಾಗಿದೆ. ಚಿರತೆ ಪಟ್ಟಿಯ ಪ್ರಿಂಟ್ ಹೊಂದಿದ ಪ್ಯಾಂಟ್, ಹಾಗೂ ಕಪ್ಪು ಬಣ್ಣದ ಟಿ-ಶರ್ಟ್ ತೊಟ್ಟು, ಚಪ್ಪಲಿ ಧರಿಸದೆ ಬರಿಗಾಲಿನಲ್ಲೇ ನಿಕೋಲಸ್ ಪಬ್ ಗೆ ಬಂದಿದ್ದರಂತೆ. ಕೊನೆಗೆ ಅಲ್ಲೇ ಇದ್ದವರು ಚಪ್ಪಲಿ ನೀಡಿದ್ದಾರೆ. ಅದನ್ನೂ ಹಾಕಿಕೊಳ್ಳಲಾಗೆದೆ ನಿಕೋಲಸ್ ಪರದಾಡಿದರು ಅಂತ ಸಿಬ್ಬಂದಿ ಹೇಳಿದ್ದಾನೆ.

    ಹಾಲಿವುಡ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ನಿಕೋಲಸ್ ಕೇಜ್ ಗೆ 57 ವರ್ಷ ವಯಸ್ಸು. ಇದೇ ವರ್ಷದ ಪ್ರಾರಂಭದಲ್ಲಿ ಇವರ ತಾಯಿ ಕೂಡ ತೀರಿಕೊಂಡಿದ್ದರು. ಇವರ ದಾಂಪತ್ಯ ಜೀವನವು ಕೂಡ ಸರಿ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಕಾರಣ ನಿಕೋಲಸ್ ಒಟ್ಟು 5 ವಿವಾಹಗಳನ್ನು ಆಗಿದ್ದರು. ಅಲ್ಲದೆ ಇತ್ತೀಚೆಗೆ ಹೇಳಿಕೊಳ್ಳುವ ಪಾತ್ರಗಳಲ್ಲಿ ನಿಕೋಲಸ್ ನಟಿಸಿರಲಿಲ್ಲ. ಯಾವುದೇ ಅವಕಾಶವು ಇವರನ್ನು ಹುಡುಕಿಕೊಂಡು ಬರುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದಲೇ ನಿಕೋಲಸ್ ಮದ್ಯವ್ಯಸನಿಯಾಗಿದ್ದರಾ ಎಂಬ ಅನುಮಾನ ಮೂಡಿದೆ.

    ನಿಕೋಲಸ್ ಕೇಜ್ ಹಾಲಿವುಡ್ ಚಿತ್ರದ ಕಂಡ ಶ್ರೇಷ್ಠ ನಟ

    115ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಿಕೋಲಸ್ ಅಭಿನಯಿಸಿದ್ದಾರೆ. ಗೋಸ್ಟ್ ರೈಡರ್, ನ್ಯಾಷನಲ್ ಟ್ರೆಶರ್, ದಿ ಫೇಸ್ ಆಫ್, ನೆಕ್ಸ್ಟ್, ಲಾರ್ಡ್ ಆಫ್ ವಾರ್, ಗಾನ್ ಇನ್ 60 ಸೆಕೆಂಡ್ಸ್ ಸಿನಿಮಾ ಸೇರಿ ಹಲವು ಸಿನಿಮಾಗಳು ನಿಕೋಲಸ್ ಹಿಟ್ ಲಿಸ್ಟ್ ನಲ್ಲಿದೆ. ಇತ್ತೀಚೆಗೆ ಒಟಿಟಿಯಲ್ಲಿ ನಿಕೋಲಸ್ ಅಭಿನಯದ ಪ್ರಿಸನರ್ ಆಫ್ ದಿ ಗೋಸ್ಟ್ ಲ್ಯಾಂಡ್ ಹಾಗೂ ಪಿಗ್ ಚಿತ್ರಗಳು ಬಿಡುಗಡೆಯಾಗಿದ್ದವು. ಹಾಲಿವುಡ್ ನಲ್ಲಿ ಮೂರು ದಶಕಗಳ ಕಾಲ ರೂಲ್ ಮಾಡಿದ್ದ ನಿಕೋಲಸ್ ಈ ರೀತಿ ಕುಡಿದು ಗಲಾಟೆ ಮಾಡಿ, ಬಾರ್ ನಿಂದ ಹೊರದಬ್ಬಿಸಿ ಕೊಂಡಿದ್ದಾರೆ ಎಂದರೆ ನಿಜಕ್ಕೂ ಬೇಸರದ ಸಂಗತಿ.

    (ವರದಿ - ವಾಸುದೇವ್. ಎಂ)
    Published by:Soumya KN
    First published: