RRR Movie: ತೆರೆಗೆ ಬರಲು ಸಜ್ಜಾದ 'RRR', ನಾಳೆ ಚಿಕ್ಕಬಳ್ಳಾಪುರದಲ್ಲೇ ಯಾಕೆ ಗೊತ್ತಾ ಪ್ರೀ ರಿಲೀಸ್ ಇವೆಂಟ್?

ಭಾರೀ ನಿರೀಕ್ಷೆ ಹುಟ್ಟಿಸಿರುವ 'RRR' ಸಿನಿಮಾ ಇದೇ ಮಾರ್ಚ್ 25ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಇದೀಗ ನಾಳೆ ಈ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಕರ್ನಾಟಕದ ಚಿಕ್ಕಬಳ್ಳಾಪುರವನ್ನು ರಾಜಮೌಳಿ ಆಯ್ಕೆ ಮಾಡಿಕೊಂಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.

RRR ಪ್ರೀ ರಿಲೀಸ್ ಇವೆಂಟ್ ಪೋಸ್ಟರ್

RRR ಪ್ರೀ ರಿಲೀಸ್ ಇವೆಂಟ್ ಪೋಸ್ಟರ್

  • Share this:
ಭಾರತೀಯ ಸಿನಿ ರಂಗದ ಬಹು ನಿರೀಕ್ಷಿತ ಸಿನಿಮಾ (Cinema) 'ಆರ್‌ಆರ್‌ಆರ್‌' (RRR) ತೆರೆಗೆ ಬರಲು ಸಜ್ಜಾಗಿದೆ. ಟಾಲಿವುಡ್‌ನ (Tollywood) ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ (Rajamouli) ನಿರ್ದೇಶನದ ಈ ಸಿನಿಮಾದಲ್ಲಿ ಜ್ಯೂ. ಎನ್‌ಟಿಆರ್ (Jr.NTR), ರಾಮ್‌ಚರಣ್ (Ram Cahran) ಮುಖ್ಯ ಪಾತ್ರದಲ್ಲಿದ್ದಾರೆ. ಜೊತೆಗೆ ಬಾಲಿವುಡ್ ಬೆಡಗಿ ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಘಟಾನುಘಟಿಗಳು ಸ್ಕ್ರೀನ್ ಶೇರ್ ಮಾಡಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಇದೇ ಮಾರ್ಚ್ 25ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಇದೀಗ ನಾಳೆ ಈ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ (Pre Release Event) ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಕರ್ನಾಟಕದ ಚಿಕ್ಕಬಳ್ಳಾಪುರವನ್ನು ರಾಜಮೌಳಿ ಆಯ್ಕೆ ಮಾಡಿಕೊಂಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಆರ್‌ಆರ್‌ಆರ್‌ ಪ್ರೀ ರಿಲೀಸ್ ಇವೆಂಟ್

ನಾಳೆ ಅಂದರೆ ಮಾರ್ಚ್ 19ರಂದು ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ ಆರ್‌ಆರ್‌ಆರ್‌ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ನೂರು ಎಕರೆ ಜಾಗದಲ್ಲಿ ಎರಡು ಲಕ್ಷ ಜನರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಅಗಲಗುರ್ಕಿಯಲ್ಲಿ ಆರ್‌ಆರ್‌ಆರ್ ಸಿನಿಮಾದ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಅದ್ಧೂರಿ ವೇದಿಕೆ ಈಗಾಗಲೇ ಸಿದ್ಧವಾಗುತ್ತಿದೆ.

ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿಗೆ ಆಹ್ವಾನ

ಆರ್‌ಆರ್‌ಆರ್‌ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಸಿನಿಮಾ ಹಾಗೂ ರಾಜಕೀಯ ರಂಗದ ಗಣ್ಯರನ್ನು ಆಹ್ವಾನಿಸಲಾಗಿದೆ. ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್​ಕುಮಾರ್​ ಬರಲಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರ ಶಾಸಕ, ಆರೋಗ್ಯ ಸಚಿವ ಕೆ.ಸುಧಾಕರ್​ ಅವರು ಕೂಡ ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಇನ್ನು ಆರ್​ಆರ್​ಆರ್ ಸಿನಿಮಾದ ನಿರ್ದೇಶಕ ಎಸ್.ಎಸ್.ರಾಜಮೌಳಿ, ರಾಮ್​ ಚರಣ್, ಆಲಿಯಾ ಭಟ್​, ಜ್ಯೂ. ಎನ್​ಟಿಆರ್​, ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಲಿದ್ದಾರೆ‌.

ಇದನ್ನೂ ಓದಿ: Puneeth Rajkumar: ಮೊದಲ ದಿನವೇ 'ಕೆಜಿಎಫ್‌' ದಾಖಲೆ ಮುರಿದ 'ಜೇಮ್ಸ್'! 'ಪವರ್ ಸ್ಟಾರ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

ಕೆವಿಎನ್ ಸಂಸ್ಥೆಯಿಂದ ಸಿನಿಮಾ ವಿತರಣೆ

ಕರ್ನಾಟಕದಲ್ಲಿ ಕೆವಿಎನ್​ ಪ್ರೊಡಕ್ಷನ್​ ಸಂಸ್ಥೆಯು ಆರ್​ಆರ್​ಆರ್​ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇದಕ್ಕೂ ಮುನ್ನ, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ಮಾಲೀಕ ವೆಂಕಟ್​ ಕೊಣಂಕಿ, ಮಾರ್ಚ್ 19ರಂದು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಭರ್ಜರಿ ಪ್ಲಾನ್ ಮಾಡಿದ್ದಾರೆ.

ಪುನೀತ್‌ಗೆ ನುಡಿ ನಮನ ಸಲ್ಲಿಸಲಿರುವ ಆರ್‌ಆರ್‌ಆರ್‌ ತಂಡ

ಇನ್ನು ನಾಳಿನ ಅದ್ಧೂರಿ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರಿಗೆ ನಮನ ಸಲ್ಲಿಸಲಾಗುತ್ತದೆ. ಬಳಿಕ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಲೈವ್​ ಕಾರ್ಯಕ್ರಮ ನೀಡಲಿದ್ದಾರೆ. ಇನ್ನು 25 ಸಾವಿರ ಚದರ ಅಡಿಯ ಬೃಹತ್​ ಎಲ್​ಇಡಿ ಸ್ಕ್ರೀನ್​ ಮತ್ತು 45 ಬೃಹತ್​ ಲೇಸರ್​ ಲೈಟ್​ಗಳ ದೊಡ್ಡ ವೇದಿಕೆ ಸಿದ್ಧವಾಗುತ್ತಿದೆ.

ತೆಲುಗು ಸಿನಿಮಾ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರವೇ ಯಾಕೆ?

ಉಳಿದ ಎಲ್ಲಾ ಭಾಷೆಗಳಿಗಿಂತ ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ ಚರಣ್‌ ಕಾಂಬಿನೇಷನ್‌ನ ಈ ಸಿನಿಮಾದ ಮೇಲೆ ಆಂಧ್ರ ಹಾಗೂ ತೆಲಂಗಾಣ ಜನಕ್ಕೆ ಹೆಚ್ಚಿನ ನಿರೀಕ್ಷೆಗಳಿವೆ. ಈಗಾಗಿ ಆ ಕಡೆ ಕಾರ್ಯಕ್ರಮ ನಡೆದರೆ ಹೆಚ್ಚಿನ ಜನರು ಭಾಗವಹಿಸುವ ಸಾಧ್ಯತೆಗಳಿವೆ. ಹೀಗಾದರೆ ಜನಸಂದಣಿಯನ್ನು ನಿಭಾಯಿಸುವುದು ತುಂಬಾ ಕಷ್ಟಕರವಾದ ಕಾರಣ ರಾಜಮೌಳಿ ಚಿಕ್ಕಬಳ್ಳಾಪುರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.

ಇದನ್ನೂ ಓದಿ: Explained: 'The Kashmir Files' ಸಿನಿಮಾದಲ್ಲಿ ತೋರಿಸಿದ್ದು ಟ್ರೇಲರ್ ಅಷ್ಟೇ! ಕಾಶ್ಮೀರಿ ಪಂಡಿತರ ಬದುಕಿನ ಕರಾಳ ಕಥೆ ಇಲ್ಲಿದೆ ಓದಿ

ಚಿಕ್ಕಬಳ್ಳಾಪುರ ಭಾಗದಲ್ಲಿ ತೆಲುಗು ಪ್ರಭಾವ

ಇನ್ನು ಚಿಕ್ಕಬಳ್ಳಾಪುರ ಆಂಧ್ರ ಮತ್ತು ಕರ್ನಾಟಕ ಗಡಿಯಲ್ಲಿ ಬರುತ್ತದೆ. ಇಲ್ಲಿ ಕನ್ನಡದ ಜೊತೆಗೆ ತೆಲುಗು ಪ್ರಭಾವವೂ ಇದೆ. ಇಲ್ಲೂ ಕೂಡ ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ ಅಭಿಮಾನಿಗಳು ಇದ್ದಾರೆ. ಹೀಗಾಗಿ ಇಲ್ಲಿ ಕಾರ್ಯಕ್ರಮ ನಡೆದರೆ ತೆಲುಗು ಹಾಗೂ ಕನ್ನಡ ಅಭಿಮಾನಿಗಳನ್ನು ಸೆಳೆಯಬಹುದು ಎನ್ನುವುದು ರಾಜಮೌಳಿ ಪ್ಲಾನ್.
Published by:Annappa Achari
First published: