Puneeth Rajkumar: ಬೊಂಬೆ ಹೇಳುತೈತೆ ಹಾಡು ಹಾಡಿದ ಜರ್ಮನ್ ಅಂಧ ಗಾಯಕಿ

ಜರ್ಮನ್ ಗಾಯಕಿ

ಜರ್ಮನ್ ಗಾಯಕಿ

ಜರ್ಮನ್​ನ ಅಂಧ ಗಾಯಕಿ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡನ್ನು ಹಾಡಿ ನೆಟ್ಟಿಗರನ್ನು ರಂಜಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ಜರ್ಮನ್​ ಅಂಧ ಗಾಯಕಿ ಒಬ್ಬರು ಬಹಳಷ್ಟು ಭಾರತೀಯ ಹಾಡುಗಳನ್ನು (Indian songs) ಹಾಡಿ ನೆಟ್ಟಿಗರನ್ನು ರಂಜಿಸುತ್ತಾರೆ. ಫಾರಿನರ್ ಸಿಂಗರ್​ಗಳು ಭಾರತೀಯ ಹಾಡು ಹಾಡಿದರೆ ಅದನ್ನು ಕೇಳುವುದು ದೇಸಿ ನೆಟ್ಟಿಗರಿಗೆ ಒಂದು ವಿಶೇಷ ಕ್ರೇಜ್. ಸೋಷಿಯಲ್ ಮೀಡಿಯಾದಲ್ಲಿ (Social Media) ಹವಾ ಸೃಷ್ಟಿಸಿ ನೆಟ್ಟಿಗರನ್ನು ಮೆಚ್ಚಿಸುವುದರಲ್ಲಿ ಈ ಜರ್ಮನ್ ಗಾಯಕಿ (German Singer) ನಂಬರ್ ವನ್. ಈಗಾಗಲೇ ಇವರು ಬಹಳಷ್ಟು ದೇಸಿ ಹಾಡುಗಳನ್ನು (Songs) ಹಾಡಿದ್ದಾರೆ. ಅವುಗಳೆಲ್ಲ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿವೆ. ಇದೀಗ ಜರ್ಮನ್ ಗಾಯಕಿ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡನ್ನು ಹಾಡಿದ್ದಾರೆ.


ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಎಂದು ಹಾಡಿರುವ ಜರ್ಮನ್ ಗಾಯಕಿ ಹಾಡನ್ನು ಸುಂದರವಾಗಿ ಹಾಡಲು ಪ್ರಯತ್ನಿಸಿದ್ದಾರೆ. ಅದರ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.









View this post on Instagram






A post shared by CassMae (@cassmaeofficial)





ಈ ಹಾಡಿನ ಮೂಲಕ ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ನೀವು ಈಗಲೂ ನಟನನ್ನು ನಿಮ್ಮ ಮನಸಿನಲ್ಲಿ ಫೀಲ್ ಮಾಡುತ್ತಿದ್ದರೆ ಇದನ್ನು ಸೇವ್ ಮಾಡಿಕೊಂಡು ಶೇರ್ ಮಾಡಿ ಎಂದು ಗಾಯಕಿ ತಮ್ಮ ಪೋಸ್ಟ್ ಶೇರ್ ಮಾಡುವಾಗ ಬರೆದಿದ್ದಾರೆ.


ವೈರಲ್ ಆಗಿದೆ ವಿಡಿಯೋ


ಈ ವಿಡಿಯೋವನ್ನು 13 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ಕನ್ನಡಿಗರು ಈ ಹಾಡನ್ನು ಹಾಡಿರುವುದಕ್ಕೆ ಗಾಯಕಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇನ್ನೂ ಕೆಲವರು ನಿಮ್ಮ ಕನ್ನಡ ಪ್ರೀತಿಗೆ ಅಭಿನಂದನೆಗಳು ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್​ನಲ್ಲಿ ಬರೆಯುತ್ತಿದ್ದಾರೆ.


ಇದನ್ನೂ ನೋಡಿ: Kantara Song: ಜರ್ಮನ್ ಅಂಧ ಗಾಯಕಿಯ ಧ್ವನಿಯಲ್ಲಿ ವರಾಹ ರೂಪಂ! ಸಖತ್ ವೈರಲ್


ಗೊಂಬೆ ಹೇಳುತೈತೆ ರಾಜಕುಮಾರ ಸಿನಿಮಾದ ಹಿಟ್ ಹಾಡು


ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡು ಸಖತ್ ಹಿಟ್ ಆಗಿದೆ. ವಿಜಯ್ ಪ್ರಕಾಶ್, ಸಂತೋಷ್ ಆನಂದ್ ರಾಮ್ ಅವರು ಈ ಹಾಡನ್ನು ಹಾಡಿದ್ದಾರೆ. 2017ರಲ್ಲಿ ರಿಲೀಸ್ ಆದ ರಾಜಕುಮಾರ ಸಿನಿಮಾ ಭರ್ಜರಿ ಹಿಟ್ ಆಗಿತ್ತು.


ಕಾಂತಾರದ ಹಾಡು ಹಾಡಿದ್ದ ಜರ್ಮನ್ ಗಾಯಕಿ


ಜರ್ಮನ್​ನ ಖ್ಯಾತ ಗಾಯಕಿ ಕ್ಯಾಸ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಹುಟ್ಟಿನಿಂದಲೇ ಅಂಧತ್ವದೊಂದಿಗೆ ಬಾಳುತ್ತಿರುವ ಇವರು ಬೇರೆ ಬೇರೆ ಭಾಷೆಗಳ ಹಾಡು ಹಾಡಿ ತಮ್ಮ ಇನ್​ಸ್ಟಾಗ್ರಾಮ್ ಅಕೌಂಟ್​​ನಲ್ಲಿ ಶೇರ್ ಮಾಡುತ್ತಾರೆ. ಇವು ವೈರಲ್ ಆಗುತ್ತವೆ. ಅದೇ ರೀತಿ ಅವರ ಅಭಿಮಾನಿಗಳು ಅವರಿಗೆ ಕಮೆಂಟ್ ಮಾಡಿ ತಮಗೆ ಕೇಳಬೇಕಾದ ಹಾಡನ್ನು ಮೆನ್ಶನ್ ಮಾಡುತ್ತಾರೆ.


ಕಾಂತಾರ ಹಾಡಿಗೆ ಬೇಡಿಕೆ ಇಟ್ಟಿದ್ದ ಮಂದಿ


ಅವರ ಅಭಿಮಾನಿಗಳಿಗೆ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ಹವಾ ತಲುಪಿದೆ. ಅವರೆಲ್ಲರೂ ವರಾಹ ರೂಪಂ ಕನ್ನಡ ಹಾಡನ್ನು ಹಾಡಿ ಎಂದು ಕಾಮೆಂಟ್ ಬಾಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಗಮನಿಸಿದ ಕ್ಯಾಸ್ಮಾ ಅವರು ವರಾಹ ರೂಪಂ ಹಾಡನ್ನು ಹಾಡಿದ್ದಾರೆ.




ನಿಮ್ಮಲ್ಲಿ ಬಹಳಷ್ಟು ಜನರು ನಾನು ಕನ್ನಡದಲ್ಲಿ ಹಾಡಬೇಕೆಂದು ಕೇಳಿದ್ದೀರಿ. ನಾನು ಹಾಡಿನ ಸಾಲುಗಳನ್ನು ಸರಿಯಾಗಿ ಹಾಡಿದ್ದೇನೆ ಎಂದುಕೊಳ್ಳುತ್ತೇನೆ. ವರಾಹ ರೂಪಂಗೆ ಸ್ಪೆಷಲ್ ಪಿಯಾನೋ ಸೌಂಡ್ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಎಂದು ಅವರು ಕ್ಯಾಪ್ಶನ್​ನಲ್ಲಿ ಬರೆದಿದ್ದಾರೆ.


ವೈರಲ್ ಆಯ್ತು ಸಾಂಗ್


ಜರ್ಮನ್ ಯುವತಿ ಹಾಡಿರುವ ಈ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಾಡಿಗೆ 83 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 2 ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೂ ಜರ್ಮನ್ ಗಾಯಕಿ ಬಾಯಲ್ಲೂ ಕಾಂತಾರ ಹಾಡು ಬಂದಿರುವುದು ವಿಶೇಷ ಅಂತಿದ್ದಾರೆ ದೇಸಿ ನೆಟ್ಟಿಗರು

Published by:Divya D
First published: