Genelia: 10 ವರ್ಷದ ಬ್ರೇಕ್ ಬಳಿಕ ಮತ್ತೆ ಸಿನೆಮಾದತ್ತ ಜೆನಿಲಿಯಾ; ಗಂಡ ರಿತೇಶ್​ಗೆ ವಿರಾಮ!

ಜೆನಿಲಿಯಾ ಅವರು ಬೊಮ್ಮರಿಲ್ಲು ಚಿತ್ರದಿಂದ ತುಂಬಾನೇ ಜನಪ್ರಿಯ ನಟಿಯಾಗಿದ್ದರು. ನಂತರ ಕೆಲವು ಚಿತ್ರಗಳಲ್ಲಿ ನಟಿಸಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರೊಡನೆ ಮದುವೆಯಾದ ನಂತರ ಅಷ್ಟಾಗಿ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ.  ಆದರೆ ಈಗ 10 ವರ್ಷಗಳ ವಿರಾಮದ ನಂತರ, ನಟಿ ಜೆನಿಲಿಯಾ ವಿವಿಧ ಭಾಷೆಗಳಲ್ಲಿ ಹಲವಾರು ಪ್ರಾಜೆಕ್ಟ್ ಗಳೊಂದಿಗೆ ಚಲನಚಿತ್ರಗಳಿಗೆ ಮರಳಲು ಸಜ್ಜಾಗಿದ್ದಾರೆ.

ಜೆನಿಲಿಯಾ

ಜೆನಿಲಿಯಾ

  • Share this:
ನೀವು ತೆಲುಗು ಸೂಪರ್ ಹಿಟ್ ಚಿತ್ರ (Telugu Super Hit Movie) ‘ಬೊಮ್ಮರಿಲ್ಲು’ ನೋಡಿದ್ರೆ ನಿಮಗೆ ನಟಿ ಜೆನಿಲಿಯಾ (Actress Genelia) ಯಾರು ಅಂತ ಚೆನ್ನಾಗಿಯೇ ಗೊತ್ತಿರುತ್ತದೆ. ಹೌದು.. ಜೆನಿಲಿಯಾ ಅವರು ಬೊಮ್ಮರಿಲ್ಲು ಚಿತ್ರದಿಂದ ತುಂಬಾನೇ ಜನಪ್ರಿಯ ನಟಿಯಾಗಿದ್ದರು. ನಂತರ ಕೆಲವು ಚಿತ್ರಗಳಲ್ಲಿ ನಟಿಸಿ ಬಾಲಿವುಡ್ ನಟ (Bollywood Actor) ರಿತೇಶ್ ದೇಶಮುಖ್ (Ritesh Deshmukh) ಅವರೊಡನೆ ಮದುವೆಯಾದ ನಂತರ ಅಷ್ಟಾಗಿ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ.  ಆದರೆ ಈಗ 10 ವರ್ಷಗಳ ವಿರಾಮದ ನಂತರ, ನಟಿ ಜೆನಿಲಿಯಾ ವಿವಿಧ ಭಾಷೆಗಳಲ್ಲಿ ಹಲವಾರು ಪ್ರಾಜೆಕ್ಟ್ ಗಳೊಂದಿಗೆ (Projects) ಚಲನಚಿತ್ರಗಳಿಗೆ ಮರಳಲು ಸಜ್ಜಾಗಿದ್ದಾರೆ.

ಜೆನಿಲಿಯಾ ಅವರ ಮುಂದಿನ ಸಿನೆಮಾಗಳಾವುದು 
ಅವರು ‘ಮಿಸ್ಟರ್ ಮಮ್ಮಿ’ ಮತ್ತು ‘ಟ್ರಯಲ್ ಪೀರಿಯಡ್’ ಎಂಬ ಎರಡು ಹಿಂದಿ ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಇನ್ನೂ ಹೆಸರಿಡದ ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ವೇದ್ ಎಂಬ ತಮ್ಮ ಚೊಚ್ಚಲ ಮರಾಠಿ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ, ಇದನ್ನು ಅವರ ಪತಿ, ನಟ ರಿತೇಶ್ ದೇಶಮುಖ್ ಅವರು ನಿರ್ದೇಶಿಸಲಿದ್ದಾರೆ.

ನಟನೆಯ ಬಗ್ಗೆ ನಟಿ ಜೆನಿಲಿಯಾ ಏನು ಹೇಳಿದ್ದಾರೆ ನೋಡಿ
ನ್ಯೂಸ್ 18 ಜೊತೆಗಿನ ವಿಶೇಷ ಸಂವಾದದಲ್ಲಿ, ಜೆನಿಲಿಯಾ ಅವರು ಒಂದು ದಶಕದ ನಂತರ ಕ್ಯಾಮೆರಾವನ್ನು ಎದುರಿಸುವ ಬಗ್ಗೆ ಆತಂಕಗೊಂಡಿದ್ದರು ಎಂದು ಹೇಳುತ್ತಾರೆ. "ನಾನು ತುಂಬಾ ಉತ್ಸುಕಳಾಗಿದ್ದೆ, ಆದರೆ ನನ್ನ ಕೆಲಸದ ಬಗ್ಗೆ ವಿಷಯವೆಂದರೆ ನಾನು ಅದನ್ನು ತುಂಬಾ ಪ್ರೀತಿಸುತ್ತೇನೆ. ನಾನು ನಟನೆಯನ್ನು ಪ್ರೀತಿಸುತ್ತೇನೆ, ಸ್ಕ್ರಿಪ್ಟ್ ಗಳನ್ನು ಅರ್ಥೈಸಿಕೊಳ್ಳುತ್ತೇನೆ ಮತ್ತು ಅದನ್ನು ನಾನು ತೆರೆಯ ಮೇಲೆ ಆ ಪಾತ್ರವನ್ನು ಜೀವಿಸಲು ಪ್ರಯತ್ನಿಸುತ್ತೇನೆ ಮತ್ತು ಅದು ನನಗೆ ತುಂಬಾನೇ ಮುಖ್ಯವಾಗಿರುತ್ತದೆ" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Tamannaah Bhatia: ಕೆಜಿಎಫ್ ಬೆಡಗಿಯ ಟಾಪ್ ಫ್ಯಾಷನ್ ಗೋಲ್ಸ್! ಇಲ್ಲಿವೆ ಫೋಟೋಸ್

ಜೆನಿಲಿಯಾ ಕಳೆದ ಕೆಲವು ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅವರು ಕೊನೆಯದಾಗಿ 2012 ರಲ್ಲಿ ಬಿಡುಗಡೆಯಾದ ‘ತೇರೆ ನಾಲ್ ಲವ್ ಹೋ ಗಯಾ’ ಮತ್ತು ‘ನಾ ಇಶ್ಟಮ್’ ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ನಟನೆಯಿಂದ ದೂರವಿದ್ದಾಗ, ಅವರು ತನ್ನ ಮಕ್ಕಳಾದ ರಿಯಾನ್ ಮತ್ತು ರಾಹಿಲ್ ಅವರೊಂದಿಗೆ ನಿರತರಾಗಿದ್ದರು. ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ಅವರಿಂದ ದೂರವಿರುವುದು ಅಷ್ಟೊಂದು ಸುಲಭವಲ್ಲ, ಆದರೆ ರಿತೇಶ್ ಮನೆಯಲ್ಲಿಯೇ ಉಳಿದುಕೊಂಡು ಮನೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಕ್ಕಾಗಿ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ನಟಿ ಹೇಳಿದ್ದಾರೆ.

ಪತಿ ಹಾಗೂ ಪತ್ನಿಯ ಹೊಂದಾಣಿಕೆ ನೋಡಿ ಹೇಗಿದೆ ಅಂತ
35 ವರ್ಷದ ನಟಿ "ನಾನು ಅತ್ಯಂತ ಬೆಂಬಲ ನೀಡುವ ಪತಿಯನ್ನು ಹೊಂದಿದ್ದೇನೆ ಮತ್ತು ಉತ್ತಮ ವಿಷಯ ಎಂದರೆ ನಾವಿಬ್ಬರೂ ಪರಸ್ಪರರ ಸಮಯಕ್ಕೆ ಅನುಗುಣವಾಗಿ ನಮ್ಮ ವೇಳಾಪಟ್ಟಿಯನ್ನು ಯೋಜಿಸುತ್ತೇವೆ. ನಾನು ಚಿತ್ರೀಕರಣಕ್ಕೆ ಹೋದಾಗ ರಿತೇಶ್ ಮನೆಯಲ್ಲಿ ಒಬ್ಬ ಗೃಹಿಣಿ ಅಂತೆ ಎಲ್ಲವನ್ನೂ ನಿಭಾಯಿಸುತ್ತಾರೆ. ನಾನು ದೆಹಲಿಯಲ್ಲಿದ್ದಾಗ, ಅವರು ಮಕ್ಕಳೊಂದಿಗೆ ಇದ್ದರು. ನಾನು ಮನೆಯಿಂದ ದೂರ ಇದ್ದೇನೆ ಎಂಬ ಭಾವನೆ ನನ್ನನ್ನು ಹೆಚ್ಚಾಗಿ ಕಾಡದೆ ಇರಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ:  Celebrity Couple: ಶ್ರೀಮಂತ ಉದ್ಯಮಿಗಳನ್ನು ಮದುವೆಯಾದ ಕಿರುತೆರೆ ಸುಂದರಿಯರಿವರು

ಜೆನಿಲಿಯಾ ತನ್ನ ನಟನೆಯನ್ನು ಪುನರಾರಂಭಿಸಲು ಪ್ರೇರೇಪಿಸಿದ ಸಂಗತಿಯೆಂದರೆ, ತಾಯಂದಿರು ಸಹ ಕೆಲಸ ಮಾಡುವ ವೃತ್ತಿಪರರಾಗಬಹುದು ಎಂದು ಅವರು ಬಯಸಿದ್ದರು. "ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಕಾರ್ಯನಿರತರಾಗಿರುವಾಗ ತಮ್ಮ ತಾಯಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ಏಕೆಂದರೆ ಅವರು ನಮ್ಮನ್ನು ಗೌರವಿಸುತ್ತಾರೆ, ಪ್ರಶಂಸಿಸುತ್ತಾರೆ ಮತ್ತು ನಮ್ಮಿಂದ ಕಲಿಯುತ್ತಾರೆ, ಇದು ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಅವರಿಗೆ ತಿಳಿಸುವುದು ಬಹಳ ಮುಖ್ಯ" ಎಂದು ಹೇಳಿದರು.
Published by:Ashwini Prabhu
First published: