• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Salman Khan: ಬರ್ತ್​ಡೇ ಪಾರ್ಟಿಯಲ್ಲಿ ಜೆನಿಲಿಯಾ ಜೊತೆ ಸಲ್ಲು ಭರ್ಜರಿ ಡ್ಯಾನ್ಸ್​: ವಿಡಿಯೋ ಸಖತ್​​ ವೈರಲ್​!​

Salman Khan: ಬರ್ತ್​ಡೇ ಪಾರ್ಟಿಯಲ್ಲಿ ಜೆನಿಲಿಯಾ ಜೊತೆ ಸಲ್ಲು ಭರ್ಜರಿ ಡ್ಯಾನ್ಸ್​: ವಿಡಿಯೋ ಸಖತ್​​ ವೈರಲ್​!​

ನಟ ಸಲ್ಮಾನ್​ ಖಾನ್​, ಜೆನಿಲಿಯಾ

ನಟ ಸಲ್ಮಾನ್​ ಖಾನ್​, ಜೆನಿಲಿಯಾ

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜೆನಿಲಿಯಾ ಹಾಗೂ ಸಲ್ಮಾನ್ ಸ್ಟೆಪ್ಸ್​​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಭಾರಿ ಮೆಚ್ಚುಗೆ ಪಡೆದಿದೆ. 56ರಲ್ಲೂ ಸಲ್ಲು ಭಾಯ್​ ಅವರ ಎನರ್ಜಿ ಕಂಡು  ಫ್ಯಾನ್ಸ್​ ದಂಗಾಗಿದ್ದಾರೆ.

  • Share this:

ಬಾಲಿವುಡ್ ​(Bollywood) ಭಜರಂಗಿ ಭಾಯ್​ ಜಾನ್​ ಸಲ್ಮಾನ್​ ಖಾನ್​ (Salman Khan) ಅವರು ರೇಂಜ್​​ ಎಲ್ಲರಿಗೂ ಗೊತ್ತಿದೆ. ಪ್ರತಿ ವರ್ಷ ಅವರ ಹುಟ್ಟುಹಬ್ಬದ ಪಾರ್ಟಿ ಜೋರಾಗಿಯೇ ಇರುತ್ತದೆ. ನಿನ್ನೆ (ಡಿ.27) ಸಲ್ಮಾನ್​ ಖಾನ್​ ಫಾರ್ಮ್​ ಹೌಸ್​ನಲ್ಲಿ ಬರ್ತ್​ಡೇ (Salman Khan Birthday) ಆಚರಣೆ ಮಾಡಿಕೊಂಡಿದ್ದಾರೆ. ಅವರ ಆಪ್ತರು, ಸ್ನೇಹಿತರು ಮತ್ತು ಅನೇಕ ಸೆಲೆಬ್ರಿಟಿಗಳು ಫಾರ್ಮ್​ ಹೌಸ್​ಗೆ (Salman Khan Farmhouse) ತೆರಳಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕ ಸಲ್ಲುಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಸಲ್ಮಾನ್​ ಖಾನ್​ ಅವರು ಸದ್ಯ ತಮ್ಮ ಪನ್ವೇಲ್​ ಫಾರ್ಮ್​ಹೌಸ್ (Farm House)​ನಲ್ಲಿ ಇದ್ದಾರೆ. ಅಲ್ಲಿಯೇ ಬರ್ತ್​ಡೇ ಪಾರ್ಟಿ ನಡೆದಿದೆ. ಸಲ್ಮಾನ್​ ಕೇಕ್​ ಕಟ್​ ಮಾಡುವ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಇದೀಗ ಸಲ್ಮಾನ್​ ಖಾನ್​ ಅವರ ಮತ್ತೊಂದು ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಹುಟ್ಟುಹಬ್ಬದ ಸಂಭ್ರಮಕ್ಕೆ ಸಲ್ಮಾನ್ ನಿನ್ನೆ ರಾತ್ರಿ ಅವರ ಪನ್ವೆಲ್ ಫಾರ್ಮ್​ಹೌಸ್​ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್ ತಾರೆಯರು ಸೇರಿದಂತೆ ಹಲವರು ಆಗಮಿಸಿ ಸಲ್ಮಾನ್ ಆತಿಥ್ಯ ಸ್ವೀಕರಿಸಿದರು. ಈ ಪಾರ್ಟಿಯ ಮಸ್ತ್ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.


ಜೆನಿಲಿಯಾ ಜೊತೆ ಸಲ್ಲು ಭಾಯ್​ ಭರ್ಜರಿ ಡ್ಯಾನ್ಸ್​!


ಹೌದು, ಬಾಲಿವುಡ್ ನಟ ರಿತೇಶ್ ದೇಶ್​ಮುಖ್ ತಮ್ಮ ಪತ್ನಿ ಜೆನಿಲಿಯಾ  ಜತೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಸಲ್ಮಾನ್ ಹಾಗೂ ಜೆನಿಲಿಯಾ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿರುವ ಹಳೇ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ರಿತೇಶ್ ಸೆರೆಹಿಡಿದು, ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಶೇರ್​ ಮಾಡುವ ಮೂಲಕ ಸಲ್ಲು ಭಾಯ್​ಗೆ ವಿಶ್​ ಮಾಡಿದ್ದಾರೆ. ‘ಅತ್ಯುತ್ತಮ ಮನಸ್ಸನ್ನು ಹೊಂದಿರುವ ಸಲ್ಮಾನ್​ಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಸಂತೋಷ, ಪ್ರೀತಿ ಮತ್ತು ಉತ್ತಮ ಆರೋಗ್ಯ ನೀಡಲಿ’’ ಎಂದು ರಿತೇಶ್​ ಬರೆದುಕೊಂಡಿದ್ದಾರೆ.


ಇದನ್ನು ಓದಿ : ಸಲ್ಲುಭಾಯ್​ಗೆ 3 ಬಾರಿ ಕಚ್ಚಿತ್ತಂತೆ ಹಾವು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್!


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​!


ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜೆನಿಲಿಯಾ ಹಾಗೂ ಸಲ್ಮಾನ್ ಸ್ಟೆಪ್ಸ್​​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಭಾರಿ ಮೆಚ್ಚುಗೆ ಪಡೆದಿದೆ. 56ರಲ್ಲೂ ಸಲ್ಲು ಭಾಯ್​ ಅವರ ಎನರ್ಜಿ ಕಂಡು  ಫ್ಯಾನ್ಸ್​ ದಂಗಾಗಿದ್ದಾರೆ. ಮತ್ತೊಬ್ಬ ಸಲ್ಮಾನ್​ ಖಾನ್​ಗೆ ಡ್ಯಾನ್ಸ್​ ಬರಲ್ಲ ಎಂದವರು ಎಲ್ಲಿದ್ದಾರೆ. ಈ ವಿಡಿಯೋ ನೋಡಿ ಬಳಿಕ ಆ ಮಾತನ್ನು ಹೇಳಿ ಎಂದು ಸವಾಲು ಹಾಕಿದ್ದಾನೆ. ಇನ್ನೂ ಕೆಲವರು ಸಲ್ಮಾನ್​ ಖಾನ್​ ಡ್ಯಾನ್ಸ್​ ಅನ್ನು ವಿಚಿತ್ರವಾಗಿ ಟ್ರೋಲ್​ ಮಾಡಿದ್ದಾರೆ. ಹಾವು ಈಗ ಕಚ್ಚಿರಬೇಕು ಅದಕ್ಕೆ ಹೀಗೆ ಕುಣಿಯುತ್ತಿದ್ದಾರೆ ಎಂದು ಟ್ರೋಲ್​ ಮಾಡಿದ್ದಾರೆ.


ಇದನ್ನು ಓದಿ : `ಪವನ ಪುತ್ರ ಭಾಯ್​ಜಾನ್’​ ಅವತಾರದಲ್ಲಿ ಸಲ್ಲು: ಮುಂದಿನ 5 ಸಿನಿಮಾಗಳ ಡೀಟೆಲ್ಸ್​​ ಇಲ್ಲಿದೆ..


‘ಪವನ ಪುತ್ರ ಭಾಯ್​ಜಾನ್​’ ಅವತಾರದಲ್ಲಿ ಸಲ್ಮಾನ್​ ಖಾನ್​!


ಸಲ್ಮಾನ್​ ಖಾನ್​ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್​ ಕೊಟ್ಟಿದ್ದಾರೆ. ಇದನ್ನು ಕೇಳಿದ ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ದಾರೆ. ‘ಭಜರಂಗಿ ಭಾಯಿಜಾನ್​’ ಸಿನಿಮಾಗೆ ಸೀಕ್ವೆಲ್​ ಮಾಡುವ ಬಗ್ಗೆ ಕೆಲವೇ ದಿನಗಳ ಹಿಂದೆ ಸಲ್ಮಾನ್​ ಖಾನ್​ ಘೋಷಣೆ ಮಾಡಿದ್ದರು. ‘ಆರ್​ಆರ್​​ಆರ್​’ (RRR) ಸಿನಿಮಾದ ಪ್ರಚಾರದ ಕಾರ್ಯದ ವೇಳೆ ಅವರು ಆ ಬಗ್ಗೆ ಹೇಳಿಕೊಂಡಿದ್ದರು. ಆ ಚಿತ್ರಕ್ಕೆ ಈಗ ಟೈಟಲ್​ ಫಿಕ್ಸ್​ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ​ ಅವರ ತಂದೆ, ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಈ ಶೀರ್ಷಿಕೆ ಇಟ್ಟಿದ್ದಾರೆ ಎಂದು ಸಲ್ಮಾನ್​ ಖಾನ್​ ತಿಳಿಸಿದ್ದಾರೆ. ‘ಪವನ ಪುತ್ರ ಭಾಯ್​ಜಾನ್​’ ಟೈಟಲ್​ ಫಿಕ್ಸ್​ ಆಗಿದ್ದು, ಚಿತ್ರೀಕರಣ ಆರಂಭವಾಗಬೇಕಿದೆ.

Published by:Vasudeva M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು