ಗೀತಾ ಶಿವರಾಜ್​ಕುಮಾರ್​ ಹುಟ್ಟುಹಬ್ಬ: ಹೆಂಡತಿಗೆ ಪ್ರೀತಿಯಿಂದ ಶಿವಣ್ಣ ಪಪ್ಪಿಕೊಟ್ಟಿದ್ದು ಹೇಗೆ?

news18
Updated:June 22, 2018, 5:32 PM IST
ಗೀತಾ ಶಿವರಾಜ್​ಕುಮಾರ್​ ಹುಟ್ಟುಹಬ್ಬ: ಹೆಂಡತಿಗೆ ಪ್ರೀತಿಯಿಂದ ಶಿವಣ್ಣ ಪಪ್ಪಿಕೊಟ್ಟಿದ್ದು ಹೇಗೆ?
news18
Updated: June 22, 2018, 5:32 PM IST
ಓಂ ಸಕಲೇಶಪುರ, ನ್ಯೂಸ್​ 18 ಕನ್ನಡ 

ಇವತ್ತು ದೊಡ್ಮನೆಯ ದೊಡ್ಡ ಸೊಸೆ, ಹ್ಯಾಟ್ರಿಕ್ ಹೀರೊ ಶಿವಣ್ಣ ಅವರ ಮುದ್ದಿನ ಹೆಂಡತಿ ಗೀತಾ ಶಿವರಾಜ್‍ಕುಮಾರ್ ಹುಟ್ಟಿದ ದಿನ. ಪತ್ನಿಯ ಹುಟ್ಟಿದ ದಿನ ಶಿವಣ್ಣ ಪ್ರೀತಿಯಿಂದ ವಿಶ್ ಮಾಡಿದರು. ಹೆಂಡತಿಗೆ ನಾನೇನು ಗಿಫ್ಟ್ ಕೊಡಲಿ ಅಂತ ಪರ್ಸ್ ತೆಗೆದು ತೋರಿಸಿದರು. ಹೆಂಡತಿಗೊಂದು ಹಾಡನ್ನು ಸಹ ಸಮರ್ಪಿಸಿದರು.

'ದ್ರೋಣ' ಚಿತ್ರತಂಡ ಹುಟ್ಟುಹಬ್ಬದ ದಿನ ಗೀತಾ ಶಿವರಾಜ್‍ಕುಮಾರ್ ಅವರಿಂದಲೇ ಚಿತ್ರಕ್ಕೆ ಕ್ಲ್ಯಾಪ್ ಮಾಡಿಸೋಕೆ ಪ್ಲ್ಯಾನ್ ಮಾಡಿತ್ತು. ಕ್ಲ್ಯಾಪ್ ಮಾಡಿದ ನಂತರ ಮಾಧ್ಯಮದ ಮುಂದೆ ಬಂದ ಶಿವಣ್ಣ ಮುದ್ದಿನ ಹೆಂಡತಿಗೆ ಯಾವ ಹಾಡು ಸಮರ್ಪಿಸುತ್ತೀರಾ ಅಂದರೆ 'ಆಕಾಶವೇ ಬೀಳಲಿ ಮೇಲೆ...' ಹಾಡು ಎಂದಿದ್ದು ವಿಶೇಷ.

ಇನ್ನು ವಿಶ್​ ಮಾಡಿ ಕೇಳಿದ್ದಕ್ಕೆ ತುಸು ನಾಚುತ್ತಲೇ ಶುಭಕೋರಿ 'ನಾನು ಗೀತಾನ ಗೀ ಅಂತಾನೆ ಕರೆಯೋದು' ಅಂದರು. ಉಡುಗೊರೆ ಏನು ಕೊಡುತ್ತಿದ್ದೀರಾ ಅಂತ ಕೇಳಿದಾಗ ಶಿವಣ್ಣ ತಮ್ಮ ಪರ್ಸನ್ನೇ ತೆಗೆದು ತೋರಿಸಿಬಿಟ್ಟು, ನೋಡಿ ನನ್ನ ಹತ್ತಿರ ಎಷ್ಟು ದುಡ್ಡಿದೆ ಅಂತ ನೀವೇ ನೋಡಿ. ಈ ದುಡ್ಡಲ್ಲಿ ಏನ್ ಗಿಫ್ಟ್ ಕೊಡಲಿ ಅಂದರು.

ಇವತ್ತು 'ದ್ರೋಣ' ಚಿತ್ರದ ಮುಹೂರ್ತದಲ್ಲಿ ಶಿವಣ್ಣ ಮತ್ತು ಗೀತಾ ಶಿವರಾಜ್‍ಕುಮಾರ್ ಕಾಣಿಸಿದ್ದು ಅವರ ಅಭಿಮಾನಿಗಳಿಗಂತೂ ಖುಷಿಕೊಟ್ಟಿತ್ತು.

 
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...