ಬಾಲಿವುಡ್​ಗೆ ರಿಮೇಕ್​ ಆಗಲಿದೆ ತೆಲುಗಿನ 'ಗೀತ ಗೋವಿಂದಂ'; ದೇವರಕೊಂಡ ಪಾತ್ರದಲ್ಲಿ 'ಧಡಕ್​' ಹೀರೋ?

ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಚಾರ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಹೀರೋ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

Rajesh Duggumane | news18
Updated:January 3, 2019, 3:59 PM IST
ಬಾಲಿವುಡ್​ಗೆ ರಿಮೇಕ್​ ಆಗಲಿದೆ ತೆಲುಗಿನ 'ಗೀತ ಗೋವಿಂದಂ'; ದೇವರಕೊಂಡ ಪಾತ್ರದಲ್ಲಿ 'ಧಡಕ್​' ಹೀರೋ?
ವಿಜಯ್​ ದೇವರಕೊಂಡ- ರಶ್ಮಿಕಾ ಮಂದಣ್ಣ
Rajesh Duggumane | news18
Updated: January 3, 2019, 3:59 PM IST
ಟಾಲಿವುಡ್​ನಲ್ಲಿ ಸಖತ್​ ಸೌಂಡ್​ ಮಾಡಿದ್ದ ಚಿತ್ರ ‘ಗೀತ ಗೋವಿಂದಂ’. ಈ ಸಿನಿಮಾ 70 ಕೋಟಿ ರೂ. ಗಳಿಕೆ ಮಾಡುವುದರ ಜೊತೆಗೆ ದಾಖಲೆಯ ಮೇಲೆ ದಾಖಲೆ ಬರೆದಿತ್ತು. ಈಗ ಈ ಚಿತ್ರ ಬಾಲಿವುಡ್​ಗೆ ರಿಮೇಕ್​ ಆಗುತ್ತಿದೆ. ಚಿತ್ರ ಹಿರೋ ಯಾರು ಎನ್ನುವ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿ ಬಂದಿವೆ.

‘ಅರ್ಜುನ್​ ರೆಡ್ಡಿ’ ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ವಿಜಯ್​ ದೇವರಕೊಂಡ ಅವರ ವೃತ್ತಿ ಜೀವನಕ್ಕೆ ‘ಗೀತ ಗೋವಿಂದಂ’ ಮೈಲೇಜ್​ ನೀಡಿತ್ತು. ಇನ್ನು, ಕನ್ನಡತಿ ರಶ್ಮಿಕಾ ಅವರಿಗಂತೂ ಈ ಚಿತ್ರ ತೆರೆಕಂಡ ನಂತರದಲ್ಲಿ ಸಾಲು ಸಾಲು ಆಫರ್​ಗಳು ಬರಲು ಆರಂಭವಾದವು. ಇದೇ ಕಾರಣಕ್ಕೆ ಚಿತ್ರವನ್ನು ಹಿಂದಿಗೆ ರಿಮೇಕ್​ ಮಾಡಲಾಗುತ್ತಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; 'ಕೆಜಿಎಫ್​' ಸ್ಟಾರ್​ ಯಶ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!

ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಚಾರ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಹೀರೋ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ‘ಧಡಕ್​’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಇಶಾನ್​ ಕಟ್ಟರ್​​ ಈ ಸಿನಿಮಾದ ನಾಯಕನಾಗಿ ನಟಿಸಲಿದ್ದಾರೆ ಎನ್ನಲಾಗಿದೆ.ಈಗಾಗಲೇ ‘ಗೀತ ಗೋವಿಂದಂ’ ಚಿತ್ರವನ್ನು ಇಶಾನ್​ ವೀಕ್ಷಿಸಿದ್ದಾರಂತೆ. ಹಾಗಾಗಿ ಈ ಚಿತ್ರದಲ್ಲಿ ಅವರು ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ನಿರ್ವಹಿಸಿದ್ದ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿಲ್ಲ.

ಇದನ್ನೂ ಓದಿ: ಚಂದನವನದ​ ನಟ, ನಿರ್ಮಾಪಕರ ಮನೆ ಮೇಲೆ ಏಕಕಾಲದಲ್ಲಿ ಐಟಿ ದಾಳಿ ಹಿಂದಿನ ರಹಸ್ಯವೇನು? 
Loading...

First published:January 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ