• Home
  • »
  • News
  • »
  • entertainment
  • »
  • Gautham Karthik: ಪ್ರೀತಿಯಲ್ಲಿ ಬಿದ್ದ ಮತ್ತೊಂದು ತಾರಾ ಜೋಡಿ, ಮದುವೆ ಊಟ ಯಾವಾಗ ಎಂದ ಫ್ಯಾನ್ಸ್!

Gautham Karthik: ಪ್ರೀತಿಯಲ್ಲಿ ಬಿದ್ದ ಮತ್ತೊಂದು ತಾರಾ ಜೋಡಿ, ಮದುವೆ ಊಟ ಯಾವಾಗ ಎಂದ ಫ್ಯಾನ್ಸ್!

Gautham Karthik-Manjima Mohan: ನಟ ಗೌತಮ್​ ಕಾರ್ತಿಕ್​ ನಟಿ ಮಂಜಿಮಾ ಮೋಹನ್ ಅವರಿಗಾಗಿ ಮುದ್ದಾದ ಪೋಸ್ಟ್ ಒಂದನ್ನು ಬರೆದಿದ್ದಾರೆ. ಈ ವೇಳೆ ನಟಿ ಜೊತೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.

  • Share this:

ಜನಪ್ರಿಯ ನಟ ಕಾರ್ತಿಕ್ ಅವರ ಪುತ್ರ ಗೌತಮ್ ಕಾರ್ತಿಕ್ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಅದು ಕೂಡ ತಮಿಳು ನಟಿ ಜೊತೆ. ಇಷ್ಟು ದಿನ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ.

ನಟ ಗೌತಮ್​ ಕಾರ್ತಿಕ್​ ನಟಿ ಮಂಜಿಮಾ ಮೋಹನ್ ಅವರಿಗಾಗಿ ಮುದ್ದಾದ ಪೋಸ್ಟ್ ಒಂದನ್ನು ಬರೆದಿದ್ದಾರೆ. ಈ ವೇಳೆ ನಟಿ ಜೊತೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ ಗೌತಮ್ ಕಾರ್ತಿಕ್ "ಸರಿಯಾದ ವ್ಯಕ್ತಿ ನಿಮ್ಮ ಜೀವನದಲ್ಲಿ ಬಂದಾಗ ಏನಾಗುತ್ತದೆ? ಹೆಚ್ಚಿನ ಜನರು ನೀವು ನಿಮ್ಮ ಕಣ್ಣುಗಳನ್ನು ಅವರ ಮೇಲೆ ನೆಟ್ಟ ಕ್ಷಣದಿಂದ ನೀವು ಪ್ರೀತಿಯಿಂದ ತುಂಬುತ್ತೀರಿ ಎಂದು ಹೇಳುತ್ತಾರೆ, ನಿಮ್ಮ ಹೊಟ್ಟೆಯು ಒಳಗೆ ಚಿಟ್ಟೆಗಳು ಹಾರುತ್ತಿರುವಂತೆ ಭಾಸವಾಗುತ್ತದೆ. ನಿಮ್ಮ ಹೃದಯವು ಸಂತೋಷಕ್ಕಾಗಿ ಹಾಡುತ್ತದೆ ಇತ್ಯಾದಿ... ಇತ್ಯಾದಿ..." ಎಂದು ಬರೆದಿದ್ದಾರೆ.

"ಮಂಜಿಮಾ ಮೋಹನ್, ನಮ್ಮ ಪ್ರಯಾಣ ಖಂಡಿತವಾಗಿಯೂ ವಿಭಿನ್ನವಾಗಿದೆ, ನಾವು ಯಾವಾಗಲೂ ಒಬ್ಬರಿಗೊಬ್ಬರು ಕುಚೇಷ್ಟೆ ಮಾಡುವ ಮೂಲಕ, ಯಾವಾಗಲೂ ಜಗಳವಾಡುವ ಮೂಲಕ. ಮತ್ತು ಅತ್ಯಂತ ಕ್ಷುಲ್ಲಕ ವಿಷಯಗಳ ಬಗ್ಗೆ ವಾದಿಸುವ ಮೂಲಕ ಪ್ರಾರಂಭಿಸಿದ್ದೇವೆ" ಅಂತ ಬರೆದಿದ್ದಾರೆ.

"ನೀವು ನಮ್ಮ ನಡುವೆ ಒಂದು ಬಂಧವನ್ನು, ಸುಂದರವಾದ ಬಂಧವನ್ನು ಸೃಷ್ಟಿಸುತ್ತಿದ್ದೀರಿ ಎಂದು ನನಗೆ ತಿಳಿದಿರಲಿಲ್ಲ. ನಾನು ಮೊದಲು ಈ ಬಂಧವನ್ನು 'ಸ್ನೇಹ' ಎಂದು ಹೆಸರಿಸಲು ನಿರ್ಧರಿಸಿದೆ. ಆದರೆ ಅದು ಅದಕ್ಕಿಂತ ಪ್ರಬಲವಾಗಿತ್ತು. ಸ್ನೇಹದಿಂದ ಪ್ರೀತಿಯಾಗಿದೆ" ಎಂದು ಗೌತಮ್​ ಕಾರ್ತಿಕ್​ ಬರೆದಿದ್ದಾರೆ.

ಇಷ್ಟೇ ಅಲ್ಲದೇ ನೀನೇ ನನಗೆ ಜೀವನದ ಸಂಗಾತಿ, ನೀನು ಇಲ್ಲದಿರುವ ಕ್ಷಣವನ್ನು ಊಹಿಸಿಕೊಳ್ಳಲಾರೆ ಎಂದು ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದಾರೆ.

ಇನ್ನು ಇವರ ಲವ್​ಸ್ಟೋರಿ ನೋಡಿದ ಅಭಿಮಾನಿಗಳು ಯಾವಾಗ ಮದುವೆ ಊಟ ಹಾಕಿಸುತ್ತೀರಾ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

Published by:ವಾಸುದೇವ್ ಎಂ
First published: