ಬಾಲಿವುಡ್ (Bollywood) ಬಾದ್ಷಾ ಶಾರುಖ್ ಖಾನ್ (Shah Rukh Khan) ಅವರ ಪತ್ನಿ ಗೌರಿ ಖಾನ್ (Gauri Khan) ಅವರು ಸೋಮವಾರದಂದು ತಮ್ಮ ಪತಿ, ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ 'ಮೈ ಲೈಫ್ ಇನ್ ಎ ಡಿಸೈನ್' (My Life In a Design) ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ದಂಪತಿಗಳಿಬ್ಬರು ತಮ್ಮ ಜೀವನ ಬಗ್ಗೆ ಮುಂಬೈನಲ್ಲಿ (Mumbai) ಶುರುವಾದ ತಮ್ಮ ಪ್ರಯಾಣದ ಬಗ್ಗೆ ಮನಪೂರ್ವಕವಾಗಿ ಮಾತನಾಡಿದರು. ಇದರೊಂದಿಗೆ ಮುಂಬೈನ ಪ್ರತಿಷ್ಠಿತ ಶಾರುಖ್ ಖಾನ್ ಅವರ ಬೃಹತ್ ಬಂಗಲೆಯ ಕೆಲವು ಅನ್ ಸೀನ್ ಪೋಟೋಗಳನ್ನು ಸಹ ಈ ಕಾರ್ಯಕ್ರಮದಲ್ಲಿ ರೀವಿಲ್ ಮಾಡಿದರು. ಗೌರಿ ಖಾನ್ ಅವರ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಶಾರುಖ್ ಅವರು ತಮ್ಮ ಹೆಂಡತಿಯ ಬಗ್ಗೆ, ಅವರ ಪ್ರತಿಭೆ ಬಗ್ಗೆ ಹಾಗೂ ಅವರ ಯಶಸ್ಸನ್ನು ಆಚರಿಸಿ ತುಂಬು ಮನಸ್ಸಿನಿಂದ ಈ ಕಾರ್ಯಕ್ರಮದಲ್ಲಿ ಹೊಗಳಿದ್ದಾರೆ.
ಗೌರಿ ಖಾನ್ ಅವರು ತಮ್ಮ ಪುಸ್ತಕದ ಬಗ್ಗೆ ಮಾತನಾಡುವಾಗ, "ತಮ್ಮ ಮಗ ಆರ್ಯನ್ ಖಾನ್ ಶಾರುಖ್‌ಗಿಂತ ಹೆಚ್ಚು ಕಾರ್ಯನಿರತರಾಗಿದ್ದಾರೆ" ಎಂದು ಇಂಟ್ರೆಸ್ಟಿಂಗ್ ಆಗಿ ಕಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾವೊಂದನ್ನು ಘೋಷಿಸಿದ ಆರ್ಯನ್ ಕೂಡ ಉದ್ಯಮಿಯಾಗಿ ಸಿನಿ ಲೈಫ್ ನಲ್ಲಿ ಸಕತ್ ಬ್ಯುಸಿ ಆಗಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಗೆಸ್ಟ್ ಗಳು ಗೌರಿ ಅವರನ್ನು ಪುಸ್ತಕದಲ್ಲಿರುವ ಫ್ಯಾಮಿಲಿ ಪೋಟೋ ಬಗ್ಗೆ ಕೇಳಿದಾಗ, ಆ ಪೋಟೋ ತೆಗೆಸಿಕೊಳ್ಳುವಾಗ ಆರ್ಯನ್ ಅವರ ಡೇಟ್ಸ್ ಗೆ ಕಾಯಬೇಕಿತ್ತು. ಏಕೆಂದ್ರೆ ಆರ್ಯನ್ ಅಷ್ಟೊಂದು ಬ್ಯುಸಿ ಪರ್ಸನ್ ಆಗಿದ್ದಾರೆ ಎಂದು ಗೌರಿ ಖಾನ್ ಹೇಳಿದ್ದಾರೆ.
ಎಸ್ ಆರ್ ಕೆ ಫ್ಯಾಮಿಲಿಯ ಬೆಸ್ಟ್ ಸ್ಟೈಲಿಶ್ ಲುಕ್ ಪೋಟೋ ರಿವೀಲ್
ಈ ಫ್ಯಾಮಿಲಿ ಪೋಟೊದಲ್ಲಿ ಎಸ್‌ಆರ್‌ಕೆ, ಗೌರಿ, ಆರ್ಯನ್, ಸುಹಾನಾ ಖಾನ್ ಮತ್ತು ಅಬ್‌ರಾಮ್ ಅವರು ಬೆಸ್ಟ್ ಸ್ಟೈಲಿಶ್ ಲುಕ್ ನಲ್ಲಿ ಪೋಟೋ ತೆಗೆಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರ ದತ್ತು ಪುತ್ರ ಅಬ್ರಾಮ್ ಈಗ ಸಕತ್ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ. ಅದಕ್ಕೆ ಅವರ ಹೊಸ ಪೋಟೋ ಶೂಟ್ ಮಾಡಿಸಿ ಎಂದರು ಸಮಾರಂಭದ ಹೋಸ್ಟ್.
ಸಮಾರಂಭದ ಹೋಸ್ಟ್ ನ ಈ ಮಾತಿಗೆ ಶಾರುಕ್ ಖಾನ್ ಅವರು ನಕ್ಕು ತಮಾಷೆ ಮಾಡುತ್ತಾ 'ಅಬ್ರಾಮ್ ಕೂಡ ವಯಸ್ಸಿನಲ್ಲಿ ದೊಡ್ಡವರಾಗುತ್ತಾ ಹೋಗುತ್ತಿದ್ದಾರೆ. ಅದಕ್ಕೆ ಅವರು ಈಗ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗೆ ಶಾರುಖ್ ಖಾನ್ ಅವರು ಗೆಸ್ಟ್ ಗಳೊಂದಿಗೆ ಸಂವಾದ ನಡೆಸುತ್ತಿರುವಾಗ, "ನಮ್ಮ ಔಟ್ ಲುಕ್ ಎಲ್ಲವನ್ನೂ ಮಾಡುತ್ತದೆ, ಅಬ್ರಾಮ್ ನನ್ನಂತೆ ಕಾಣುವಾಗ ಪ್ರತಿಭೆ ಯಾರಿಗೆ ಬೇಕು?" ಎಂದು ಹೇಳಿದರು.
ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಸುದ್ದಿಯಾಗಿದ್ದ ಶಾರುಖ್ ಖಾನ್ ಕುಟುಂಬ
ಆರ್ಯನ್ ಖಾನ್ ಅವರ ಡ್ರಗ್ ಪ್ರಕರಣದಲ್ಲಿ ತನಿಖಾಧಿಕಾರಿ ಸಮೀರ್ ವಾಂಖಡೆ ವಿರುದ್ಧ ಎಫ್‌ಐಆರ್ ದಾಖಲಾದ ನಂತರ ಖಾನ್ ಕುಟುಂಬ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. 2021ರ ಕಾರ್ಡೆಲಿಯಾ ಕ್ರೂಸ್ ಶಿಪ್ "ಡ್ರಗ್ ಬೇಸ್ಟ್" ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯೊಬ್ಬರು ಶಾರುಖ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುವ ಮೂಲಕ 25 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ವಿಶೇಷ ತನಿಖಾ ತಂಡದ (ಎಸ್‌ಇಟಿ) ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಸಾರಾ ಅಲಿ ಖಾನ್ – ಕಾರ್ತಿಕ್ ಆರ್ಯನ್ ಬ್ರೇಕಪ್: ಸತ್ಯ ಬಾಯಿಬಿಟ್ಟ ನವಾಬ ಸೈಫ್..!
ಕೆಲವು ಸುತ್ತಿನ ಮಾತುಕತೆಯ ನಂತರ 18 ಕೋಟಿ ರೂ.ಗೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದ್ದು, 50 ಲಕ್ಷ ರೂ.ಗಳನ್ನು ಟೋಕನ್ ಮೊತ್ತವಾಗಿ ತೆಗೆದುಕೊಳ್ಳಲಾಗಿದೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. 2021 ರಲ್ಲಿ, ಆರ್ಯನ್ ಅವರನ್ನು ಡ್ರಗ್ ಬಸ್ಟ್ ಪ್ರಕರಣದಲ್ಲಿ ಬಂಧಿಸಲಾಯಿತು ಮತ್ತು 26 ದಿನಗಳ ನಂತರ ಬಾಂಬೆ ಹೈಕೋರ್ಟ್‌ನಿಂದ ಜಾಮೀನಿನ ಮೇಲೆ ಬಿಡುಗಡೆಯಾಯಿತು. ಅಂತಿಮವಾಗಿ, ಈ ಬಗ್ಗೆ ತನಿಖೆ ನಡೆಸಿದ ಮತ್ತೊಂದು ಎನ್‌ಸಿಬಿ ತಂಡವು ಸಾಕಷ್ಟು ಪುರಾವೆಗಳನ್ನು ಉಲ್ಲೇಖಿಸಿ ಆರೋಪಪಟ್ಟಿಯಿಂದ ಆರ್ಯನ್ ಅವರ ಹೆಸರನ್ನು ಕೈಬಿಟ್ಟಿತು. ಇದಾದ ನಂತರ ವಾಂಖೆಡೆಯನ್ನು "ಅಸಮರ್ಪಕ ತನಿಖೆ" ಎಂದು ಆರೋಪಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ