ಶಾರುಖ್ ಖಾನ್ (Shah Rukh Khan) ಅವರ ಪತ್ನಿ ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ (Gouri Khan) ಅವರು ಇತ್ತೀಚಿನ ಫೋಟೋವನ್ನು (Photo) ಸ್ವಲ್ಪ ಹೆಚ್ಚೇ ಎಡಿಟ್ ಮಾಡಿದ್ದು ಈಗ ಸುದ್ದಿಯಾಗಿದೆ. ನೆಟ್ಟಿಗರು ಎರಡೂ ಫೋಟೋಗಳನ್ನು (Photos) ಕಂಪೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಗೌರಿ ಖಾನ್ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ದುಬೈ ಇವೆಂಟ್ನ (Dubai Event) ಫೋಟೋ ಶೇರ್ ಮಾಡಿದ್ದರು. ಇದೀಗ ಒರಿಜಿನಲ್ ಗೆಟ್ಟಿ ಇಮೇಜ್ ಜೊತೆ ನಟಿಯ ಇನ್ಸ್ಟಾಗ್ರಾಮ್ ಫೋಟೋವನ್ನು (Photos) ಕೊಲೇಜ್ ಮಾಡಿ ಇದನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಫೋಟೋದಲ್ಲಿ ಗೌರಿ ಖಾನ್ ಫೋಟೋ ಸ್ವಲ್ಪ ಹೆಚ್ಚು ಫೇರ್ ಕಾಣಿಸಿದ್ದಾರೆ.
ಎಡಿಟ್ ಮಾಡಿರುವ ಫೋಟೋದಲ್ಲಿ ಎಕ್ಸ್ಪೋಷರ್ ಹೆಚ್ಚಿದೆ. ಗೌರಿ ಖಾನ್ ಅವರ ಮುಖದ ಚರ್ಮವೂ ತುಂಬಾ ಸಾಫ್ಟ್ ಆಗಿ ಕಾಣಿಸಿದೆ. ಕಣ್ಣುಗಳು ಹೆಚ್ಚು ಗಾಢವಾಗಿ ದೊಡ್ಡದಾಗಿ ಕಾಣಿಸಿದೆ. ಬಾಯಿಯಲ್ಲಿಯೂ ಸ್ವಲ್ಪ ಬದಲಾವಣೆ ಕಂಡಿದೆ. ಒರಿಜಿನಲ್ ಫೋಟೋ ಹಾಗೂ ಎಡಿಟ್ ಮಾಡಿದ ಫೋಟೋ. ಬಾಲಿವುಡ್ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಫೋಟೋಗಳನ್ನೇಕೆ ಇಷ್ಟೊಂದು ಎಡಿಟ್ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಹೀಗಿದ್ದರೂ ಕೂಡಾ ಗೌರಿ ಖಾನ್ ಅವರನ್ನು ಬಹಳಷ್ಟು ಜನರು ಬೆಂಬಲಿಸಿದ್ದಾರೆ. ಕೆಲವರು ಗೌರಿ ಅವರ ಒರಿಜಿನಲ್ ಫೋಟೋ ಸುಂದರವಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ಇಂದಿನ ಕಾಲದಲ್ಲಿ ಎಲ್ಲರೂ ತಮ್ಮ ಫೋಟೋ ಎಡಿಟ್ ಮಾಡುತ್ತಾರೆ ಎಂದಿದ್ದಾರೆ.
ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ಕೂಡಾ ಫೋಟೋ ಎಡಿಟ್ ಮಾಡುತ್ತೇನೆ. ನನ್ನ ಇಡೀ ಮುಖ ಬದಲಾಗುವಷ್ಟು ಎಡಿಟ್ ಮಾಡುವುದಿಲ್ಲ. ಆದರೆ ಲೈಟಿಂಗ್ಸ್ ಸೇರಿಸುವುದನ್ನು ಮಾಡುತ್ತೇನೆ. ವಿಶೇಷವಾಗಿ ಇನ್ಸ್ಟಾಗ್ರಾಮ್ನಲ್ಲಿ ಮಾಡುತ್ತೇನೆ ಎಂದಿದ್ದಾರೆ ಒಬ್ಬರು. ಸೆಲೆಬ್ರಿಟಿಗಳಲ್ಲದೆ ಇರುವವರು ಇದನ್ನು ಮಾಡುತ್ತಾರೆ. ಅದಕ್ಕಾಗಿಯೇ ಬ್ಯೂಟಿ ಆ್ಯಪ್ಸ್ ಹಾಗೂ ಫಿಲ್ಟರ್ಗಳು ಇವೆ ಎಂದಿದ್ದಾರೆ.
ನಾವು ಮನೆಯಿಂದ ಹೊರಬಂದಾಗ 100 ಕ್ಯಾಮೆರಾಗಳು ನಮ್ಮನ್ನು ಕ್ಲಿಕ್ಕಿಸುತ್ತಿದ್ದರೆ ನಾವು ಕೂಡಾ ಹೀಗೆ ಮಾಡಬಹುದು. ಪ್ರತಿ ಸಲ ಸುಂದರವಾಗಿ ಕಾಣಿಸುವುದೆಂದರೆ ಅದು ಕೂಡಾ ಒಂದು ರೀತಿಯ ಒತ್ತಡ ಎಂದಿದ್ದಾರೆ ಮತ್ತೊಬ್ಬ ಬಳಕೆದಾರ.
ಹೋಟೆಲ್ ಉದ್ಘಾಟನೆಗೆ ತೆರಳಿದ್ದ ಗೌರಿ ಖಾನ್
ನಟಿ ಗೌರಿ ಖಾನ್ ಅವರು ಮಗಳು ಸುಹಾನಾ ಖಾನ್ ಹಾಗೂ ಅವರ ಗೆಳತಿ ಶನಾಯಾ ಕಪೂರ್ ಜೊತೆ ದುಬೈನ ಅಟ್ಲಾಂಟಿಸ್ ಹೋಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದರು. ಗೌರಿ ಅವರು ಇಂಟೀರಿಯರ್ ಡಿಸೈನರ್ ಹಾಗೂ ಬಾಲಿವುಡ್ನ ಟಾಪ್ ನಿರ್ಮಾಪಕಿಯೂ ಹೌದು.
ಇದನ್ನೂ ಒದಿ: Shah Rukh Khan: 34 ವರ್ಷ ಹಿಂದೆ ಪ್ರೇಯಸಿ ಗೌರಿಗೆ ಶಾರುಖ್ ಖಾನ್ ಕೊಟ್ಟ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನ್ ಗೊತ್ತಾ?
ಶಾರುಖ್ ಖಾನ್ ಹಾಗೂ ಗೌರಿ ಖಾನ್ 1991ರಲ್ಲಿ ವಿವಾಹಿತರಾದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಮಗ ಆರ್ಯನ್ ಖಾನ್, ಅಬ್ರಾಂ ಖಾನ್, ಮಗಳ ಸುಹಾನಾ. ಗೌರಿ ಖಾನ್ ಅವರ ಇತ್ತೀಚಿನ ಪ್ರೊಡಕ್ಷನ್ ಸಿನಿಮಾ ಡಾರ್ಲಿಂಗ್ಸ್. ಇದರಲ್ಲಿ ಆಲಿಯಾ ಭಟ್ ಹಾಗೂ ಶೆಫಾಲಿ ಶಾ ನಟಿಸಿದ್ದಾರೆ. ಗೌರಿ ಅವರು ಇತ್ತೀಚೆಗೆ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಮನೆಗೂ ಇಂಟೀರಿಯರ್ ಡಿಸೈನ್ ಮಾಡಿದ್ದರು.
ಬಾಲಿವುಡ್ನ ಸುಂದರ ಪ್ರೇಮಕಥೆಗಳಲ್ಲಿ ಟಾಪ್ನಲ್ಲಿ ನಿಲ್ಲುವುದು ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಪ್ರೀತಿ. ಕಾಲೇಜು ದಿನಗಳ ಅವರ ಪ್ರೀತಿ ಇಂದಿಗೂ ಗಟ್ಟಿಯಾಗಿ ನಿಂತಿದೆ. ನೀವು ನಿಮ್ಮ ಪತ್ನಿ ಗೌರಿ ಖಾನ್ಗೆ ಕೊಟ್ಟ ಮೊದಲ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಏನು ಎಂದು ನೆಟ್ಟಿಗರೊಬ್ಬರು ಶಾರುಖ್ ಖಾನ್ ಅವರನ್ನು ಪ್ರಶ್ನಿಸಿದ್ದಾರೆ. ಸರಿಯಾಗಿ 34 ವರ್ಷಗಳ ಹಿಂದೆ ಪ್ರೇಮಿಗಳ ದಿನದಂದು ನಾನು ಗೌರಿಗೆ ಒಂದು ಜೋಡಿ ಪ್ಲಾಸ್ಟಿಕ್ ಇಯರಿಂಗ್ಸ್ ಗಿಫ್ಟ್ ಮಾಡಿದ್ದೆ ಎಂದು ಉತ್ತರಿಸಿದ್ದಾರೆ ಶಾರುಖ್. ಈ ಉತ್ತರ ಕೇಳಿ ನೆಟ್ಟಿಗರು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ