Aniruddha: ಜೊತೆ ಜೊತೆಯಲಿ ಸೀರಿಯಲ್​ನಿಂದ ಮಾತ್ರವಲ್ಲ, ಕಿರುತೆರೆಯಿಂದಲೇ ಅನಿರುದ್ಧ್​ಗೆ ಗೇಟ್ ಪಾಸ್

ಜೊತೆ ಜೊತೆಯಲ್ಲಿ ಸೆಟ್​ನಲ್ಲಿ ಅನಿರುದ್ಧ್​ ಮಾಡ್ತಿದ್ದ ಕಿರಿಕಿರಿಯಿಂದ ಇಡೀ ತಂಡವೇ ಬೇಸತ್ತು ಹೋಗಿತ್ತು. ಹೀಗಾಗಿ ಅನಿರುದ್ಧ್​ ವಿರುದ್ಧ ದೂರಿನ ಮಳೆಯಾಗಿದೆ. ಈ ಕುರಿತು ಸಭೆ ಕೂಡ ನಡೆದಿದ್ದು, ಸಭೆಯ ನಿರ್ಧಾರದಂತೆ ಅನಿರುದ್ಧ್​​ರನ್ನು ಸೀರಿಯಲ್​ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆಯಂತೆ.

ನಟ ಅನಿರುದ್ಧ್​

ನಟ ಅನಿರುದ್ಧ್​

  • Share this:
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jote Joteyali) ಧಾರಾವಾಹಿ  ಸೆಟ್​ನಲ್ಲಿ (Serial) ನಡೆದ ಫೈಟಿಂಗ್​ ಕಥೆಗೆ ಇದೀಗ ಟ್ವಿಸ್ಟ್​ ಸಿಕ್ಕಿದೆ.  ನಟ ಅನಿರುದ್ಧ್​ಗೆ ಧಾರಾವಾಹಿಯಿಂದಲೇ ಗೇಟ್ ಪಾಸ್ ನೀಡಿದ್ರು. ನಟ ಅನಿರುದ್ಧ್​ ವಿರುದ್ಧ ದಾಖಲಾದ ದೂರಿನ ಹಿನ್ನೆಲೆ ಅನಿರುದ್ಧ್​ರನ್ನು (Aniruddha) ಕೇವಲ ಧಾರಾವಾಹಿಯಿಂದ  ಮಾತ್ರವಲ್ಲ, ಕಿರುತೆರೆಯಿಂದಲೇ ಅವರನ್ನು ಬ್ಯಾನ್ (Ban)​ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಕಿರುತೆರೆಯಿಂದ ಅನಿರುದ್ಧ್​ ಬ್ಯಾನ್ 

ಜೊತೆ ಜೊತೆಯಲ್ಲಿ ಸೆಟ್​ನಲ್ಲಿ ಅನಿರುದ್ಧ್​ ಮಾಡ್ತಿದ್ದ ಕಿರಿಕಿರಿಯಿಂದ ಇಡೀ ತಂಡವೇ ಬೇಸತ್ತು ಹೋಗಿತ್ತು. ಹೀಗಾಗಿ ಅನಿರುದ್ಧ್​ ವಿರುದ್ಧ ದೂರಿನ ಮಳೆಯಾಗಿದೆ. ಈ ಕುರಿತು ಸಭೆ ಕೂಡ ನಡೆದಿದ್ದು, ಸಭೆಯ ನಿರ್ಧಾರದಂತೆ ಅನಿರುದ್ಧ್​​ರನ್ನು ಸೀರಿಯಲ್​ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆಯಂತೆ. ಆದ್ರೆ ಈ ಕುರಿತು ಯಾವುದೇ  ಅಧಿಕೃತ ಮಾಹಿತಿ ಹೊರಬಂದಿಲ್ಲ.

ಅನಿರುದ್ಧ್‌ಗೆ ಮರುಜನ್ಮ ನೀಡಿದ್ದ ಜೊತೆ ಜೊತೆಯಲಿ
ಜೊತೆ ಜೊತೆಯಲಿ ಧಾರಾವಾಹಿ ಬಹಳ ಕಾಲ ಟಿಆರ್‌ಪಿಯಲ್ಲಿ ನಂಬರ್ ಒನ್‌ ಸ್ಥಾನದಲ್ಲೇ ಇತ್ತು. ಅದಾದ ಬಳಿಕವೂ ಇದರ ಟಿಆರ್‌ಪಿ ಚೆನ್ನಾಗಿಯೇ ಇತ್ತು. ಇದರೊಂದಿಗೆ ಈ ಧಾರಾವಾಹಿ ನಟ ಅನಿರುದ್ದ್ ಅವರಿಗೂ ಮರು ಜನ್ಮ ನೀಡಿತ್ತು. ಅನಿರುದ್ಧ ಪ್ರತಿಭಾವಂತ ನಟನಾಗಿದ್ದರೂ, ಖ್ಯಾತ ನಟ ವಿಷ್ಣುವರ್ಧನ್, ನಟಿ ಭಾರತಿ ಅವರ ಅಳಿಯನಾಗಿದ್ದರೂ ಕನ್ನಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಾ ಸಿನಿಮಾಗಳೇನೂ ಅವರಿಗೆ ಸಿಗಲಿಲ್ಲ. ಮೊದಲ ಸಿನಿಮಾ ಚಿತ್ರ ಮಾತ್ರ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಆಮೇಲೆ ಬಂದಿದ್ದೆಲ್ಲವೂ ಪ್ಲಾಪ್ ಸಿನಿಮಾಗಳೇ. ಇನ್ನೇನು ಅನಿರುದ್ಧ್ ಕನ್ನಡಿಗರ ಮನಸ್ಸಿಂದ ದೂರವಾದ್ರು ಎನ್ನುವಷ್ಟರಲ್ಲಿ ಅವರಿಗೆ ಸಿಕ್ಕಿದ್ದೇ ಜೊತೆ ಜೊತೆಯಲಿ ಧಾರಾವಾಹಿ.


ಧಾರಾವಾಹಿಯಲ್ಲಿ ಕಿರಿಕ್ ಮಾಡಿಕೊಂಡಿದ್ದ ಅನಿರುದ್ಧ್

ನಟ ಅನಿರುದ್ಧ್ ವಿರುದ್ಧ ಇಡೀ ಸೀರಿಯಲ್​ ಟೀಂ ಆರೋಪ ಮಾಡುತ್ತಿದೆ ಎನ್ನಲಾಗಿದೆ. ಯಾಕೆಂದ್ರೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಫೇಮಸ್ ಆಗುತ್ತಿದ್ದಂತೆ ನಟ ಅನಿರುದ್ಧ್ ತಮ್ಮ ವರಸೆಯನ್ನೇ ಬದಲಾಯಿಸಿದ್ರು ಎನ್ನಲಾಗಿದೆ. ಶೂಟಿಂಗ್ ಸೆಟ್‌ನಲ್ಲಿ ಕಿರಿಕಿರಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಕಥೆಯನ್ನೇ ತಿದ್ದುತ್ತಿದ್ದರಾ ಅನಿರುದ್ದ್?

ಹೌದು, ಹೀಗೊಂದು ಗಂಭೀರ ಆರೋಪ ನಟ ಅನಿರುದ್ಧ್ ಮೇಲೆ ಕೇಳಿ ಬಂದಿದೆ. ಶೂಟಿಂಗ್‌ ಸೆಟ್‌ನಲ್ಲಿ ಅನಿರುದ್ಧ್ ಕಿರಿಕಿರಿ ಮಾಡುತ್ತಿದ್ದುದ್ದು ಒಂದೇ ಅಲ್ಲದೇ ತಮ್ಮ ಪಾತ್ರದ ಕಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎನ್ನಲಾಗಿದೆ. ತಮಗೆ ಬೇಕಾದಂತೆ ಕಥೆ, ಸಂಭಾಷಣೆ ಬದಲಾಯಿಸುತ್ತಿದ್ದರಂತೆ ಅಂತ ಧಾರಾವಾಹಿ ತಂಡದವರೇ ಆರೋಪಿಸುತ್ತಿದ್ದಾರೆ. ಹೀಗೆ ಒಂದು ವರ್ಷದಿಂದ ಇಡೀ ತಂಡಕ್ಕೆ ಕಾಟ ಕೊಡುತ್ತಿದ್ದರಂತೆ.

ಅನಿರುದ್ಧ್​ ಬದಲು ಯಾರಾಗ್ತಾರೆ ಆರ್ಯವರ್ಧನ್​?
ನಟ ಅನಿರುದ್ಧ್ ಅವರು ಜೊತೆಜೊತೆಯಲಿ ಸೀರಿಯಲ್​ನಿಂದ ಹೊರ ಹೋದ ಬಳಿಕ ಯಾರು ಸೀರಿಯಲ್​ನ ಮುಂದಿನ ಹೀರೋ ಅನ್ನೋ ಪ್ರಶ್ನೆ ಹುಟ್ಟಿದೆ. ಆರೂರ್​ ಜಗದೀಶ್​ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿಕೊಂಡು ಅನಿರುದ್ಧ್​ಗೆ ಗೇಟ್​ ಪಾಸ್​ ಕೊಟ್ಟಿದ್ದಾರಾ? ಅಥವಾ ಅನಿರುದ್ಧ್​ ಕಿರಿಕಿರಿಗೆ ಬೇಸತ್ತು ಬ್ಯಾನ್​ ಮಾಡಿದ್ದಾರೋ ಗೊತ್ತಿಲ್ಲ ಆದ್ರೆ. ಯಾರು ಅನಿರುದ್ಧ್​ ಪಾತ್ರಕ್ಕೆ ಸೂಕ್ತ ಅನ್ನೋ ಚರ್ಚೆ ಮಾತ್ರ ಇದೀಗ ಶುರುವಾಗಿದೆ.


ಆರ್ಯವರ್ಧನ್​ ಪಾತ್ರವೇ ಖಡಕ್​ ಆಗಿತ್ತು. ಹೀರೋ ಆಗಿ ಬಂದು ತನ್ನ ವಿಲನ್​ ಫೇಸ್ ತೋರಿಸಿದ್ರು, ಜನರಿಗೆ ಆರ್ಯವರ್ಧನ್​ ಅಚ್ಚುಮೆಚ್ಚಾಗಿದ್ರು. ಆರ್ಯನ ಪಾತ್ರಕ್ಕೆ ಅನುರುದ್ಧ್​ ಕೂಡ ಬೆಸ್ಟ್​ ಆಯ್ಕೆಯಾಗಿತ್ತು. ಇವರನ್ನು ಬಿಟ್ಟು ಬೇರೆ ಯಾರು ಈ ಪಾತ್ರಕ್ಕೆ ಸೂಕ್ತರು ಅನ್ನೋ ವಿಚಾರ ಚರ್ಚೆಯಾಗುತ್ತಿದ್ದು, ನಟ ವಿಜಯ ರಾಘವೇಂದ್ರ, ಜೆ.ಕೆ ಅಲಿಯಾಸ್​ ಜೈ ಕಾರ್ತಿಕ್​, ದಿಲೀಪ್ ರಾಜ್, ಹರೀಶ್ ರಾಜ್ ಅವರ ಹೆಸರು ಕೂಡ ಇದೀಗ ಕೇಳಿ ಬರ್ತಿದೆ.

Published by:Pavana HS
First published: