Zee 5 ಓಟಿಟಿ ಪಾಲಾದ `ಗರುಡ ಗಮನ ವೃಷಭ ವಾಹನ’: ನೆಟ್​​ಫ್ಲಿಕ್ಸ್​​ನಲ್ಲಿ ಗಣೇಶ್​ ಸಿನಿಮಾ ಸಖತ್​ ಸ್ಟ್ರೀಮಿಂಗ್​!

'ಭಜರಂಗಿ 2', 'ಪುಕ್ಸಟ್ಟೆ ಲೈಫ್' ನಂತರದಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಗರುಡಗಮನ ವೃಷಭ ವಾಹನ' ಸಿನಿಮಾವನ್ನು ಓಟಿಟಿಯಲ್ಲಿ ಪ್ರೇಕ್ಷಕರು ನೋಡಬಹುದು. ಬಹಳ ಸರಳವಾಗಿ ಮೂಡಿಬಂದರೂ ಈ ಚಿತ್ರದ ಕಂಟೆಂಟ್‌ ವಿಭಿನ್ನವಾಗಿ ಮೂಡಿ ಬಂದಿತ್ತು.

ಗರುಡ ಗಮನ ವೃಷಭ ವಾಹನ, ಸಖತ್​ ಪೋಸ್ಟರ್​

ಗರುಡ ಗಮನ ವೃಷಭ ವಾಹನ, ಸಖತ್​ ಪೋಸ್ಟರ್​

  • Share this:
ಇತ್ತೀಚೆಗೆ ಓಟಿಟಿ(OTT) ಬೇಡಿಕೆ ಹೆಚ್ಚಿದೆ. ಸಿನಿಮಾ ರಿಲೀಸ್​ ಆದ ಕೆಲವೇ ದಿನಗಳಲ್ಲಿ ಓಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಬಂದುಬಿಡುತ್ತೆ. ಇದು ಕನ್ನಡ(Kannada) ಸಿನಿಮಾಗಳಿಗೂ ಅನ್ವಯವಾಗುತ್ತೆ. ಡಿಸೆಂಬರ್​ 3ರಂದು ತೆರೆಕಂಡಿದ್ದ ಮದಗಜ(Madhagaja) ಸಿನಿಮಾ 25 ದಿನ ಪೂರೈಸಿದ ನಂತರ ಓಟಿಟಿಗೆ ಬಂದಿತ್ತು. 'ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್‌ನ 'ಭಜರಂಗಿ 2'(Bhajarangi 2) ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ರವಿಚಂದ್ರನ್​ ಅಭಿನಯದ 'ಕನ್ನಡಿಗ'(Kannadiga) ಕೂಡ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ರಾಜ್​ ಬಿ ಶೆಟ್ಟಿ(Raj B Shetty), ರಿಷಬ್​ ಶೆಟ್ಟಿ(Rishab Shetty) ನಟಿಸಿರುವ ಗರುಡ ಗಮನ ವೃಷಭ ವಾಹನ(Garuda Gamana Vrishabha Vahana)  ಸಿನಿಮಾ ಕೂಡ ಜೀ 5(Zee 5) ಪಾಲಾಗಿದೆ. 'ಭಜರಂಗಿ 2', 'ಪುಕ್ಸಟ್ಟೆ ಲೈಫ್' ನಂತರದಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಗರುಡಗಮನ ವೃಷಭ ವಾಹನ' ಸಿನಿಮಾವನ್ನು ಓಟಿಟಿಯಲ್ಲಿ ಪ್ರೇಕ್ಷಕರು ನೋಡಬಹುದು. ಬಹಳ ಸರಳವಾಗಿ ಮೂಡಿಬಂದರೂ ಈ ಚಿತ್ರದ ಕಂಟೆಂಟ್‌ ವಿಭಿನ್ನವಾಗಿ ಮೂಡಿ ಬಂದಿತ್ತು. ಈ ಚಿತ್ರದ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೌಡಿಸಂ ಸಿನಿಮಾವನ್ನೂ ಹೀಗೂ ಮಾಡಬಹುದು ಎಂದು ರಾಜ್​ ಬಿ ಶೆಟ್ಟಿ ಸ್ಯಾಂಡಲ್​ವುಡ್(Sandalwood)​ಗೆ ತೋರಿಸಿಕೊಟ್ಟಿದ್ದರು. ಈ ಸಿನಿಮಾವನ್ನು ನೆಟ್​​ಫ್ಲಿಕ್ಸ್​ ಅವರು ಖರೀದಿ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಈಗ ಜೀ 5 ಪಾಲಾಗಿದೆ. 

ಹರಿ-ಶಿವನ ಜುಗಲ್​ಬಂದಿಗೆ ಫಿದಾ ಆಗಿದ್ದ ಕನ್ನಡಿಗರು!

2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ‘ಗರುಡ ಗಮನ ವೃಷಭ ವಾಹನ’ ವಾಹನ ಚಿತ್ರ ಕೂಡ ಪ್ರಮುಖವಾಗಿದೆ. ರಾಜ್​ ಬಿ. ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್​ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್​ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಬೇರೆಯದ್ದೇ ಫೀಲ್​ ಕೊಟ್ಟಿತ್ತು. ಈ ಹಿಂದೆ ನೋಡಿರದ ರೀತಿಯಲ್ಲಿ ಈ ಸಿನಿಮಾ ಮಜಾ ಕೊಟ್ಟಿತ್ತು. ಒಳ್ಳೆ ಛಾಯಾಗ್ರಹಣ, ಅದ್ಭುತ ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ ಎಲ್ಲವೂ ಸಖತ್​ ಕಿಕ್​ ಕೊಟ್ಟಿತ್ತು.

ಇದನ್ನು ಓದಿ: Krishna-Milana Nagraj ದಂಪತಿಗೆ ರೋಮಿಯೋ ಕಾಟ: ಹೆಂಡ್ತಿಗೆ ಕಿಸ್​ ಮಾಡೋಕೂ ಬಿಡ್ತಿಲ್ವಂತೆ!

ಶಿವನ ಆರ್ಭಟಕ್ಕೆ ಶೇಕ್​ ಆಗಿದ್ದ ಸ್ಯಾಂಡಲ್​ವುಡ್​!

ಹೌದು, ರಾಜ್​ ಬಿ ಶೆಟ್ಟಿ ಅವರನ್ನು ಗರುಡ ಗಮನ ವೃಷಭ ವಾಹನ ಸಿನಿಮಾ ಬಿಡುಗಡೆಯಾಗುವವರೆಗೂ ಅವರನ್ನು ಕಾಮಿಡಿ ಹೀರೋ ಎಂದುಕೊಂಡಿದ್ದರು. ‘ಒಂದು ಮೊಟ್ಟೆಯ ಕಥೆ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ಒಂದು ಮೊಟ್ಟೆಯ ಕಥೆ' ಮೂಲಕ ನಕ್ಕು ನಗಿಸಿದ್ದ ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಶಿವನ ಅವತಾರ ತಾಳಿ ಕ್ರೌರ್ಯ ಮೆರೆದಿದ್ದರು. ಈ ಸಿನಿಮಾದಿಂದ ಇವರ ಇಮೇಜ್​ ಬದಲಾಗಿದೆ. ಎಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲೆ ಎಂದು ರಾಜ್​​ ಬಿ ಶೆಟ್ಟಿ ತೋರಿಸಿದ್ದಾರೆ. ಸದ್ಯ ಈ ಸಿನಿಮಾ ಕೆಲವೇ ದಿನಗಳಲ್ಲಿ ಜೀ 5 ಓಟಿಟಿಯಲ್ಲಿ ಪ್ರಸಾರವಾಗಲಿದೆ.

ಇದನ್ನು ಓದಿ : ಸೀರೆ ತೊಟ್ಟು ಪೋಸ್​ ಕೊಟ್ಟ ಕೊಡಗಿನ ಕುವರಿ: ಏನೂ ವೈನಾಗ್ ಕಾಣಸ್ತಾಳೆ ರನ್ನನ್ನೋ ಎಂದ ಫ್ಯಾನ್ಸ್​!

ನೆಟ್​ಫ್ಲಿಕ್ಸ್​ನಲ್ಲಿ ಗಣೇಶ್​ ಚಿತ್ರ ಸಖತ್​ ಸ್ಟ್ರೀಮಿಂಗ್​!

ಇನ್ನೂ ಗೋಲ್ಡನ್​ ಸ್ಟಾರ್​​ ಗಣೇಶ್​ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್​ನಲ್ಲಿ ಬಂದಿದ್ದ ಸಖತ್​ ಸಿನಿಮಾ ಕೂಡ ಭಾರಿ ಸೌಂಡ್​ ಮಾಡಿತ್ತು. ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಗಣೇಶ್​ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಚಿತ್ರತಂಡ ಸಿನಿಮಾ ಸಕ್ಸಸ್​ ಮೀಟ್​ ಕೂಡ ಮಾಡಿದ್ದಾರೆ. ಈ ಸಿನಿಮಾ , ಓಟಿಟಿ ಪ್ಲಾಟ್​ಫಾರ್ಮ್​ಗಳ ದೈತ್ಯ ಎಂದು ಕರೆಸಿಕೊಳ್ಳುವ ನೆಟ್​ಫ್ಲಿಕ್ಸ್​​ ಪಾಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಖತ್​ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಲಭ್ಯವಾಗಲಿದೆ.
Published by:Vasudeva M
First published: