ಹೊಸಬರ ಬೆನ್ನಿಗೆ ನಿಂತ ಗರುಡ ಗಮನ ವೃಷಭ ವಾಹನ `ಶಿವ’: ಗಿಲ್ಕಿ ಚಿತ್ರತಂಡಕ್ಕೆ ಸಾಥ್​​!

Raj B Shetty : ಈಗ ಅಂಥದ್ದೇ ಒಂದು ತಂಡ ‘ಗಿಲ್ಕಿ’ (Gilki) ಎಂಬ ಹೆಸರಿನಲ್ಲಿ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದೆ. ಇವರ ಬೆನ್ನಿಗೆ ‘ಶಿವ’(Shiva) ಇದ್ದಾರೆ. ಯಾವ ಶಿವ? ಅಂತ ಕೇಳಬೇಡಿ. ಅದೇ ರೀ ಗರುಮ ಗಮನ ವೃಷಭ ವಾಹನ ಶಿವ. ಹೌದು ಹೊಸಬರ ತಂಡಕ್ಕೆ ರಾಜ್​ ಬಿ ಶೆಟ್ಟಿ(Raj B Shetty) ಬೆನ್ನಿಗೆ ನಿಂತಿದ್ದಾರೆ.

ಗಿಲ್ಕಿ ಚಿತ್ರತಂಡದೊಂದಿಗೆ ರಾಜ್​ ಬಿ ಶೆಟ್ಟಿ

ಗಿಲ್ಕಿ ಚಿತ್ರತಂಡದೊಂದಿಗೆ ರಾಜ್​ ಬಿ ಶೆಟ್ಟಿ

  • Share this:
ಸ್ಯಾಂಡಲ್​ವುಡ್​(Sandalwood)ನಲ್ಲಿ ಹೊಸಬರ ಚಿತ್ರಗಳಿಗೇನು ಕಡಿಮೆ ಇಲ್ಲ. ಪ್ರತಿ ವಾರ ಹೊಸಬರ ಒಂದಾದರೂ ಚಿತ್ರ ತೆರೆ ಕಾಣುತ್ತೆ. ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್(Power Star Puneeth Rajkumar) ಇಂಥ ಹೊಸಬರ ಬೆನ್ನಿಗೆ ನಿಂತಿದ್ದರು. ಹೊಸಬರ ಚಿತ್ರದಲ್ಲಿ ಗೀತೆಗಳನ್ನು ಹಾಡು(Song) ಬೆನ್ನು ತಟ್ಟಿತ್ತಿದ್ದರು. ಆದರೆ ಹೊಸಬರ ಸಿನಿಮಾಗಳು ತೆರೆಕಂಡು ಸಕ್ಸಸ್​ ರೇಟ್​(Success Rate) ಕಡಿಮೆ ಇದೆ. ಇಂಥವರ ಬೆನ್ನಿಗೆ ನಾಯಕ ನಟರು ನಿಂತಾಗ ಅವರ ಸಿನಿಮಾಗೆ ಒಳ್ಳೆ ಪ್ರಚಾರ ಸಿಗುತ್ತೆ. ಅಂತಹ ಸಿನಿಮಾಗಳು ಕೂಡ ಪ್ರೇಕ್ಷಕರ ಗಮನ ಕೂಡ ಸೆಳೆಯುತ್ತೆ. ಈಗ ಅಂಥದ್ದೇ ಒಂದು ತಂಡ ‘ಗಿಲ್ಕಿ’ (Gilki) ಎಂಬ ಹೆಸರಿನಲ್ಲಿ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದೆ. ಇವರ ಬೆನ್ನಿಗೆ ‘ಶಿವ’(Shiva) ಇದ್ದಾರೆ. ಯಾವ ಶಿವ? ಅಂತ ಕೇಳಬೇಡಿ. ಅದೇ ರೀ ಗರುಮ ಗಮನ ವೃಷಭ ವಾಹನ ಶಿವ. ಹೌದು ಹೊಸಬರ ತಂಡಕ್ಕೆ ರಾಜ್​ ಬಿ ಶೆಟ್ಟಿ(Raj B Shetty) ಬೆನ್ನಿಗೆ ನಿಂತಿದ್ದಾರೆ. ಸಿನಿಮಾ ಕಥೆ ಗಟ್ಟಿ ಇದ್ದರೆ  ಪ್ರೇಕ್ಷಕರು ಸಿನಿಮಾ ನೋಡುತ್ತಾರೆ ಅನ್ನುವುದಕ್ಕೆ ಗರುಡ ಗಮನ ವೃಷಭ ವಾಹನ(Garuda Gamana Vrusbha Vahana)ದಂತಹ ಸಿನಿಮಾ ಒಂದೊಳ್ಳೆ ಉದಾಹರಣೆ. ಇತ್ತೀಚೆಗೆ ತೆರೆಕಂಡಿರುವ ಈ ಸಿನಿಮಾ ನೋಡಿ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ 'ಗಿಲ್ಕಿ' ತಂಡ ಶಿವನ ಅವತಾರವೆತ್ತಿದ ರಾಜ್‌ ಬಿ ಶೆಟ್ಟಿಯಿಂದ ಹಾಡೊಂದನ್ನು ಬಿಡುಗಡೆ ಮಾಡಿಸಿದೆ. 

ನಿಶ್ಕಲ್ಮಶ ಪ್ರೇಮಕಥೆಯ ಗಿಲ್ಕಿ ಸಿನಿಮಾ!

'ಗಿಲ್ಕಿ' ಸಿನಿಮಾದ ನಿರ್ದೇಶಕ YK ನಿಶ್ಕಲ್ಮಶ ಪ್ರೇಮಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ಸಮಾಜದಿಂದ ದೂರ ಉಳಿದಿರುವ ಮೂವರು ವಿಶೇಷ ಚೇತನ ಜೀವಗಳು ತಮ್ಮದೇ ಆದ ಅದ್ಭುತ ಪ್ರಪಂಚ ಕಟ್ಟಿಕೊಳ್ಳುವ ಅದ್ಭುತ ಪರಿಕಲ್ಪನೆಯೇ ಈ 'ಗಿಲ್ಕಿ' ಸಿನಿಮಾದ ಕಥೆ. ಈ ಸಿನಿಮಾ ಪ್ರೇಕ್ಷಕರ ಮನಸ್ಸಿಗೆ ನಾಟುತ್ತದೆ ಅನ್ನುವ ಭರವಸೆಯಲ್ಲಿ ಇಡಿ ಚಿತ್ರತಂಡವಿದೆ. ಇದೊಂದು ಕಂಟೆಂಟ್ ಸಿನಿಮಾ ಆಗಿರುವುದರಿಂದ ಗೆದ್ದೇ ಗೆಲ್ಲುತ್ತೇವೆ ಅನ್ನುವ ನಂಬಿಕೆಯಲ್ಲಿ ಹೊಸಬರ ತಂಡವಿದೆ. ಹೀಗಾಗಿ ಇವರ ಬೆನ್ನಿಗೆ ರಾಜ್​ ಬಿ ಶೆಟ್ಟಿ ನಿಂತಿದ್ದಾರೆ. ಸಿನಿಮಾ ಹಾಡೊಂದನ್ನು ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಫೋಟೋ ವಿಚಾರಕ್ಕೆ ಪಬ್​ನಲ್ಲಿ `ಕಿರಿಕ್​’: ಬಿಯರ್​ ಬಾಟಲ್​ನಿಂದ ಬಿಗ್ ಬಾಸ್ ಸ್ಪರ್ಧಿ ಮೇಲೆ ಹಲ್ಲೆ

ತೀರ ಸೇರೋ.. ಹಾಡು ಬಿಡುಗಡೆಗೊಳಿಸಿದ ‘ಶಿವ’

ಗಿಲ್ಕಿ ಚಿತ್ರತಂಡ ಕೆಲವು ದಿನಗಳ ಹಿಂದೆ ಆ ದೇವರೇ ಎನ್ನುವ ಹಾಡನ್ನು ಬಿಡುಗಡೆ ಮಾಡಿತ್ತು. ಆ ಹಾಡು ಸಿನಿಪ್ರಿಯರ ಹೃದಯವನ್ನು ಗೆದ್ದಿತ್ತು. ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡನ್ನು 'ಗರುಡ ಗಮನ ವೃಷಭ ವಾಹನ' ಸಿನಿಮಾದ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ತೀರ ಸೇರೋ ಅನ್ನುವ ಗಿಲ್ಕಿ ಸಿನಿಮಾದ ಟೈಟಲ್ ಸಾಂಗ್ ಅನ್ನು ಬಿಡುಗಡೆ ಮಾಡಿ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡು ಕೂಡ ಇದೀಗ ಸಖತ್​ ಇಷ್ಟವಾಗುತ್ತಿದೆ. ವಾಸುಕಿ ವೈಭವ್​ ಕಂಠ ನೀಡಿದ್ದಾರೆ.

ಇದನ್ನು ಓದಿ : ಇಂದಿನಿಂದ ರಾಜ್ಯಾದ್ಯಂತ `ಮದಗಜ‘ನ ಅಬ್ಬರ: 800 ಚಿತ್ರಮಂದಿರಗಳಲ್ಲಿ ಶ್ರೀ ಮುರುಳಿ ಸಿನಿಮಾ ರಿಲೀಸ್!

ಹೊದಬರ ಬೆನ್ನಿಗೆ ನಿಂತ ರಾಜ್​ ಬಿ ಶೆಟ್ಟಿ!

ರಾಜ್​ ಬಿ ಶೆಟ್ಟಿ ಕೂಡ ಯಾರ ಸಪೋರ್ಟ್​ ಇಲ್ಲದೇ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು. ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಎಂಟ್ರಿಯಾಗಿದ್ದರು. ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರು. ಎರಡನ್ನು ನಿಭಾಯಿಸಿಕೊಂಡು ಬಂದಿದ್ದರು. ಇದೀಗ ಇವರಂತೆ ಯಾರ ಸಪೋರ್ಟ್ ಇಲ್ಲದೇ ಸಿನಿಮಾ ಮಾಡಿರುವ ತಂಡಗಳಿಗೆ ಬೆಂಬಲ ತೋರುತ್ತಿದ್ದಾರೆ. ಎಲ್ಲ ನಟ, ನಟಿಯರಿಗೂ ಮಾದರಿಯಾಗುತ್ತಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದಿಂದ ತಾನೊಬ್ಬ ಅದ್ಭುತ ನಟ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರ ಜೊತೆ ಹೊಸಬರ ಬೆನ್ನಿಗೆ ನಿಂತಿರುವುದು ಖುಷಿಯ ಸಂಗತಿ.
Published by:Vasudeva M
First published: