Gargi Movie Review: ಹೇಗಿದೆ ಸಾಯಿ ಪಲ್ಲವಿ ‘ಗಾರ್ಗಿ‘ ಸಿನಿಮಾ, ವರ್ಕೌಟ್​ ಆಯ್ತಾ ಕೋರ್ಟ್​ ಡ್ರಾಮಾ?

ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ (Sai Pallavi) ಅಭಿನಯದ ಬಹುನಿರೀಕ್ಷಿತ ‘ಗಾರ್ಗಿ‘ (Gargi Movie) ಸಿನಿಮಾ ಇಂದು ಬಿಡುಗಡೆ ಆಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಸಿನಿಮಾದ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಸಾಯಿ ಪಲ್ಲವಿ ಅವರಿಗೆ ಮತ್ತೊಂದು ಹಿಟ್​ ಸಿನಿಮಾ (Movie) ಸಿಕ್ಕಂತಾಗಿದೆ.

ಗಾರ್ಗಿ ಸಿನಿಮಾ

ಗಾರ್ಗಿ ಸಿನಿಮಾ

  • Share this:
ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ (Sai Pallavi) ಅಭಿನಯದ ಬಹುನಿರೀಕ್ಷಿತ ‘ಗಾರ್ಗಿ‘ (Gargi Movie) ಸಿನಿಮಾ ಇಂದು ಬಿಡುಗಡೆ ಆಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಸಿನಿಮಾದ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಸಾಯಿ ಪಲ್ಲವಿ ಅವರಿಗೆ ಮತ್ತೊಂದು ಹಿಟ್​ ಸಿನಿಮಾ (Movie) ಸಿಕ್ಕಂತಾಗಿದೆ. ಚಿತ್ರವು ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗಿದ್ದು, ಎಲ್ಲಾ 3 ಭಾಷೆಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅದರಲ್ಲಿಯೂ ಬಿಡುಡೆಯಾದ 3 ಭಾಷೆಗಳಲ್ಲಿಯೂ ಸ್ವತಃ ನಟಿ ಸಾಯಿ ಪಲ್ಲವಿ ಅವರೇ ಡಬ್​ ಮಾಡಿದ್ದು, ಸಿನಿ ರಸಿಕರಿಗೆ ಮತ್ತಷ್ಟು ಖುಷಿ ನೀಡಿದೆ. ಅದರಲ್ಲಿಯೂ ಮೊದಲ ಬಾರಿಗೆ ಅವರು ಕನ್ನಡದಲ್ಲಿ ಡಬ್ ಮಾಡಿದ್ದು, ಕನ್ನಡ ಸಿನಿ ಪ್ರೇಮಿಗಳು ಸಾಯಿ ಪಲ್ಲವಿ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಮೊದಲು ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ (Virat Parvam) ಸಿನಿಮಾ ಹೀನಾಯ ಸೋಲು ಕಂಡಿತು. ಆದರೆ ಈ ಸಿನಿಮಾ ಮೂಲಕ ಸಾಯಿ ಪಲ್ಲವಿಯವರು ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಹೇಗಿದೆ ಸಾಯಿ ಪಲ್ಲವಿಯವರ ‘ಗಾರ್ಗಿ‘ ಅವತಾರ?:

ಗೌತಮ್ ರಾಮಚಂದ್ರನ್ ಅವರು ಎರಡನೇ ಚಿತ್ರ ಗಾರ್ಗಿ ವಿಭಿನ್ನ ಹಿನ್ನೆಲೆಯಲ್ಲಿ ಮೂಡಿಬಂದಿದೆ. ತಮ್ಮ ಮೊದಲ ಸಿನಿಮಾ ‘ರಿಚಿ‘ ಫೇಮ್​ ನಲ್ಲಿಯೇ ನಿರ್ದೇಶಕರು ಈ ಸಿನಿಮಾವನ್ನು ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಇನ್ನು, ಸಿನಿಮಾದ ಕುರಿತು ಬಂದಲ್ಲಿ, ಸಾಯಿ ಪಲ್ಲವಿ ಮಧ್ಯಮ ವರ್ಗದ ಮನೆಯ ಹಿರಿಯ ಮಗಳು. ಅವಳು ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಅಲ್ಲದೇ ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತಿಕೊಂಡಿರುತ್ತಾಳೆ. ಇದರ ನಡುವೆ ಚಿತ್ರದ ಆರಂಭದಲ್ಲಿ ಎಲ್ಲವೂ ಸಲಿಸಾಗಿ ಸಾಗುತ್ತಿದ್ದ ಗಾರ್ಗಿಯ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಗಾರ್ಗಿ (ಸಾಯಿ ಪಲ್ಲವಿ)  ತಂದೆಯನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ.

ಏಕೆ ಅವಳ ತಂದೆಯನ್ನು ಬಂಧಿಸಲಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ತಿರುವಾಗಿದೆ. ಆದರೆ ಬಳಿಕ ತಂದೆಯ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲದ ಗಾರ್ಗಿ ಈ ಪ್ರಕರಣವನ್ನು ಕೋರ್ಟ್​ಗೆ ತರುತ್ತಾಳೆ. ಇದಾದ ಬಳಿಕ ತಂದೆಯನ್ನು ಗಾರ್ಗಿ ಹೇಗೆ ಮನೆಗೆ ವಾಪಸ್ಸು ಕರೆತರುತ್ತಾಳೆ ಎನ್ನುವುದೇ ಸಿನಿಮಾದ ಒನ್ ಲೈನ್ ಸ್ಟೋರಿ. ಇನ್ನು, ಈ ಚಿತ್ರಕ್ಕೆ ವಿಮರ್ಶಕರು 5 ಸ್ಟಾರ್​ ರೇಟಿಂಗ್​ ನೀಡಿದ್ದಾರೆ.

ಇದನ್ನೂ ಓದಿ: Puneeth Rajkumar: ಗಂಧದಗುಡಿ ರಿಲೀಸ್‌ಗೆ ಮುಹೂರ್ತ ಫಿಕ್ಸ್! ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾಡಿದ್ರು ಡೇಟ್ ಅನೌನ್ಸ್

ಗಾರ್ಗಿ ಟ್ವಿಟರ್​ ವಿವರ್ಶೆ:

ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಚಿತ್ರ ಗೆದ್ದಂತೆ ಎನ್ನಲಾಗುತ್ತಿದೆ. ಇನ್ನು, ಪ್ರಸಿದ್ಧ ಚಿತ್ರ ವಿಮರ್ಶಕರಾದ ಕೌಶಿಕ್ ಎಲ್​ ಎಂ, ಚಿತ್ರವನ್ನು ಮೆಚ್ಚಿಕೊಂಡಿದ್ದು, ಸಾಯಿ ಪಲ್ಲವಿ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದು ಬರೆದುಕೊಂಡಿದ್ದಾರೆ. ಇದಲ್ಲದೇ ಮತ್ತೊಬ್ಬ ಖ್ಯಾತ ವಿಮರ್ಶಕರಾದ ರಮೇಶ್​ ಬಾಲಾ ಅವರು ಕೂಡ ಈ ಚಿತ್ರಕ್ಕೆ 5 ಸ್ಟಾರ್​ ರೇಟಿಂಗ್ ನೀಡುವ ಮೂಲಕ ಸಾಯಿ ಪಲ್ಲವಿಯ ನಟನೆಗೆ ಭೇಷ್​ ಎಂದಿದ್ದಾರೆ.





ಇನ್ನು, ಟ್ವಿಟರ್​ ನಲ್ಲಿ ಪ್ರೇಕಕರು ಪ್ರತಿಕ್ರಿಯಿಸಿದ್ದು, ತಂದೆ - ಮಗಳ ಕೋರ್ಟ್​ ಡ್ರಾಮಾ ಅದ್ಭುತವಾಗಿ ಮೂಡಿಬಂದಿದೆ. ಕೋರ್ಟ್ ಸನ್ನಿವೇಶ ಉತ್ತಮವಾಗಿದ್ದು, ಸಾಯಿ ಪಲ್ಲವಿಯವರ ಜೀವನದಲ್ಲಿ ಇದೊಂದು ಉತ್ತಮ ಸಿನಿಮಾ ಎಂದು ಹೇಳಿಕೊಂಡಿದ್ದಾರೆ.
Published by:shrikrishna bhat
First published: