Gangubai Kathiawadi Review: ಕಾಮಾಟಿಪುರದ ಕ್ವೀನ್ ಕಥೆಯೇ ರಣ ರೋಚಕ.. `ಗಂಗೂಬಾಯಿ’ ಪಾತ್ರದಲ್ಲಿ ಜೀವಿಸಿದ ಆಲಿಯಾ!

'ಗಂಗೂಬಾಯಿ' ಪಾತ್ರಕ್ಕೆ ಆಲಿಯಾ ಭಟ್‌ರನ್ನು ಆಯ್ಕೆ ಮಾಡಿದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಲಿಯಾ ಎಲ್ಲರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ.

ನಟಿ ಆಲಿಯಾ ಭಟ್​

ನಟಿ ಆಲಿಯಾ ಭಟ್​

  • Share this:
ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಅಭಿನಯದ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಗಂಗೂಬಾಯಿ ಕಾಥಿಯಾವಾಡಿ (Gangubai Kathiawadi) ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಅಭಿಮಾನಿಗಳು ಮತ್ತು ವಿಮರ್ಶಕರಿಂದ  ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಆಲಿಯಾ ನಟ(Alia Performance)ನೆ ಬಗ್ಗೆ ಮಾತನಾಡುತ್ತಿದ್ದಾರೆ. ‘ಗಂಗೂಬಾಯಿ’ ಪಾತ್ರದಲ್ಲಿ ಆಲಿಯಾ ಭಟ್​ ಜೀವಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ(Sanjay Leela Bansali)ಯ ಹೊಸ ಸಿನಿಮಾ 'ಗಂಗೂಬಾಯಿ ಕಾಥಿಯಾವಾಡಿ' ಸತ್ಯ ಕತೆಗೆ ಕಾಲ್ಪನಿಕತೆ ಬೆರೆಸಿ ಸಂಜಯ್‌ರ ಅದ್ಧೂರಿ ಮೇಕಿಂಗ್​ನಲ್ಲಿ ಮಾಡಿರುವ ಸಿನಿಮಾ. ಸಿನಿಮಾ ರಿಲೀಸ್​​ಗೂ ಮುನ್ನ ಇದ್ದ ಕುತೂಹಲ ಸಿನಿಮಾ ಬಿಡುಗಡೆಯಾದ ಮೇಲೆ ಹೇಗಿದೆ? ಇನ್ನೂ ಗಂಗೂಬಾಯಿಯನ್ನು ತೆರೆ ಮೇಲೆ ಕಂಡ ಪ್ರೇಕ್ಷಕ ಮಹಾಪ್ರಭುಗಳು ಏನು ಹೇಳುತ್ತಾರೆ? ಸಂಜಯ್​ ಲೀಲಾ ಬನ್ಸಾಲಿ ಮತ್ತೊಂದು ಹಿಟ್​ ಕೊಟ್ರಾ?ಇದಕ್ಕೆಲ್ಲ ಉತ್ತರ ಮುಂದೆ ಇದೆ ನೋಡಿ..

'ಗಂಗೂಬಾಯಿ' ಪಾತ್ರಕ್ಕೆ ಆಲಿಯಾ ಭಟ್‌ರನ್ನು ಆಯ್ಕೆ ಮಾಡಿದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಲಿಯಾ ಎಲ್ಲರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ. ಸಿನಿಮಾದ ಆರಂಭದಲ್ಲಿ ಅಮಾಯಕ ಯುವತಿಯಾಗಿ, ನಂತರ ಗತ್ತು ಗಮ್ಮತ್ತಿನ, ಅಹಂ, ಆತ್ಮಾಭಿಮಾನದ ಗಂಗೂಬಾಯಿಯಾಗಿ ಅವರ ನಟನೆ ಅದ್ಭುತವಾಗಿದೆ. ಆಲಿಯಾ ಯಾವುದೇ ಪಾತ್ರವನ್ನು ಕೊಟ್ಟರು ನುಂಗಿ ನೀರು ಕುಡಿಯುತ್ತಾರೆ.

‘ಗಂಗೂಬಾಯಿ’ ಪಾತ್ರದಲ್ಲಿ ಜೀವಿಸಿದ ಆಲಿಯಾ ಭಟ್!

ಜೀವನ ಎಲ್ಲಿಗೋ ಕರೆದುಕೊಂಡು ಬಂದಾಗ ಅಲ್ಲಿಯೂ ತನ್ನ ಜೀವನಕ್ಕೆ ಅರ್ಥ ಹುಡುಕಿಕೊಳ್ಳುವ ಸಾಮಾನ್ಯ ವ್ಯಕ್ತಿಯ ಕತೆ ಇದಾಗಿದೆ. ಸಿನಿಮಾದಲ್ಲಿ ಆಲಿಯಾ ಭಟ್‌ರ ಅಭಿನಯ ಅದ್ಭುತವಾಗಿದೆ. ಸಿನಿಮಾದ ಸಂಭಾಷಣೆ ಸಿನಿಮಾದ ಹೈಲೆಟ್ಸ್​. ಇನ್ನೂ ಸಿನಿಮಾದಲ್ಲಿ ಕೊರತೆಯಂದರೆ ಸ್ಕ್ರೀನ್​ ಪ್ಲೇ. ಕಾಥಿಯಾವಾಡಿಯಲ್ಲಿ ಯುವತಿ ಗಂಗಾ (ಆಲಿಯಾ ಭಟ್) ಬಾಲಿವುಡ್​ನಲ್ಲಿ ಸ್ಟಾರ್​​ ಹೀರೋಯಿನ್ ಆಗುವ ಕನಸು ಕಾಣುವ ಯವತಿ. ತನ್ನ ಕನಸು ಈಡೇರಿಸಿಕೊಳ್ಳಲು ತನ್ನ ಬಾಯ್‌ಫ್ರೆಂಡ್ ಜೊತೆ ಮುಂಬೈಗೆ ಪರಾರಿಯಾಗುತ್ತಾಳೆ. ಆದರೆ, ಮೋಸಗಾರ ಬಾಯ್​ಫ್ರೆಂಡ್​ ಆಕೆಯನ್ನು ವೇಶ್ಯಾಗೃಹಕ್ಕೆ ಮಾರಿ ಪರಾರಿಯಾಗುತ್ತಾನೆ.

ಇದನ್ನೂ ಓದಿ: ಗರ್ಲ್​ಫ್ರೆಂಡ್ ಜೊತೆ ಕೇರಳದ ಊಟ ಎಂಜಾಯ್ ಮಾಡಿದ ಹೃತಿಕ್

ಮಾಫಿಯಾ ಕ್ವೀನ್​ ಆಗಿ ಬದಲಾಗ್ತಾಳೆ ಗಂಗಾ!

ಇಲ್ಲಿಂದ ಕಥೆ ಕೊಂಚ ವೇಗ ಪಡೆದುಕೊಳ್ಳುತ್ತೆ. ನಾಯಕಿ ಆಗಬೇಕೆಂದು ಕನಸು ಕಂಡಿದ್ದ ಯುವತಿ ವೇಶ್ಯೆಯಾಗುತ್ತಾಳೆ. ಮುಂದೆ ಕಾಮಾಟಿಪುರದ ಗಂಗೂಬಾಯಿ ಆಗುತ್ತಾಳೆ. ಒಂದು ಕಾರಣಕ್ಕೆ ಮುಂಬೈನ ಮಾಫಿಯಾ ಡಾನ್ ರಹೀಮ್ ಲಾಲಾ (ಅಜಯ್ ದೇವಗನ್) ಅನ್ನು ಭೇಟಿಯಾಗುತ್ತಾಳೆ. ಆಕೆಯ ಧೈರ್ಯಕ್ಕೆ ಮೆಚ್ಚಿ ಆಕೆಯನ್ನು ಮಾಫಿಯಾ ಕ್ವೀನ್ ಎಂದು ಘೋಷಿಸುತ್ತಾನೆ ರಹೀಮ್ ಲಾಲಾ.ಗಂಗೂಬಾಯಿ, ತನ್ನ ರಾಜಕೀಯ, ಅಂಡರ್‌ವರ್ಲ್ಡ್ ಸಂಪರ್ಕಗಳು ಹಾಗೂ ತನ್ನ ಬುದ್ಧಿಶಕ್ತಿಯಿಂದ ಬಹುಬೇಗ ಎತ್ತರಕ್ಕೆ ಬೆಳೆಯುತ್ತಾಳೆ. ಕಾಮಾಟಿಪುರದ ವೇಶ್ಯೆಯರು ಅವರ ಕುಟುಂಬದವರ ಪಾಲಿಗೆ ದೇವರಾಗುತ್ತಾಳೆ. ಇದು ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ಜೀವಾಳ.

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಹೇಗಿದೆ?

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕದ ಒಂದು ಭಾಗವನ್ನು ಎತ್ತಿಕೊಂಡು ಈ ಸಿನಿಮಾ ಮಾಡಿದ್ದಾರೆ. ನಿಜ ಘಟನೆಗೆ ಸಾಕಷ್ಟು ಕಾಲ್ಪನಿಕ ದೃಶ್ಯಗಳನ್ನು ಸೇರಿಸಿದ್ದಾರೆ. ಸಿನಿಮಾ ನಟಿ ಕನಸು ಕಂಡ ಹೆಣ್ಣು ಹೇಗೆ ವೇಶ್ಯೆಯಾಗುತ್ತಾಳೆ? ಬಳಿಕ ಕಾಮಾಟಿಪುರಕ್ಕೆ ರಾಣಿಯಾಗುತ್ತಾಳೆ ಎಂಬುದನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾಕ್ಕೆ ತಮ್ಮ ಶೈಲಿಯಾದ ಕಾವ್ಯಾತ್ಮಕತೆ, ವೈಭವ, ಸುಂದರತೆ, ಅದ್ಭುತ ಸಂಗೀತವನ್ನು ಸೇರಿಸಿದ್ದಾರೆ.

ಇದನ್ನೂ ಓದಿ: ಕಾಲಿವುಡ್​ನಲ್ಲಿ ಇದೆಂಥಾ ಸ್ಟಾರ್​​ ವಾರ್?​ ಅಜಿತ್​ ಅಭಿಮಾನಿಗಳ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ

ಸಿನಿಮಾದ ಚಿತ್ರಕಥೆಯೆ ‘ಗಂಗೂಬಾಯಿ’ಗೆ ಮೈನಸ್​!

ಹೌದು, ಸಿನಿಮಾ ಚಿತ್ರಕಥೆಯಲ್ಲಿ ಸಂಜಯ್​ ಲೀಲಾ ಬನ್ಸಾಲಿ ಎಡವಿದ್ದಾರೆ.ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಚಿತ್ರಕತೆಯನ್ನು ಹೆಣೆಯುವಲ್ಲಿ ಸಂಜಯ್ ಲೀಲಾ ಬನ್ಸಾಲಿ ಸೋತಿದ್ದಾರೆ. ಕೆಲ ದೃಶ್ಯಗಳು ಸಿನಿಮಾದ ಕತೆಗೆ ಏನೊಂದೂ ಸಂಬಂಧವಿಲ್ಲದ ಪ್ರತ್ಯೇಕ ದೃಶ್ಯಗಳಾಗಿ ಅಷ್ಟೆ ನಿಂತುಬಿಟ್ಟಿವೆ.
Published by:Vasudeva M
First published: