Gangubai Kathiawadi: ಜರ್ಮನ್​ನಲ್ಲೂ `ಗಂಗೂಬಾಯಿ’ ಅಬ್ಬರ.. ಆಲಿಯಾ ನಟನೆ ಕಂಡು ಎದ್ದು ನಿಂತು ಚಪ್ಪಾಳೆ ಹೊಡೆದ ವಿದೇಶಿಗರು!

ಬಾಲಿವುಡ್ ನಟಿ ಆಲಿಯಾ ಭಟ್​ ಅಭಿನಯಕ್ಕೆ ಮನಸೋತು ಹೊರ ದೇಶದ ಸಿನಿಮಾ ಪ್ರೇಕ್ಷಕರು ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್​

ಆಲಿಯಾ ಭಟ್​

  • Share this:
ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಅಭಿನಯದ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಗಂಗೂಬಾಯಿ ಕಾಥಿಯಾವಾಡಿ (Gangubai Kathiawadi) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಅಭಿಮಾನಿಗಳು ಮತ್ತು ವಿಮರ್ಶಕರಿಂದ  ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಆಲಿಯಾ ನಟ(Alia Performance)ನೆ ಬಗ್ಗೆ ಮಾತನಾಡುತ್ತಿದ್ದಾರೆ. ‘ಗಂಗೂಬಾಯಿ’ ಪಾತ್ರದಲ್ಲಿ ಆಲಿಯಾ ಭಟ್​ ಜೀವಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ(Sanjay Leela Bansali)ಯ ಹೊಸ ಸಿನಿಮಾ 'ಗಂಗೂಬಾಯಿ ಕಾಥಿಯಾವಾಡಿ' ಸತ್ಯ ಕತೆಗೆ ಕಾಲ್ಪನಿಕತೆ ಬೆರೆಸಿ ಸಂಜಯ್‌ರ ಅದ್ಧೂರಿ ಮೇಕಿಂಗ್​ನಲ್ಲಿ ಮಾಡಿರುವ ಸಿನಿಮಾ. 'ಗಂಗೂಬಾಯಿ' ಪಾತ್ರಕ್ಕೆ ಆಲಿಯಾ ಭಟ್‌ರನ್ನು ಆಯ್ಕೆ ಮಾಡಿದಾಗ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಲಿಯಾ ಎಲ್ಲರ ಬಾಯಿ ಮುಚ್ಚಿಸುವಂತೆ ನಟಿಸಿದ್ದಾರೆ.

ವಿದೇಶದಲ್ಲೂ ಆಲಿಯಾ ಭಟ್​ ಅಬ್ಬರ!

ಆಲಿಯಾ ಭಟ್​ ಸಿನಿಮಾದ ಆರಂಭದಲ್ಲಿ ಅಮಾಯಕ ಯುವತಿಯಾಗಿ, ನಂತರ ಗತ್ತು ಗಮ್ಮತ್ತಿನ, ಅಹಂ, ಆತ್ಮಾಭಿಮಾನದ ಗಂಗೂಬಾಯಿಯಾಗಿ ಅವರ ನಟನೆ ಅದ್ಭುತವಾಗಿದೆ. ಆಲಿಯಾ ಯಾವುದೇ ಪಾತ್ರವನ್ನು ಕೊಟ್ಟರು ನುಂಗಿ ನೀರು ಕುಡಿಯುತ್ತಾರೆ. ಕೇವಲ ಭಾರತದಲ್ಲಷ್ಟೇ ಅಲ್ಲದೇ ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ ವಿದೇಶದಲ್ಲೂ ಸಖತ್​ ಸೌಂಡ್​ ಮಾಡುತ್ತಿದೆ. ಜರ್ಮನ್​ ದೇಶದಲ್ಲಿ ಆಲಿಯಾ ಭಟ್ ನಟನೆ ಕಂಡು ಫುಲ್​ ಫಿದಾ ಆಗಿದ್ದಾರೆ.

ಎದ್ದು ನಿಂತು ಚಪ್ಪಾಳೆ ಹೊಡೆದ ವಿದೇಶಿಗರು!

ಬಾಲಿವುಡ್ ನಟಿ ಆಲಿಯಾ ಭಟ್​ ಅಭಿನಯಕ್ಕೆ ಮನಸೋತು ಹೊರ ದೇಶದ ಸಿನಿಮಾ ಪ್ರೇಕ್ಷಕರು ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜರ್ಮನ್​ ದೇಶದ ಬೆರ್ಲಿನ್​ ನಗರದ ಚಿತ್ರಮಂದಿರದಲ್ಲಿ ಯಾವ ಸ್ಟಾರ್​ ನಟನಿಗೂ ಸಿಗದ ಮೆಚ್ಚುಗೆ ಆಲಿಯಾ ಭಟ್​ಗೆ ವ್ಯಕ್ತವಾಗಿದೆ.

ಇದನ್ನೂ ಓದಿ : ಕಾಮಾಟಿಪುರದ ಕ್ವೀನ್ ಕಥೆಯೇ ರಣ ರೋಚಕ.. `ಗಂಗೂಬಾಯಿ’ ಪಾತ್ರದಲ್ಲಿ ಜೀವಿಸಿದ ಆಲಿಯಾ!

‘ಗಂಗೂಬಾಯಿ’ ಪಾತ್ರದಲ್ಲಿ ಜೀವಿಸಿದ ಆಲಿಯಾ ಭಟ್!

ಜೀವನ ಎಲ್ಲಿಗೋ ಕರೆದುಕೊಂಡು ಬಂದಾಗ ಅಲ್ಲಿಯೂ ತನ್ನ ಜೀವನಕ್ಕೆ ಅರ್ಥ ಹುಡುಕಿಕೊಳ್ಳುವ ಸಾಮಾನ್ಯ ವ್ಯಕ್ತಿಯ ಕತೆ ಇದಾಗಿದೆ. ಸಿನಿಮಾದಲ್ಲಿ ಆಲಿಯಾ ಭಟ್‌ರ ಅಭಿನಯ ಅದ್ಭುತವಾಗಿದೆ. ಸಿನಿಮಾದ ಸಂಭಾಷಣೆ ಸಿನಿಮಾದ ಹೈಲೆಟ್ಸ್​. ಇನ್ನೂ ಸಿನಿಮಾದಲ್ಲಿ ಕೊರತೆಯಂದರೆ ಸ್ಕ್ರೀನ್​ ಪ್ಲೇ. ಕಾಥಿಯಾವಾಡಿಯಲ್ಲಿ ಯುವತಿ ಗಂಗಾ (ಆಲಿಯಾ ಭಟ್) ಬಾಲಿವುಡ್​ನಲ್ಲಿ ಸ್ಟಾರ್​​ ಹೀರೋಯಿನ್ ಆಗುವ ಕನಸು ಕಾಣುವ ಯವತಿ. ತನ್ನ ಕನಸು ಈಡೇರಿಸಿಕೊಳ್ಳಲು ತನ್ನ ಬಾಯ್‌ಫ್ರೆಂಡ್ ಜೊತೆ ಮುಂಬೈಗೆ ಪರಾರಿಯಾಗುತ್ತಾಳೆ. ಆದರೆ, ಮೋಸಗಾರ ಬಾಯ್​ಫ್ರೆಂಡ್​ ಆಕೆಯನ್ನು ವೇಶ್ಯಾಗೃಹಕ್ಕೆ ಮಾರಿ ಪರಾರಿಯಾಗುತ್ತಾನೆ.

ಇದನ್ನೂ ಓದಿ: ಮೊನ್ನೆ ಹಂಗ್​ ಅಂದ್ರು, ಈಗ ನೋಡಿದ್ರೆ ಇನ್ನೊಂಥರ.. `ಕಿರಿಕ್​ ಕ್ವೀನ್​’ನ ಅರ್ಥ ಮಾಡಿಕೊಳ್ಳೋದು ಕಷ್ಟ!

ಮಾಫಿಯಾ ಕ್ವೀನ್​ ಆಗಿ ಬದಲಾಗ್ತಾಳೆ ಗಂಗಾ!

ಇಲ್ಲಿಂದ ಕಥೆ ಕೊಂಚ ವೇಗ ಪಡೆದುಕೊಳ್ಳುತ್ತೆ. ನಾಯಕಿ ಆಗಬೇಕೆಂದು ಕನಸು ಕಂಡಿದ್ದ ಯುವತಿ ವೇಶ್ಯೆಯಾಗುತ್ತಾಳೆ. ಮುಂದೆ ಕಾಮಾಟಿಪುರದ ಗಂಗೂಬಾಯಿ ಆಗುತ್ತಾಳೆ. ಒಂದು ಕಾರಣಕ್ಕೆ ಮುಂಬೈನ ಮಾಫಿಯಾ ಡಾನ್ ರಹೀಮ್ ಲಾಲಾ (ಅಜಯ್ ದೇವಗನ್) ಅನ್ನು ಭೇಟಿಯಾಗುತ್ತಾಳೆ. ಆಕೆಯ ಧೈರ್ಯಕ್ಕೆ ಮೆಚ್ಚಿ ಆಕೆಯನ್ನು ಮಾಫಿಯಾ ಕ್ವೀನ್ ಎಂದು ಘೋಷಿಸುತ್ತಾನೆ ರಹೀಮ್ ಲಾಲಾ.ಗಂಗೂಬಾಯಿ, ತನ್ನ ರಾಜಕೀಯ, ಅಂಡರ್‌ವರ್ಲ್ಡ್ ಸಂಪರ್ಕಗಳು ಹಾಗೂ ತನ್ನ ಬುದ್ಧಿಶಕ್ತಿಯಿಂದ ಬಹುಬೇಗ ಎತ್ತರಕ್ಕೆ ಬೆಳೆಯುತ್ತಾಳೆ. ಕಾಮಾಟಿಪುರದ ವೇಶ್ಯೆಯರು ಅವರ ಕುಟುಂಬದವರ ಪಾಲಿಗೆ ದೇವರಾಗುತ್ತಾಳೆ. ಇದು ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ಜೀವಾಳ.
Published by:Vasudeva M
First published: