ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ʼಗಂಗೂಬಾಯಿ ಕಾಠಿಯಾವಾಡಿʼ (Gangubai Kathiawadi) ಚಿತ್ರ ಬಿಡುಗಡೆಗೂ ಮೊದಲೇ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಇತ್ತೀಚಿಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆಲ್ಲುವ ಮೂಲಕ ಭರ್ಜರಿ ಪ್ರದರ್ಶನ ಕಾಣುತ್ತಿರುವ ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರ ಬಾಕ್ಸ್ ಆಫೀಸ್ನಲ್ಲೂ (Box Office) ಸದ್ದು ಮಾಡಿದೆ. ಬಾಲಿವುಡ್ನಲ್ಲಿ (Bollywood) ಧೂಳೆಬ್ಬಿಸುತ್ತಿರುವ ಈ ಚಿತ್ರ 102.68 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ನಟಿ ಆಲಿಯಾ ಭಟ್ (Alia Bhatt) ಅಭಿನಯದ ಈ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದು, ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಪರಿಣಾಮ ಗುರುವಾರದ ವೇಳೆಗೆ 102.68 ಕೋಟಿ ರೂ.ಗಳಿಸಿದೆ. ಈ ಬಗ್ಗೆ ಖುದ್ದು ನಟಿ ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಧನ್ಯವಾದ ಅರ್ಪಿಸಿದ ಆಲಿಯಾ ಭಟ್
ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಬರ್ಗರ್ ಹಾಗೂ ಫ್ರೆಂಚ್ ಫ್ರೈ ಹಿಡಿದಿರುವ ಫೋಟೋಗಳನ್ನು ಶೇರ್ ಮಾಡಿರುವ ನಟಿ ಆಲಿಯಾ ಭಟ್, “ಹ್ಯಾಪಿ ಸೆಂಚುರಿ ಟು ಗಂಗೂಬಾಯಿ ಅಂಡ್ ಹ್ಯಾಪಿ ವೆಜ್ ಬರ್ಗರ್ + ಫ್ರೈ ಟು ಆಲಿಯಾ” ಎಂದು ಪೋಸ್ಟ್ ಹಾಕುವ ಜೊತೆಗೆ ತಮ್ಮ ಚಿತ್ರದ ಮೇಲೆ ಪ್ರೀತಿ ತೋರಿದ್ದಕ್ಕಾಗಿ ಧನ್ಯವಾದಗಳನ್ನ ತಿಳಿಸಿದ್ದಾರೆ.
ಆಲಿಯಾ ಅಭಿನಯಕ್ಕೆ ಮೆಚ್ಚುಗೆ
ನಟಿ ಆಲಿಯಾ ಭಟ್ ಅವರ ಪೋಸ್ಟ್ಗೆ ನಟ ರಣವೀರ್ ಸಿಂಗ್ ಸೇರಿದಂತೆ ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಓರ್ವ ಅಭಿಮಾನಿ ʼಫುಡಿ ಆಲಿಯಾʼ ಎಂದಿದ್ದರೆ, ಮತ್ತೋರ್ವ ಅಭಿಮಾನಿ ಗಂಗೂಬಾಯಿ ಕಠಿಯಾವಾಡಿ ಚಿತ್ರದ “ಗಂಗೂ ಚಾಂದ್ ಥಿ, ಔರ್ ಚಾಂದ್ ಹೀ ರಹೇಗೀ” ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Explained: 'ಕಾಮಾಟಿಪುರ'ದ ಇತಿಹಾಸ ಗೊತ್ತಾ? ಇಲ್ಲಿದೆ 'ಕೆಂಪು ದೀಪ'ದ ಕೆಳಗಿನ ಕರಾಳ ಕಥೆ!
“ನಿಮಗಿಂತ ಚೆನ್ನಾಗಿ ಇನ್ಯಾರು ಅಭಿನಯಿಸ್ತಾರೆ?”
ಇನ್ನೋರ್ವ ಅಭಿಮಾನಿ “ಗಂಗೂಬಾಯಿ ಕಾಠಿಯಾವಾಡಿ ಪಾತ್ರವನ್ನ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲಾರರು” ಎಂದು ನಟಿ ಆಲಿಯಾ ಭಟ್ ಅಭಿನಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಟಿ ಆಲಿಯಾ ಭಟ್, ಗಂಗೂಬಾಯಿ ಕಠಿಯಾವಾಡಿ ಚಿತ್ರವು 102.68 ಕೋಟಿ ರೂ. ಗಳಿಸಿರುವ ಕುರಿತ ಪೋಸ್ಟ್ ಒಂದನ್ನು ಸಹ ಶೇರ್ ಮಾಡಿದ್ದಾರೆ.
ಗಂಗೂಬಾಯಿಗಾಗಿ ಸಾಕಷ್ಟು ತಯಾರಿ
ಕಳೆದ ತಿಂಗಳು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ನಟಿ ಆಲಿಯಾ ಭಟ್, ʼಗಂಗೂಬಾಯಿ ಕಾಠಿಯಾವಾಡಿʼ ಪಾತ್ರಕ್ಕೆ ತಾವು ಯಾವ ರೀತಿಯಾಗಿ ತಯಾರಿ ಮಾಡಿಕೊಂಡಿದ್ದೆ ಎಂಬುದನ್ನ ಬಹಿರಂಗಪಡಿಸಿದ್ದರು. ಸಂಜಯ್ ಲೀಲಾ ಬನ್ಸಾಲಿ ಅವರು ಮೀನಾ ಕುಮಾರಿ ಅವರ ಕೆಲಸ, ಅಭಿನಯ, ಹಾಡುವ ರೀತಿಯನ್ನು ನೋಡಬೇಕೆಂದು ಬಯಸಿದ್ದರು. ಆದರೆ ಚಿತ್ರದಲ್ಲಿ ನಾನು ಹೆಚ್ಚಾಗಿ ಹಾಡಲು ಹೋಗಿಲ್ಲ. ಆಕೆಯ ಕಣ್ಣುಗಳಲ್ಲಿ ದುಃಖವಿದೆ, ಆದರೆ ಆಕೆಯ ಮುಖದಲ್ಲಿ ಪವರ್ ಇದೆ. ಆಕೆಯ ಮುಖ ತುಂಬಿದ್ದು, ನಾನು ಕೂಡ ಅದನ್ನು ನೋಡಿದ್ದೇನೆ.
ನಟಿಯಾಗುವುದು ಒಂದು ವಿಷಯವಾದರೆ, ನಾಯಕಿಯಾಗುವುದು ಮತ್ತೊಂದು ವಿಷಯ. ಇದಕ್ಕಾಗಿ ನಾನು ಕೆಲವೊಂದು ಚಿತ್ರಗಳನ್ನ ರೆಫರ್ ಮಾಡಿದೆ. ವಹೀದಾ ರೆಹಮಾನ್, ಶಬಾನಾ ಅಜ್ಮಿ, ಮಧುಬಾಲಾ ಅವರುಗಳು ಲಾಂಗ್ ಶಾಟ್ನಲ್ಲಿ ಮಾಡುವ ಅಭಿನಯ ನಿಜಕ್ಕೂ ರೋಮಾಂಚನಗೊಳಿಸುತ್ತದೆ. ಇಂತಹ ನಾಯಕಿಯರ ಮೋಡಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ನಟಿ ಆಲಿಯಾ ಭಟ್ ಸಂದರ್ಶನದಲ್ಲಿ ಹೇಳಿದ್ದರು.
ಚಿತ್ರದಲ್ಲಿ ಘಟಾನುಘಟಿಗಳ ದಂಡು
ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರದಲ್ಲಿ ನಟಿ ಆಲಿಯಾ ಭಟ್, ಲೈಂಗಿಕ ಕೆಲಸಕ್ಕೆ ಮಾರಾಟವಾಗುವ ಹುಡುಗಿಯಾಗಿ ನಟಿಸಿದ್ದಾರೆ. ನಂತರದಲ್ಲಿ ಆಕೆ ಕಾಮಾಟಿಪುರದ ನಾಯಕಿಯಾಗಿ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Explained: ಗಂಗೂಬಾಯಿ ಕಾಠಿಯಾವಾಡಿ ಯಾರು? ಬನ್ಸಾಲಿ ಸಿನಿಮಾದ ಸುತ್ತ ವಿವಾದವೇಕೆ? ಇಲ್ಲಿದೆ ಡಿಟೇಲ್ಸ್
ಚಿತ್ರದಲ್ಲಿ ನಟರಾದ ವಿಜಯ್ ರಾಝ್ ಮತ್ತು ಅಜಯ್ ದೇವಗನ್ ಕೂಡ ಅಭಿನಯಿಸಿದ್ದಾರೆ. ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರ ಬಿಡುಗಡೆಗೆ ಮುನ್ನ ಒಂದಿಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಬಿಡುಗಡೆ ಬಳಿಕ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಲಿವುಡ್ ನಟ-ನಟಿಯರು ಸಹ ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ