ಅಭಿಮಾನಿಯ ಮದುವೆಗೆ ಹೋಗಿ ಶಾಕ್​ ನೀಡಿದ ಗೋಲ್ಡನ್​ ಸ್ಟಾರ್​

Seema.R | news18
Updated:December 6, 2018, 5:19 PM IST
ಅಭಿಮಾನಿಯ ಮದುವೆಗೆ ಹೋಗಿ ಶಾಕ್​ ನೀಡಿದ ಗೋಲ್ಡನ್​ ಸ್ಟಾರ್​
  • News18
  • Last Updated: December 6, 2018, 5:19 PM IST
  • Share this:
ಸಿನಿಮಾ ನಟರು ಎಂದರೆ ಅಭಿಮಾನಿಗಳಿಗೆ ಇರುವ ಅಭಿಮಾನಕ್ಕೆ ಕೊನೆಯಿಲ್ಲ. ಅವರಿಗಾಗಿ ಯಾವ ತ್ಯಾಗಕ್ಕಾದರೂ ಸಿದ್ದವಾಗಿರುತ್ತಾರೆ ಎಂಬುದಕ್ಕೆ ಇಲ್ಲೊಬ್ಬ ಅಭಿಮಾನಿ ಸಾಕ್ಷಿಯಾಗಿದ್ದಾರೆ.

ಗೋಲ್ಡನ್​ ಸ್ಟಾರ್​ ಗಣೇಶ್​ ಎಂದರೆ ಎಲ್ಲಿಲ್ಲದ ಅಕ್ಕರೆ, ಅಭಿಮಾನವನ್ನು ಹೊಂದಿದ್ದ ಈತನಿಗೆ ತನ್ನ ಮದುವೆಗೆ ಗಣೇಶ್ ಸಮ್ಮುಖದಲ್ಲಿ ನಡೆಯಬೇಕು. ಅವರು ಹಾರೈಸಬೇಕು ಎಂಬ ಮಹದಾಕಾಂಕ್ಷೆಯನ್ನು ಹೊಂದಿದ್ದ. ಆದರೆ, ಕೋಟಿಯಲ್ಲಿ ತಾನೊಬ್ಬ ಅಭಿಮಾನಿ ನನ್ನ ಮಾತಿಗೆ ಬೆಲೆಕೊಟ್ಟು ಬರುತ್ತಾರಾ ಎಂದು ಅಂಜಿಕೊಂಡು ಸಮ್ಮನಾಗಿದ್ದ.

ಗಣೇಶ್​ ಎಂದರೆ ಹುಚ್ಚು ಅಭಿಮಾನವನ್ನು ಹೊಂದಿದ್ದ ಈತನ ಬಗ್ಗೆ ಗೋಲ್ಡನ್​ ಸ್ಟಾರ್​ಗೆ ಆಗೂ ಹೀಗೂ ವಿಷಯ ತಿಳಿಯಿತು. ತನ್ನ ಅಸ್ಟಿಸ್ಟೆಂಟ್​ ಮೂಲಕ ಈ ವಿಷಯ ತಿಳಿದ ಗಣೇಶ್​ ಕಡೆಗೆ ಸಿನಿಮಾ ಚಿತ್ರೀಕರಣ ಸೆಟ್​ನಿಂದ ನೇರವಾಗಿ ಮದುವೆ ಮಂಟಪಕ್ಕೆ ಹೋಗಿ ಅಭಿಮಾನಿಗೆ ಶಾಕ್​ ನೀಡುವ ಜೊತೆ ಆತನ ಆಸೆ ಪೂರೈಸಿದ್ದಾರೆ.

ಇದನ್ನು ಓದಿ: 'ಕೆ.ಜಿ.ಎಫ್​' ನಿರ್ದೇಶಕ ಪ್ರಶಾಂತ್​ ನೀಲ್ 8ದಿನ ಸ್ನಾನ ಮಾಡದೇ ಇರಲು ರಾಕಿಂಗ್​ ಸ್ಟಾರ್​ ಯಶ್​ ಕಾರಣನಾ?

ನಾಯಂಡಹಳ್ಳಿಯಲ್ಲಿ ನಡೆಯುತ್ತಿದ್ದ ಈ ಮದುವೆ ವಿಷಯ ತಿಳಿದ ತಕ್ಷಣ ಹಿಂದೂ ಮುಂದೆ ಯೋಚಿಸದೆ ಗಣೇಶ್​ ಹೋಗಿದ್ದಾರೆ. ನೂತನ ವಧುವರರಿಗೆ ಆಶೀರ್ವಾದಿಸಿದ್ದು, ಅವರ ಅಭಿಮಾನದಿಂದಲೇ ನಾವು ಎಂದು ಸ್ಪಷ್ಟಪಡಿಸಿದ್ದಾರೆ.

 

First published: December 6, 2018, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading