ಸಖತ್... ಚಿನ್ನದ ಹುಡುಗ ಗಣೇಶ್ ಹಾಗೂ ಸಿಂಪಲ್ ಸುನಿ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ ಇದು. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ಸಂಸ್ಥೆ ಸಖತ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಈಗಾಗಲೇ ಪ್ರಮೋಷನ್ ಕಹಳೆ ಬಾರಿಸಿರುವ ಸಖತ್ ಸಿನಿಮಾ ಇದೇ ತಿಂಗಳ 26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಕೆಲ ದಿನಗಳ ಹಿಂದಷ್ಟೇ ಹಾಡೊಂದನ್ನು ರಿಲೀಸ್ ಮಾಡಿ ನಿರೀಕ್ಷೆ ಹುಟ್ಟಿಸಿದ್ದ ಸಖತ್ ಸಿನಿಮಾ ಅಂಗಳದಿಂದ ಇದೇ 22ಕ್ಕೆ ಮತ್ತೊಂದು ಹಾಡು ರಿಲೀಸ್ ಆಗಲಿದೆ. ಅರ್ಜುನ್ ಲೂಯಿಸ್ ಸಾಹಿತ್ಯ ಬರೆದು, ಸಿದ್ದಿ ಶ್ರೀರಾಮ್ ಕಂಠದಲ್ಲಿ "ಶುರುವಾಗಿದೆ" ಅನ್ನೋ ಬೊಂಬಾಟ್ ಸಾಂಗ್ ರಿವೀಲ್ ಆಗ್ತಿದೆ.
ಚಮಕ್ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಚಮಕ್ ಕೊಟ್ಟಿದ್ದ ಗಣಿ-ಸುನಿ ಈ ಬಾರಿ ಸಖತ್ ಸಿನಿಮಾ ಮೂಲಕ ಕಾಮಿಡಿ ಹೂರಣ ಬಡಿಸಲು ಸಕಲ ರೀತಿಯಿಂದ ತಯಾರಿಯಾಗಿದ್ದು, ಗಣಿ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಿಶ್ವಿಕಾ ನಾಯ್ಡು ಹಾಗೂ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ.
ಟಿ.ವಿ. ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಕೆವಿಎನ್ ಪ್ರೊಡಕ್ಷನ್‌ನಡಿ ತಯಾರಾಗಿರುವ ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ಈಗಾಗ್ಲೇ ಸೆನ್ಸಾರ್ ನಿಂದ U/A ಸರ್ಟಿಫಿಕೆಟ್ ಪಡೆದು, ಪಾಸ್ ಆಗಿರುವ ಸಖತ್ ಸಿನಿಮಾ ಇದೇ 26 ಕ್ಕೆ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.
ಇದನ್ನೂ ಓದಿ: Preity Zintaಗಿಂತ ಮೊದಲು ಐವಿಎಫ್- ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದ ಸ್ಟಾರ್ಗಳು ಇವರೆ..!
2019ರಲ್ಲಿ ತೆರೆ ಕಂಡ 'ಬಜಾರ್' ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಿರ್ದೇಶಕ ಸಿಂಪಲ್ ಸುನಿ 'ಸಖತ್' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸಖತ್ ಚಿತ್ರದ ಪೋಸ್ಟರ್ಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಗಣೇಶ್ ಹುಟ್ಟುಹಬ್ಬದ ವೇಳೆ ರಿಲೀಸ್ ಮಾಡಲಾಗಿದ್ದ ರ‍್ಯಾಪ್ ಮೋಷನ್ ಪೋಸ್ಟರ್ ಸಹ ಸಿನಿಪ್ರಿಯರ ಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಗಣೇಶ್ ಅವರ ಮಗ ವಿಯಾನ್ ಸಹ ನಟಿಸುತ್ತಿದ್ದಾರೆ.
ಈ ಹಿಂದೆ ವಿಯಾನ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿದ ಚಿತ್ರಗಳನ್ನು ಗಣೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇನ್ನು ಗಣೇಶ್ ಅವರ ಮಗ ಇದೇ ಮೊದಲು ಸಿನಿಮಾದಲ್ಲಿ ನಟಿಸುತ್ತಿಲ್ಲ. ಗಣೇಶ್ ಅಭಿನಯದ ಗೀತಾ ಸಿನಿಮಾದಲ್ಲೂ ವಿಯಾನ್ ಬಾಲ ಕಲಾವಿದನಾಗಿ ಕಾಣಿಸಿಕೊಂಡಿದ್ದಾನೆ.
ಇದನ್ನೂ ಓದಿ: Beauty Tips: ಮಲೈಕಾ ಅರೋರಾರ ಕಾಂತಿಯುಕ್ತ ತ್ವಚೆಯ ರಹಸ್ಯ ಇದಂತೆ..!
ಸಖತ್ ಸಿನಿಮಾದ ಜೊತೆಗೆ ಸಿಂಪಲ್ ಸುನಿ ಹಾಗೂ ಗಣೇಶ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಅದೇ 'ದಿ ಸ್ಟೋರಿ ಆಫ್ ರಾಯಗಢ'. ಗಣೇಶ್ ಹುಟ್ಟುಹಬ್ಬದಂದು ಇದರ ಪೋಸ್ಟರ್ ರಿಲೀಸ್ ಆಗಿದ್ದು, ಅದು ಸಖತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ಗಣೇಶ್ ಅವರು ಗಾಳಿಪಟ 2, ತ್ರಿಬಲ್ ರೈಡಿಂಗ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ