ಸ್ಯಾಂಡಲ್​​ವುಡ್​ನಲ್ಲಿ ಮತ್ತೆ ಬಿಗ್ ಕ್ಲ್ಯಾಶ್: ಬಾಕ್ಸಾಫೀಸ್ ಬೇಟೆಗೆ ರೆಡಿಯಾಗಿದೆ ಮತ್ತೆರಡು ಚಿತ್ರಗಳು

ದರ್ಶನ್ ಅಭಿನಯದ ಕುರುಕ್ಷೇತ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರಗಳ ಹಿಂದಿ ಅವರತಣಿಕೆ ಸೆಪ್ಟೆಂಬರ್ 12ರಂದು ತೆರೆ ಕಾಣಲಿದೆ.

zahir | news18-kannada
Updated:August 21, 2019, 3:30 PM IST
ಸ್ಯಾಂಡಲ್​​ವುಡ್​ನಲ್ಲಿ ಮತ್ತೆ ಬಿಗ್ ಕ್ಲ್ಯಾಶ್: ಬಾಕ್ಸಾಫೀಸ್ ಬೇಟೆಗೆ ರೆಡಿಯಾಗಿದೆ ಮತ್ತೆರಡು ಚಿತ್ರಗಳು
Ganesh-Srimurali
  • Share this:
ಸ್ಯಾಂಡಲ್​​ವುಡ್​ನಲ್ಲಿ ಸ್ಟಾರ್ ವಾರ್ ಸಖತ್ತಾಗೆ ಸೌಂಡ್ ಮಾಡುತ್ತಿದೆ. ಇತ್ತೀಚೆಗಷ್ಟೇ 'ಕುರುಕ್ಷೇತ್ರ' ಹಾಗೂ 'ಪೈಲ್ವಾನ್' ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಕ್ಲ್ಯಾಶ್ ಆಗಲಿದೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಎರಡು ಬಿಗ್ ಬಜೆಟ್​ ಚಿತ್ರಗಳಿಗೆ ಬೇರೆ ಬೇರೆ ದಿನಾಂಕಗಳನ್ನು ಫಿಕ್ಸ್ ಮಾಡಲಾಯಿತು.

ಇದೀಗ 'ಪೈಲ್ವಾನ್' ಹಾಗೂ 'ಕುರುಕ್ಷೇತ್ರ' ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ಮುಖಾಮುಖಿ ಆಗಲಿದೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. ಅಂದರೆ ದರ್ಶನ್ ಅಭಿನಯದ 'ಕುರುಕ್ಷೇತ್ರ' ಹಾಗೂ ಕಿಚ್ಚ ಸುದೀಪ್ ನಟನೆಯ 'ಪೈಲ್ವಾನ್' ಚಿತ್ರಗಳ ಹಿಂದಿ ಅವರತಣಿಕೆ ಸೆಪ್ಟೆಂಬರ್ 12ರಂದು ತೆರೆ ಕಾಣಲಿದೆ.

ಅದು ಬಾಲಿವುಡ್ ಬಾಕ್ಸಾಫೀಸ್​ನಲ್ಲಿ ಎಂದು ಕನ್ನಡ ಸಿನಿಪ್ರಿಯರು ನಿಟ್ಟುಸಿರುವ ಬಿಡುವ ಮುನ್ನವೇ ಸ್ಯಾಂಡಲ್​ವುಡ್  ಮತ್ತೆರೆಡು ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸಲು ಸಜ್ಜಾಗಿದೆ. ಗಾಂಧಿನಗರದ ಮೂಲಗಳ ಪ್ರಕಾರ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ರೋರಿಂಗ್ ಸ್ಟಾರ್ ಅಭಿನಯದ 'ಭರಾಟೆ' ಹಾಗೂ ಗೋಲ್ಡನ್ ಸ್ಟಾರ್ ನಟನೆಯ 'ಗೀತಾ' ಚಿತ್ರಗಳು ಏಕದಿನ ರಿಲೀಸ್ ಆಗುವ ಸಾಧ್ಯತೆಯಿದೆ.

'ಭರ್ಜರಿ' ಚೇತನ್ ನಿರ್ದೇಶನದ 'ಭರಾಟೆ' ಈಗಾಗಲೇ ಮೇಕಿಂಗ್ ಮೂಲಕ ಭರ ಭರ ಭರ್ಜರಿ ಎಂದೆನಿಸಿಕೊಂಡಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ರೋರಿಂಗ್ ಸ್ಟಾರ್ ವಾಯ್ಸ್​ಗೆ ಹಾಗೂ ಟಪ್ಪಾಂಗುಚ್ಚಿ ಸಾಂಗ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಇನ್ನು ಗೋಲ್ಡನ್ ಗಣಿ ಅಭಿನಯದ 'ಗೀತಾ' ಸಿನಿಮಾ ಕೂಡ ಕೊನೆಯ ಹಂತದ ಕೆಲಸಗಳ ಬ್ಯುಸಿಯಲ್ಲಿದೆ. ವಿಜಯ್ ನಾಗೇಂದ್ರ ಎಂಬ ನವನಿರ್ದೇಶಕ ಆ್ಯಕ್ಷನ್ ಕಟ್ ಹೇಳಿರುವ 'ಗೀತಾ' ಈಗಾಗಲೇ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಇನ್ನು ಚಿತ್ರದ ಕಥೆಯಲ್ಲಿ ಗೋಕಾಕ್ ಚಳುವಳಿಯ ಟಚ್ ನೀಡಲಾಗಿದ್ದು, 'ಗೀತಾ' ಸಿನಿಮಾವು ಕನ್ನಡದ ಅಸ್ಮಿತೆಯನ್ನು ಬಡಿದೆಬ್ಬಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ಹಿಂದೆ 'ಗೀತಾ' ಚಿತ್ರವನ್ನು ಸೆಪ್ಟೆಂಬರ್ 12 ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿತು. ಆದರೆ 'ಪೈಲ್ವಾನ್' ಎಂಟ್ರಿಯೊಂದಿಗೆ ಚಿತ್ರದ ರಿಲೀಸ್ ದಿನಾಂಕ ಬದಲಿಸುವುದಾಗಿ ನಿರ್ಮಾಪಕರು ತಿಳಿಸಿದ್ದರು. ಅದರಂತೆ ಇದೀಗ ಚಿತ್ರವು ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವುದು ಡೌಟ್ ಎನ್ನಲಾಗುತ್ತಿದೆ. ಇನ್ನು ಎರಡನೇ ವಾರದಲ್ಲಿ ಕಿಚ್ಚ ಸುದೀಪ್ ಚಿತ್ರವಿರುವುದರಿಂದ 3ನೇ ಅಥವಾ 4ನೇ ವಾರದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇದೇ ಸಮಯದಲ್ಲಿ 'ಭರಾಟೆ' ಕೂಡ ಬಿಡುಗಡೆಗೆ ಸಕಲ ಸಿದ್ಧತೆಯಲ್ಲಿದೆ.

ಭರ್ಜರಿ ಆ್ಯಕ್ಷನ್ ಕಮ್ ಲವ್ ಸ್ಟೋರಿ ಹೊಂದಿರುವ 'ಭರಾಟೆ'ಯಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಿದ್ದಾರೆ. ಹಾಗೆಯೇ 'ಗೀತಾ'ದಲ್ಲಿ ಗೋಲ್ಡನ್ ಗಣಿ ಪ್ರಯಾಗ ಮಾರ್ಟಿನ್, ಶಾನ್ವಿ ಶ್ರೀವಾತ್ಸವ್ ಜತೆ ರೋಮ್ಯಾನ್ಸ್ ಮಾಡಲಿದ್ದಾರೆ. ಎರಡು ಸಿನಿಮಾಗಳು ಈಗಾಗಲೇ ಕಲರ್​ಫುಲ್ ಮೇಕಿಂಗ್ ಮೂಲಕ ಸಿನಿಮಾ ಪ್ರಿಯರ ಮನ ಗೆದ್ದಿದ್ದು, ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಸ್ಟಾರ್ ಕ್ಲ್ಯಾಶ್​ ಆಗಲಿದೆ ಎಂಬ ಟಾಕುಗಳು ಗಾಂಧಿನಗರದಿಂದ ಕೇಳಿ ಬರುತ್ತಿದೆ.


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published: August 21, 2019, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading