ಕೊರೋನಾ (Corona) ಎಲ್ಲ ಕಡಿಮೆಯಾದ ಬಳಿಕ ಚಿತ್ರರಂಗ ಮತ್ತೆ ಮೊದಲಿನ ಹಂತಕ್ಕೆ ಬರುತ್ತಾ ಅನ್ನುವ ಅನುಮಾನವಿತ್ತು. ಆದರೆ, ಕೊಂಚ ಕೊಂಚವೇ ಚೇತರಿಸಿಕೊಂಡು ಬಂದು ಚಿತ್ರರಂಗ ಹಳೆ ಹಳಿಗೆ ಮರಳಿದೆ. ಮೊದಲಿನಂತೆ ವಾಪಾಸ್ ಆಗಿದೆ. ಕೆಜಿಎಫ್ 2 (KGF 2) ಎಂಬ ಒಂದು ಸಿನಿಮಾ ಚಿತ್ರರಂಗಕ್ಕೆ ಹಿಡಿದಿದ್ದ ಧೂಳನ್ನು ಕೊಡವಿ ಎದ್ದು ನಿಲ್ಲುವಂತೆ ಮಾಡಿದೆ. ಪ್ರತಿವಾರ ಸ್ಯಾಂಡಲ್ವುಡ್ (Sandalwood) ನಲ್ಲಿ ಹೊಸಬರ ಸಿನಿಮಾ ಸೇರಿ ಸ್ಟಾರ್(Star) ಗಳ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದೀಗ ಮತ್ತೆ ಸ್ಯಾಂಡಲ್ವುಡ್ನಲ್ಲಿ ಬಾಕ್ಸ್ ಆಫೀಸ್ ವಾರ್ (Box Office War) ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದೆ. ಇದಕ್ಕೆ ಕಾರಣ ಕೂಡ ಇದೆ. ಒಂದೇ ದಿನ ಇಬ್ಬರು ಸ್ಟಾರ್ಗಳ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ (Kannada) ದ ಬಹುನಿರೀಕ್ಷೆಯ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ.
ಒಂದೇ ಇಬ್ಬರು ಸ್ಟಾರ್ಗಳ ಸಿನಿಮಾ ರಿಲೀಸ್!
ಎರಡು ಸಿನಿಮಾಗಳು ಒಂದೇ ದಿನ ಬರ್ತಿವೆ ಅಂದರೆ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗುವುದು ಬಹುತೇಕ ಖಚಿತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.ಇದೀಗ ಸ್ಯಾಂಡಲ್ ವುಡ್ ಮೆಗಾ ಬಾಕ್ಸ್ ಆಫೀಸ್ ಗೆ ಸಿದ್ಧವಾಗಿವೆ ಗಾಳಿಪಟ-2 ಸಿನಿಮಾ ಮತ್ತು ಮಾನ್ಸೂನ್ ರಾಗ ಸಿನಿಮಾಗಳು. ಹೌದು ಈ ಎರಡು ಸಿನಿಮಾಗಳು ಒಂದೆ ದಿನ ತೆರೆಗೆ ಬರಲು ಸಜ್ಜಾಗಿವೆ. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ಸಿನಿಮಾ ಅಂದರೆ ಜನ ಕಾಯುತ್ತಿರುತ್ತಾರೆ. ಇದೀಗ ಯೋಗರಾಜ್ ಭಟ್
ನಿರ್ದೇಶನದ ಗಾಳಿಪಟ-2 ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಮೊದಲ ಭಾಗ ಸೂಪರ್ ಸಕ್ಸಸ್ ಆದ ಖುಷಿಯಲ್ಲಿ ಭಟ್ರು ಎರಡನೇ ಭಾಗ ತಯಾರಿಸಿದ್ದಾರೆ.
ಇತ್ತ ಡಾಲಿ ಧನಂಜಯ್ ಸಿನಿಮಾ ಕೂಡ ರಿಲೀಸ್!
ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾದ ಬಿಡುಗಡೆ ದಿನವೇ ಗಾಳಿಪಟ 2 ಸಿನಿಮಾ ರಿಲೀಸ್ ಆಗುತ್ತಿದೆ. ಈ ಎರಡು ಸಿನಿಮಾಗಳು ಆಗಸ್ಟ್ 12ರಂದು ತೆರೆಗೆ ಬರುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್ ಮತ್ತು ದಿಗಂತ್ ನಟನೆಯ ಈ ಸಿನಿಮಾ ಈಗಾಗಲೇ ಟೀಸರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅನಂತ್ ನಾಗ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತ ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಕೂಡ ಟೀಸರ್, ಫಸ್ಟ್ ಲುಕ್ನಿಂದ ಗಮನ ಸೆಳೆದಿದೆ.
ಇದನ್ನೂ ಓದಿ: 'ತಾಯಿ ದೇವರು' ಎಂದ 'ಜೋಗಿ'! 'ಅಮ್ಮ'ನ ಪ್ರೀತಿ ಸಾರಿದ ಕನ್ನಡ ಸಿನಿಮಾಗಳಿವು
ಯಾವ ಸಿನಿಮಾಗೆ ಜೈ ಹೇಳ್ತಾರೆ ಪ್ರೇಕ್ಷಕರು!
ಧನಂಜಯ್ ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಡವ ರಾಸ್ಕಲ್ ಸಕ್ಸಸ್ನಲ್ಲಿರುವ ಧನಂಜಯ್ ಇದೀಗ ಮಾನ್ಸೂನ್ ರಾಗ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಎರಡು ಬಹುನಿರೀಕ್ಷೆಯ ಸಿನಿಮಾಗಳು ಒಟ್ಟಿಗೆ ಬಂದಾಗ ಅಭಿಮಾನಿಗಳು ಯಾವ ಸಿನಿಮಾ ನೋಡುವುದು ಎಂದು ಗೊಂದಲ ಮೂಡಿಸುವುದು ಸಹಜ. ಆದರೆ ಉತ್ತಮ ಸಿನಿಮಾವನ್ನು ಪ್ರೇಕ್ಷಕರು ಯಾವತ್ತು ಕೈಬಿಟ್ಟಲ್ಲ. ಹಾಗಾಗಿ ಯಾವ ಸಿನಿಮಾ ಪ್ರೇಕ್ಷಕರ ಹೃದಯ ಗೆಲ್ಲುತ್ತೊ ಆ ಸಿನಿಮಾ ಗೆದ್ದು ಬೀಗಲಿದೆ.
ಇದನ್ನೂ ಓದಿ: ಜಿಂಕೆ ಮತ್ತು ಮೃಗದ ರೋಚಕ ಕಥೆ! ವಿನಯ್ ಬರ್ತ್ಡೇಗೆ ಫ್ಯಾನ್ಸ್ಗೆ 'ಪೆಪೆ' ಚಿತ್ರತಂಡದಿಂದ ಗಿಫ್ಟ್
ವಿವಾದದಲ್ಲಿ ಡಾಲಿ ಧನಂಜಯ್ ನಟನೆಯ ಸಿನಿಮಾ!
ಹೆಡ್ ಬುಷ್ ಸಿನಿಮಾದ ಟ್ರೇಲರ್ನಲ್ಲಿ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು. ಪೊಲೀಸ್ ವ್ಯವಸ್ಥೆಯಲ್ಲಿನ ಅಕ್ರಮವನ್ನು ವಿರೋಧಿಸಿದವರು. ಕುಟುಂಬಸ್ಥರ ಅನುಮತಿ ಪಡೆಯದೇ ತಂದೆಯವರ ಜೀವನಾಧಾರಿತ ಕಥೆಯನ್ನ ಚಿತ್ರ ಮಾಡಲು ಹೊರಟ್ಟಿದ್ದಾರೆ ಎಂದು ಅಜಿತ್ ಜಯರಾಜ್ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ