Ragini Dwivedi: ಸಿಸಿಬಿ ಪಂಜರದಲ್ಲಿ ರಾಗಿಣಿ: ಸಂಕಷ್ಟದಲ್ಲಿ ತುಪ್ಪದ ಬೆಡಗಿ ನಟನೆಯ ಗಾಂಧಿಗಿರಿ ಸಿನಿಮಾ!

ಈಗ ರಾಗಿಣಿ ಸಿಸಿಬಿ ವಶದಲ್ಲಿದ್ದಾರೆ. ಡ್ರಗ್ ಕೇಸ್​ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಗಾಂಧಿಗಿರಿ ಸಿನಿಮಾ ತಂಡ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.

news18-kannada
Updated:September 6, 2020, 11:48 AM IST
Ragini Dwivedi: ಸಿಸಿಬಿ ಪಂಜರದಲ್ಲಿ ರಾಗಿಣಿ: ಸಂಕಷ್ಟದಲ್ಲಿ ತುಪ್ಪದ ಬೆಡಗಿ ನಟನೆಯ ಗಾಂಧಿಗಿರಿ ಸಿನಿಮಾ!
ರಾಗಿಣಿ
  • Share this:
ತುಪ್ಪದ ಬೆಡಗಿ ರಾಗಿಣಿ ಡ್ರಗ್ ಕೇಸ್​ನಲ್ಲಿ ಸಿಸಿಬಿ ವಶದಲ್ಲಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಬೇಲ್ ಸಿಗುತ್ತಾ? ಅಥವಾ ಇನ್ನಷ್ಟು ಪಂಜರದಲ್ಲಿಯೇ ಕಳೆಯಬೇಕಾ? ಎಂಬ ಪ್ರಶ್ನೆಗಳು ಎದ್ದಿವೆ. ಇದರ ಬೆನ್ನಲ್ಲೇ ರಾಗಿಣಿ ಅಭಿನಯದ ಸಿನಿಮಾಗಳ ಪಾಡೇನು, ಯಾವ ಯಾವ ಸಿನಿಮಾಗಳಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ ಎಂಬ ಕುತೂಹಲ ಸದ್ಯ ಹುಟ್ಟಿದೆ. ಸದ್ಯ ರಾಗಿಣಿ ನಟನೆಯಲ್ಲಿ "ಗಾಂಧಿಗಿರಿ" ಶೂಟಿಂಗ್​ನಲ್ಲಿತ್ತು. ಜೋಗಿ ಪ್ರೇಮ್ ಈ ಸಿನಿಮಾದ ನಾಯಕ. ರಘು ಹಾಸನ್ ಇದರ ನಿರ್ದೇಶಕರು. ಸುಮಾರು 8 ಕೋಟಿ ಬಜೆಟ್​ನಲ್ಲಿ ಈ ಸಿನಿಮಾ ದೃಶ್ಯರೂಪ ಪಡೆದುಕೊಳ್ಳುತ್ತಿದೆ. 3 ವರ್ಷಗಳ ಹಿಂದಿನ ಪ್ರಾಜೆಕ್ಟ್ ಇದಾಗಿದ್ದು, ಸಾಕಷ್ಟು ಕಾರಣಗಳಿಂದ ಶೂಟಿಂಗ್ ತಡವಾಗುತ್ತಾ ಬಂದಿತ್ತು. ಈಗ ಫೈನಲಿ ಚಿತ್ರದ ಕೊನೆಯ ಹಂತದ ಶೂಟಿಂಗ್​ಗೆ ಸಿನಿಮಾ ತಂಡ ಪ್ಲ್ಯಾನ್ ಮಾಡಿಕೊಂಡಿತ್ತು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೇ ತಿಂಗಳು 14ರಿಂದ ಶೂಟಿಂಗ್ ಅಡ್ಡಾದಲ್ಲಿ ಗಾಂಧಿಗಿರಿ ಸ್ಟಾರ್ಟ್ ಆಗಬೇಕಿತ್ತು. ಅದಕ್ಕಾಗಿ ಲೊಕೆಷನ್ ಹಂಟ್ ಸಹ ನಡೆಸಲಾಗಿತ್ತು. ಮಂಡ್ಯ, ‌ಮೈಸೂರು, ಬೆಂಗಳೂರಿನ ಸುತ್ತ ಮುತ್ತ ಲೊಕೆಷನ್ ಫೈನಲ್ ಆಗಿತ್ತು.ಇನ್ನು 20 ದಿನಗಳ ಶೂಟಿಂಗ್ ಬಾಕಿಯಿದ್ದು, ಅದರಲ್ಲಿ ರಾಗಿಣಿ ಪೋರ್ಷನ್ 12 ದಿನಗಳು ಶೂಟಿಂಗ್ ಉಳಿದಿದೆ.

Samyuktha Hegde: ಪಾರ್ಕ್​ನಲ್ಲಿ​ ಗಲಾಟೆ ವಿಚಾರ; ನಟಿ ಸಂಯುಕ್ತಾ ಹೆಗಡೆಗೆ ಭಾರೀ ಬೆಂಬಲ

ಆದರೆ, ಈಗ ರಾಗಿಣಿ ಸಿಸಿಬಿ ವಶದಲ್ಲಿದ್ದಾರೆ. ಡ್ರಗ್ ಕೇಸ್​ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಗಾಂಧಿಗಿರಿ ಸಿನಿಮಾ ತಂಡ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಅಂದಹಾಗೆ ರಾಗಿಣಿ ನಟನೆಯಲ್ಲಿ ಕೊನೆಯದಾಗಿ ರಿಲೀಸ್ ಆದ ಸಿನಿಮಾ 'ಅದ್ಯಕ್ಷ ಇನ್ ಅಮೇರಿಕಾ'. ಇದರಲ್ಲಿ ಶರಣ್ ಜೋಡಿಯಾಗಿ ರಾಗಿಣಿ ನಟಿಸಿದ್ದರು.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಕ್ಕಮಟ್ಟಿಗೆ ಸೌಂಡ್ ಮಾಡಿತ್ತಷ್ಟೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಅವರು ಮೂರು ದಿನ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮೊನ್ನೆ ಅವರ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಬಂಧಿಸಿದ್ದರು. ರಾಗಿಣಿ ವಿರುದ್ಧ ಕಠಿಣ ಕೇಸ್​ಗಳನ್ನ ದಾಖಲಿಸಲಾಗಿದೆ.

Sushant Singh Death: ಸುಶಾಂತ್ ಸಿಂಗ್ ಸಾವಿನ ಕೇಸ್; ರಿಯಾ ಚಕ್ರವರ್ತಿಗೆ ಎನ್​ಸಿಬಿಯಿಂದ ಸಮನ್ಸ್​ ಜಾರಿ
1985ರ ಎನ್​ಡಿಪಿಎಸ್ ಕಾಯ್ದೆಯ ಸೆಕ್ಷನ್ 21(ಬಿ), 21(ಸಿ) ಮತ್ತು 22(ಸಿ) ಸೆಕ್ಷನ್ ಅಡಿ ಪ್ರಕರಣ ಹಾಕಲಾಗಿದೆ. ಮಾದಕ ವಸ್ತು ಮತ್ತು ಮಾನಸಿಕ ಪ್ರಭಾವ ಬೀರುವ ವಸ್ತುಗಳನ್ನ ಹೊಂದಿರುವುದು, ಅವುಗಳ ತಯಾರಿಕೆ, ಮಾರಾಟ, ಖರೀದಿ, ಸಾಗಣೆ ಮಾಡಿದ ಅಪರಾಧಗಳಿಗೆ ಈ ಸೆಕ್ಷನ್​ಗಳು ಅನ್ವಯವಾಗುತ್ತವೆ. ಇದಕ್ಕೆ ಬಹಳ ಕಠಿಣ ಶಿಕ್ಷೆ ಇದೆ. ಒಂದು ವೇಳೆ ಸ್ಯಾಂಡಲ್​ವುಡ್ ನಟಿ ರಾಗಿಣಿ ಮೇಲಿನ ಆರೋಪ ಸಾಬೀತಾದಲ್ಲಿ ನ್ಯಾಯಾಲಯವು ಆಕೆಗೆ 20 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂವರೆಗೆ ದಂಡ ವಿಧಿಸುವ ಅವಕಾಶ ಹೊಂದಿದೆ.
Published by: Vinay Bhat
First published: September 6, 2020, 11:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading