• Home
  • »
  • News
  • »
  • entertainment
  • »
  • Gandhadagudi: ಶುರುವಾಯ್ತು ಗಂಧದಗುಡಿಯ ಕಂಪು, ಅಪ್ಪು ಕಣ್ತುಂಬಿಕೊಳ್ಳಲು ಬಂದ ಸೆಲಬ್ರಿಟಿಗಳು

Gandhadagudi: ಶುರುವಾಯ್ತು ಗಂಧದಗುಡಿಯ ಕಂಪು, ಅಪ್ಪು ಕಣ್ತುಂಬಿಕೊಳ್ಳಲು ಬಂದ ಸೆಲಬ್ರಿಟಿಗಳು

ಗಂಧದಗುಡಿ ಪ್ರೀಮಿಯರ್ ಶೋ ಆರಂಭ

ಗಂಧದಗುಡಿ ಪ್ರೀಮಿಯರ್ ಶೋ ಆರಂಭ

ಪುನೀತ್ ರಾಜ್‌ಕುಮಾರ್ (Power star Puneeth Rajkumar) ಅಭಿನಯದ ಬಹು ನಿರೀಕ್ಷಿತ ಗಂಧದಗುಡಿ ಪ್ರದರ್ಶನ (Show) ಆರಂಭವಾಗಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ (Orian Mall, Bengaluru) ಸೆಲಬ್ರಿಟಿ ಪ್ರೀಮಿಯರ್ ಶೋ (Celebrity Premior Show) ಆರಂಭವಾಗಿದೆ.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರು: ಗಂಧದ ಗುಡಿಯ (Gandhadagudi) ಕಂಪು ಶುರುವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power star Puneeth Rajkumar) ಅಭಿನಯದ ಬಹು ನಿರೀಕ್ಷಿತ ಗಂಧದಗುಡಿ ಪ್ರದರ್ಶನ (Show) ಆರಂಭವಾಗಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ (Orian Mall, Bengaluru) ಸೆಲಬ್ರಿಟಿ ಪ್ರೀಮಿಯರ್ ಶೋ (Celebrity Premior Show) ಆರಂಭವಾಗಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾ (Last Movie) ನೋಡಿ, ‘ದೊಡ್ಮನೆ ಹುಡುಗ’ಅಭಿನಯವನ್ನು ಕಣ್ತುಂಬಿಕೊಳ್ಳಲು, ಕರುನಾಡಿನ ಪ್ರಕೃತಿ ಸೌಂದರ್ಯದಲ್ಲಿ ಮಿಂದೆದ್ದಿ ಬರಲು ಅನೇಕ ಸೆಲಬ್ರಿಟಿಗಳು ಆಗಮಿಸಿದ್ದಾರೆ.


ಅಪ್ಪು ನೋಡಲು ಬಂದ ದೊಡ್ಮನೆ ಸದಸ್ಯರು


ಒರಾಯಿನ್ ಮಾಲ್‌ನಲ್ಲಿ ಸೆಲಬ್ರಿಟಿ ಪ್ರೀಮಿಯರ್ ಶೋ ಆರಂಭವಾಗಿದೆ. ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ದೊಡ್ಮನೆ ಸದಸ್ಯರೆಲ್ಲ ಆಗಮಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್ ಪುತ್ರರು ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.
ಪವರ್ ಸ್ಟಾರ್‌ ಕಣ್ತುಂಬಿಕೊಳ್ಳಲು ಆಗಮಿಸಿದ ಸೆಲಬ್ರಿಟಿಗಳು


ಇನ್ನು ಪವರ್ ಸ್ಟಾರ್ ಕಣ್ತುಂಬಿಸಿಕೊಳ್ಳಲು ಸೆಲಬ್ರಿಟಿಗಳ ದೊಡ್ಡ ದಂಡೇ ಬಂದಿದೆ. ಚಿತ್ರ ನಟಿ ರಮ್ಯಾ, ಇನ್ಫೋಸಿಸ್‌ನ ಸುಧಾ ಮೂರ್ತಿ, ನಟಿ ನಿಶ್ವಿಕಾ ನಾಯ್ಡು ಸೇರಿದಂತೆ ಹಲವು ನಟ ನಟಿಯರು ಆಗಮಿಸಿದ್ದಾರೆ. ಇನ್ನು ಇಡೀ ಕಾಂತಾರಾ ಚಿತ್ರತಂಡ ಗಂಧದಗುಡಿ ಪ್ರೀಮಿಯರ್ ಶೋಗೆ ಆಗಮಿಸಿದೆ.


ಇದನ್ನೂ ಓದಿ: Puneeth Rajkumar: ಯುವರತ್ನನಿಗೆ ಕರ್ನಾಟಕ ರತ್ನ ಪ್ರದಾನ ಮಾಡ್ತಾರಾ ರಜನಿಕಾಂತ್? ರಾಜ್ಯೋತ್ಸವಕ್ಕೆ ಬರುತ್ತಾರಾ ತಲೈವಾ?


ನನಗೆ ಫೋನ್ ಕಾಲ್ ಮಾಡಲು ಬೆಟ್ಟ ಹತ್ತಿದ್ರು ಅಪ್ಪು!


ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಕ್ಯಾಮೆರಾ ಮುಂದೆ ಬಂದು ಮಾತಾಡಿಲ್ಲ. ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರು, ಆದ್ರೆ ಎಲ್ಲೂ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿಲ್ಲ. ಇದೀಗ ಅಶ್ವಿನಿ ಅವರು ಪುನೀತ್ ರಾಜ್​ಕುಮಾರ್​ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಪ್ಪು ಅಭಿಮಾನಿಗಳ ಮುಂದೆ ತರಲು ಅಶ್ವಿನಿ ಸಾಕಷ್ಟು ಶ್ರಮಪಟ್ಟಿದ್ದಾರೆ.


ಪುನೀತ್ ಪತ್ನಿ ಅಶ್ವಿನಿ ಮನದಾಳದ ಮಾತು


ಗಂಧದ ಗುಡಿ ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ಮಾಪಕಿ ಅಶ್ವಿನಿ ಅವರನ್ನು ಅನೇಕ ಪ್ರಶ್ನೆ ಕೇಳಿದ್ದಾರೆ. ಈ ಸಂದರ್ಶನದ ವೀಡಿಯೋ 8 ನಿಮಿಷಗಳ ಇದ್ದು, ಸಂದರ್ಶನದಲ್ಲಿ ನಿರ್ಮಾಪಕಿ ಅಶ್ವಿನಿ ಅವರು ಗಂಧದಗುಡಿ ಚಿತ್ರ ಹಾಗೂ ಪತಿ ಪುನೀತ್​ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.


ದೊಡ್ಮನೆ ದೊರೆಗೆ ಕ್ರಿಕೆಟಿಗರ ಅಭಿಮಾನದ ಪ್ರೀತಿ


ಅಪ್ಪು ಕನಸಿನ ಗಂಧದಗುಡಿ ರಿಲೀಸ್ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಅನೇಕ ಗಣ್ಯರು ಚಿತ್ರಕ್ಕೆ ಶುಭಕೋರಿದ್ದಾರೆ. ಅಲ್ಲದೇ ಇದೀಗ ಟೀಂ ಇಂಡಿಯಾ ಆಟಗಾರರೂ ಸಹ ಅಪ್ಪು ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್, ವಿವಿಎಸ್ ಲಕ್ಷ್ಮಣ್, ಅಮಿತ್ ಮಿಶ್ರಾ ಸೇರಿದಂತೆ ನೇಖ ಕ್ರಿಕೆಟಿಗರು ಶುಭ ಹಾರೈಸಿದರೆ, ಭಾರತ ತಂಡದ ಹಾಕಿ ಆಟಗಾರ, ಕನ್ನಡಿಗ ಎಸ್​ವಿ ಸುನೀಲ್ ಸಹ ಟ್ವೀಟ್​ ಮಾಡಿ ಹಾರೈಸಿದ್ದಾರೆ.


ಇದನ್ನೂ ಓದಿ: Gandhada Gudi: ದೊಡ್ಮನೆ ದೊರೆಗೆ ಕ್ರಿಕೆಟಿಗರ ಅಭಿಮಾನದ ಪ್ರೀತಿ, ಗಂಧದಗುಡಿಗೆ ಟೀಂ ಇಂಡಿಯಾ ಆಟಗಾರರ ಶುಭಹಾರೈಕೆ!


ಇನ್ನು, ಜಾವಗಲ್ ಶ್ರೀನಾಥ್, ‘ಆಲ್ ದಿ ಬೆಸ್​ ಗಂಧದ ಗುಡಿ‘ ಎಂದು ಟ್ವೀಟ್​ ಮಾಡಿದ್ದಾರೆ. ಅದರಂತೆ ವಿವಿಎಸ್ ಲಕ್ಷ್ಮಣ್ ಸಹ ಟ್ವೀಟ್​ ಮಾಡಿದ್ದು, ಯಾವಾಗಲೂ ನಿಮ್ಮ ನಗು ಮತ್ತು ನಿಸ್ವಾರ್ಥ ಪ್ರೀತಿಯನ್ನು ನೀಡುವ ನಮ್ಮ ಪ್ರೀತಿಯ ಪುನೀತ್ ರಾಜ್‌ಕುಮಾರ್ ಅವರನ್ನು ಅಪ್ಪಿಕೊಳ್ಳುವ ಸಮಯ. ಗಂಧದ ಗುಡಿ, ಕರ್ನಾಟಕದ ಶ್ರೀಮಂತ ವನ್ಯಜೀವಿ ಮತ್ತು ಪರಂಪರೆಗೆ ಗೌರವವಾಗಿದೆ, ಅಕ್ಟೋಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ, ತಂಡಕ್ಕೆ ಶುಭ ಹಾರೈಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.

Published by:Annappa Achari
First published: