• Home
  • »
  • News
  • »
  • entertainment
  • »
  • Gandhadagudi: ಅಪ್ಪು ಅವರ ಇದೊಂದು ಡೈಲಾಗ್​ ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ, ಪುನೀತ್ ರಾಜ್​ಕುಮಾರ್​​ 'ವಿಶ್ವಮಾನವ'!

Gandhadagudi: ಅಪ್ಪು ಅವರ ಇದೊಂದು ಡೈಲಾಗ್​ ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ, ಪುನೀತ್ ರಾಜ್​ಕುಮಾರ್​​ 'ವಿಶ್ವಮಾನವ'!

ಗಂಧದ ಗುಡಿ

ಗಂಧದ ಗುಡಿ

ಅಪ್ಪು ನಮ್ಮೊಂದಿಗೆ ಇಲ್ಲ ಅನ್ನೋದನ್ನು ನೆನೆಸಿಕೊಂಡರೆ ಸಾಕು, ನಮಗೆ ಗೊತ್ತಿರದ ಹಾಗೇ ಕಣ್ಣಂಚಲ್ಲಿ ನೀರು ತುಂಬಿರುತ್ತೆ. ಸಿನಿಮಾ ನೋಡುವಾಗಲಂತೂ ಕೇಳಲೇ ಬೇಡಿ. ಅದರಲ್ಲೂ ಸಿನಿಮಾ ಮಧ್ಯೆ ಅಪ್ಪು ಹೇಳುವ ಒಂದು ಡೈಲಾಗ್​ ಮಾತ್ರ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತೆ.

  • News18 Kannada
  • Last Updated :
  • Karnataka, India
  • Share this:

ಗಂಧಧ ಗುಡಿ (Gandhadagudiಅಂದಕೂಡಲೇ ಥಟ್​ ಅಂತ ಅಣ್ಣಾವ್ರು ನೆನಪಾಗುತ್ತಿದ್ದರು. ಇದಾದ ಬಳಿಕ ಡಾ. ಶಿವರಾಜ್​ಕುಮಾರ್​ (Shivarajkumar) ಕೂಡ ಗಂಧದ ಗುಡಿ ಭಾಗ 2 ಸಿನಿಮಾದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳು ಯಾವ ಮಟ್ಟಕ್ಕೆ ಹಿಟ್​ ಆಯ್ತು ಎಂದು ಹೇಳಬೇಕಿಲ್ಲ. ಎಲ್ಲರಿಗೂ ಗೊತ್ತಿದೆ. ಆದರೆ ಪವರ್ ಸ್ಟಾರ್​, ದೊಡ್ಮನೆ ದೊರೆ, ಕರ್ನಾಟಕ ರತ್ನ, ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಪಾಲಿಗೆ ಗಂಧದ ಗುಡಿ ಎಂದರೆ ಬೇರೆಯದ್ದೇ ಪ್ರಪಂಚ. ಯಾಕೆಂದರೆ ಅಪ್ಪು ಗಂಧದ ಗುಡಿ ಸಿನಿಮಾದಲ್ಲಿ ನಟಿಸಿಲ್ಲ, ಜೀವಿಸಿದ್ದಾರೆ. ಎರಡು ವರ್ಷಗಳ ಕಾಲ ಕಾಡು ಮೇಡು ಅಲೆದು ಸಿನಿಮಾ ಮಾಡಿದ್ದರು. ಅಕ್ಟೋಬರ್​ 28 2020 ಈ ಗಂಧದ ಗುಡಿ ಸಿನಿಮಾ (Gandhada Gudi) ಕನಸು ಹೊತ್ತಿ ಅಪ್ಪು ಕರ್ನಾಟಕ ಸುತ್ತೋಕೆ ಹೊರಟಿದ್ದರು. ಕೊನೆಗೂ ಈ ಸಿನಿಮಾ ರಿಲೀಸ್ ಆಗಿ ಅಬ್ಬರಿಸುತ್ತಿದೆ.


ಗಂಧದ ಗುಡಿ ಸಿನಿಮಾ ಅಲ್ಲ, ಒಂದು ಸುಂದರ ಅನುಭವ!


ಅಪ್ಪು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿ ಅಕ್ಟೋಬರ್​ 28ಕ್ಕೆ ಒಂದು ವರ್ಷ ಆಗುತ್ತೆ. ಇನ್ನೂ ಕರುನಾಡಿನ ಪ್ರತಿ ಮನೆಯಲ್ಲೂ ಸೂತಕದ ಛಾಯೆ ಹಾಗೇ ಇದೆ. ಅಪ್ಪು ಒಂದು ವರ್ಷದ ಬಳಿಕ ತಾವಾಗಿ ಗಂಧದ ಗುಡಿ ಮೂಲಕ ದರ್ಶನ ಕೊಟ್ಟಿದ್ದಾರೆ. ಇದೇ ಕೊನೆ ಇನ್ನೇಂದೂ ಅಪ್ಪು ನಮ್ಮ ಮುಂದೆ ದೊಡ್ಡ ತೆರೆಯಲ್ಲಿ ಕಾಣಿಸಲ್ಲ ಅನ್ನೋ ದುಖಃ ಮಾತ್ರ ಎಲ್ಲರನ್ನೂ ಕಾಡುತ್ತಿದೆ. ಸಿನಿಮಾ ನೋಡಿದವರು ಕಣ್ಣೀರು ಹಾಕುತ್ತಾ ಹೊರಬಂದಿದ್ದಾರೆ.


ಗಂಧದ ಗುಡಿ ಸಿನಿಮಾದಲ್ಲಿ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ. ಇದು ಸಿನಿಮಾ ಅಲ್ಲ , ಒಂದು ಸುಂದರ ಅನುಭವ. ಆದರೆ, ಅಪ್ಪು ಅವರ ಅದೊಂದು ಡೈಲಾಗ್​ ಎಂಥವರನ್ನು ಕೂಡ ಕರಗಿಸಿಬಿಡುತ್ತೆ. ಅಳಬಾರದು ಅಂದುಕೊಂಡರು, ಬಿಕ್ಕಿ ಬಿಕ್ಕಿ ಅಳುವಂತೆ ಮಾಡುತ್ತೇ.


ಕಣ್ಣೀರು ತರಿಸುತ್ತೆ ಇದೊಂದು ಡೈಲಾಗ್!


ಅಪ್ಪು ನಮ್ಮೊಂದಿಗೆ ಇಲ್ಲ ಅನ್ನೋದನ್ನು ನೆನೆಸಿಕೊಂಡರೆ ಸಾಕು, ನಮಗೆ ಗೊತ್ತಿರದ ಹಾಗೇ ಕಣ್ಣಂಚಲ್ಲಿ ನೀರು ತುಂಬಿರುತ್ತೆ. ಸಿನಿಮಾ ನೋಡುವಾಗಲಂತೂ ಕೇಳಲೇ ಬೇಡಿ. ಅದರಲ್ಲೂ ಸಿನಿಮಾ ಮಧ್ಯೆ ಅಪ್ಪು ಹೇಳುವ ಒಂದು ಡೈಲಾಗ್​ ಮಾತ್ರ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತೆ.


"ನಿಮ್ಮನ್ನು ನಂಬಿಕೊಂಡು ಕಾಡಿಗೆ ಬಂದಿದ್ದೀನಿ, ಮೂರು ಸಿನಿಮಾ ಬೇರೆ ಒಪ್ಪಿಕೊಂಡಿದ್ದೀನಿ. ಮನೇಲಿ ಹೆಂಡ್ತಿ, ಮಕ್ಳು ಇದ್ದಾರೆ" ಅಂತ ಅಪ್ಪು ಅಮೋಘ ವರ್ಷ ಅವರ ಬಳಿ ಹೇಳುತ್ತಾರೆ. ಈ ಡೈಲಾಗ್​ ನಿಜಕ್ಕೂ ಸಿನಿಮಾ ನೋಡುತ್ತಿರುವವರ ಹೃದಯ ಕಿವುಚಿದಂತಾಗುತ್ತೆ.


ಇದನ್ನೂ ಓದಿ: ಹುಟ್ಟಿದ ಮೇಲೆ ಸಾಯಲೇಬೇಕು, ಸಾಯೋದ್ರೊಳಗೆ ಗಂಧದಗುಡಿ ನೋಡ್ಲೇಬೇಕು! ಪರಮಾತ್ಮನ ಸಾಹಸಕ್ಕೆ ಫ್ಯಾನ್ಸ್ ಫಿದಾ


ಅಪ್ಪು ಮಿಸ್​ ಯೂ ಎಂದ ಅಭಿಮಾನಿಗಳು! 


ಗಂಧದಗುಡಿ ಸಿನಿಮಾ  ಸುಮಾರು ಒಂದುವರೆ ಗಂಟೆಗಳ ಕಾಲ ಇದೆ. ಇಲ್ಲಿ ಪುನೀತ್ ಪವರ್ ಸ್ಟಾರ್ ಆಗಿಲ್ಲ, ಬದಲಾಗಿ ನಮ್ಮ ನಾಡಿನ ಪ್ರಾಣಿಸಂಕುಲ,ಜಲಚರ,ಬೆಟ್ಟ ಗುಡ್ಡ,ನದಿ,ಸಮುದ್ರಗಳ ಸೌಂದರ್ಯವನ್ನ ಪುಟ್ಟಮಗುವಿನಂತೆ ವೀಕ್ಷಿಸಿ ಆ ಖುಷಿಯ ಕ್ಷಣಗಳನ್ನ ನಮ್ಮೊಂದಿಗೆ ಶೇರ್ ಮಾಡುತ್ತಿದ್ದಾರೇನೋ ಅಂತ ಅನಿಸೋದು ಪಕ್ಕಾ. ಪುಟ್ಟ ವಯಸ್ಸಿನಲ್ಲಿ ಅಪ್ಪು ಅವರ ಮುಖದಲ್ಲಿದ್ದ ಮುಗ್ಧತೆ ಮತ್ತೆ ಈ ಗಂಧದ ಗುಡಿಯಲ್ಲಿ ಕಾಣಿಸಿದೆ.


ಇದನ್ನೂ ಓದಿ: ತಮ್ಮ ಊಟದ ತಟ್ಟೆಯನ್ನ ತಾವೇ ತೊಳೆಯುತ್ತಿದ್ದ ಅಪ್ಪು! ಇದು ಗಂಧದಗುಡಿಯ ಮಹಾನಾಯಕನ ಸರಳ ಜೀವನ


ಎಲ್ಲೆಲ್ಲೂ ಗಂಧದ ಗುಡಿಯ ಅಬ್ಬರ!


ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರು ಮಾತ್ರವಲ್ಲ, ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದಾರೆ. ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಗಂಧದಗುಡಿ ನೋಡಿ ಮನತುಂಬಿಕೊಂಡಿದ್ದಾರೆ. ವಿದೇಶದಲ್ಲಿ ಇರುವ ಅನಿವಾಸಿ ಕನ್ನಡಿಗರೂ ಗಂಧಗಗುಡಿ ಕಂಪಿಗೆ ಮಾರು ಹೋಗಿದ್ದಾರೆ.



ಗಂಧದಗುಡಿಯನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಪರಮಾತ್ಮನ ದರ್ಶನ ಮಾಡಿ, ಭಾವುಕರಾಗಿದ್ದಾರೆ. ಉತ್ತರ ಕನ್ನಡ, ಚಾಮರಾಜನರಗ ಸೇರಿದಂತೆ ದಟ್ಟಕಾಡಿನ ನಡುವೆ ಪವರ್ ಸ್ಟಾರ್ ಓಡಾಡುವ ಪರಿಗೆ ದಂಗಾಗಿದ್ದಾರೆ

Published by:ವಾಸುದೇವ್ ಎಂ
First published: